ಸುಳ್ಯ: ತಾಲೂಕು ಪತ್ರಕರ್ತರಸಂಘದ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಆರಂಭಗೊಂಡಿತು.
ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ ಸಿ ಜಯರಾಮ ಕಾರ್ಯಕ್ರಮ ಉದ್ಘಾಟಿಸಿದರು.
ಹೊಸದಿಗಂತ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ ಹಾಗೂ ತಹಶೀಲ್ದಾರ್ ಕುಂಞ್‌ಅಹಮ್ಮದ್ ಮುಖ್ಯ ಭಾಷಣ ಮಾಡಿದರು.
ಪ್ರಧಾನ ಭಾಷಣ ಮಾಡಿದ ಪ್ರಕಾಶ್ ಇಳಂತಿಲ, ಪತ್ರಿಕಾ ದಿನವು ಮಾಧ್ಯಮಲೋಕದ ಅವಲೋಕನದ ದಿನವಾಗಬೇಕು. ಧನಾತ್ಮಕ ಅಂಶಗಳ ಕಡೆ ಮಾಧ್ಯಮಗಳು, ಪತ್ರಕರ್ತರು ಗಮನಹರಿಸಬೇಕು ಎಂದರು.
ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಚಂದ್ರೇಶ್ ಗೋರಡ್ಕ, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಸುಳ್ಯ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ತೇಜೇಶ್ವರ ಕುಂದಲ್ಪಾಡಿ , ಸಂಘದ ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿ ಸತೀಶ್ ಹೊದ್ದೆಟ್ಟಿ ಉಪಸ್ಥಿತರಿದ್ದರು.
ಪತ್ರಕರ್ತರುಗಳಾದ ಗಂಗಾಧರ ಕಲ್ಲಪ್ಪಳ್ಳಿ ಸ್ವಾಗತಿಸಿ ದುರ್ಗಾಕುಮಾರ್ ನಾಯರ್ ಕೆರೆ ಪ್ರಸ್ತಾವನೆಗೈದರು.
ವಿಖ್ಯಾತ್ ಬಾರ್ಪಣೆ ನಿರೂಪಿಸಿದರು.