Advertisement
ಸುದ್ದಿಗಳು

ಸುಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ

Share

ಸುಳ್ಯ: ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರ ನೀಡಬೇಕು ಎಂಬ ನೆಲೆಯಲ್ಲಿ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಇಂದಿರಾ ಕ್ಯಾಂಟೀನ್ ಸುಳ್ಯ ತಾಲೂಕು ಕಚೇರಿ ಸಮೀಪ ಗುರುವಾರ ಕಾರ್ಯಾರಂಭ ಮಾಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಶಾಸಕ ಎಸ್.ಅಂಗಾರ ಮತ್ತು ಇತರ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು. ಬೆಳಗ್ಗೆ 7.30ರಿಂದ ರಾತ್ರಿ 8 ಗಂಟೆ ತನಕ ಕ್ಯಾಂಟೀನ್ ತೆರೆದಿರುತ್ತದೆ. 10 ರೂಗೆ ಊಟ ಮತ್ತು ಐದು ರೂಗೆ ಉಪಹಾರವನ್ನು ನೀಡಲಾಗುತ್ತದೆ. ಬೆಳಗ್ಗೆ 7.30ರಿಂದ 10ರ ತನಕ ಉಪಹಾರದ ಸಮಯ. ಇಡ್ಲಿ, ಸಾಂಬಾರ್, ರೈಸ್ ಬಾತ್, ವಾಂಗಿ ಬಾತ್ ಮತ್ತಿತರ ಉಪಹಾರ ಇರಲಿದೆ. ಮಧ್ಯಾಹ್ನ 12.30 ರಿಂದ 3 ಗಂಟೆ ವರೆಗೆ ಊಟದ ಸಮಯ ಅನ್ನ, ಸಾಂಬಾರ್, ಪಲ್ಯ, ಉಪ್ಪಿನ ಕಾಯಿ ಮೆನು ಇರಲಿದೆ. ಸಂಜೆ 5.30 ರಿಂದ 8 ಗಂಟೆ ತನಕ ಸಂಜೆಯ ಉಪಹಾರದ ಸಮಯ ರೈಸ್ ಬಾತ್, ವಾಂಗಿ ಬಾತ್ ಪುಳಿಯೊಗರೆ ಮತ್ತಿತರ ರೈಸ್ ಐಟಂ ಇರಲಿದೆ ಎಂದು ಇಂದಿರಾ ಕ್ಯಾಂಟೀನ್‍ನ ವ್ಯವಸ್ಥಾಪಕ ಕ್ಯಾಪ್ಟನ್ ಗೌರಿ ಶಂಕರ ಪ್ರಸಾದ್ ತಿಳಿಸಿದ್ದಾರೆ. ಗುರುವಾರದಿಂದಲೇ ಕ್ಯಾಂಟೀನ್‍ನಲ್ಲಿ ಊಟ ಮತ್ತು ಉಪಹಾರ ವಿತರಣೆ ಆರಂಭಗೊಂಡಿದೆ. ಉದ್ಘಾಟನೆ ಪ್ರಯುಕ್ತ ನಿನ್ನೆ ಬೆಳಗ್ಗೆ ಉಪಹಾರವನ್ನು ಎಲ್ಲರಿಗೂ ಉಚಿತವಾಗಿ ನೀಡಲಾಯತು. ಬಳಿಕ ಕ್ಯಾಂಟೀನ್‍ನಲ್ಲಿ ವ್ಯಾಪಾರ ಆರಂಭಗೊಂಡಿದೆ.

ವಾರದ ಎಲ್ಲಾ ದಿನವೂ ಕ್ಯಾಂಟೀನ್ ಕಾರ್ಯಾಚರಿಸಲಿದೆ. ಪಾರ್ಸೆಲ್ ನೀಡುವುದಿಲ್ಲ. ಆಸ್ಪತ್ರೆಗಗಳ ಒಳ ರೋಗಿಗಳಿಗೆ ಮಾತ್ರ ಪಾತ್ರ ತಂದಲ್ಲಿ ಊಟ ಉಪಹಾರವನ್ನು ಪಾರ್ಸೆಲ್ ನೀಡಲಾಗುವುದು ಎಂದು ಜಿ.ಎಸ್.ಪ್ರಸಾದ್ ತಿಳಿಸಿದರು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

7 hours ago

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

2 days ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

2 days ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

2 days ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

2 days ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago