ಸುಳ್ಯದಲ್ಲಿ ಎಬಿವಿಪಿ ಅಭ್ಯಾಸ ವರ್ಗ

September 9, 2019
10:00 AM

ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ನಗರ ಅಭ್ಯಾಸ ವರ್ಗವು ಸುಳ್ಯ ಎ. ಪಿ. ಎಂ. ಸಿ ಸಭಾಂಗಣದಲ್ಲಿ ನಡೆಯಿತು. ಅಭ್ಯಾಸವರ್ಗವನ್ನು ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯಶೋಧ ರಾಮಚಂದ್ರ ಉದ್ಘಾಟಿಸಿದರು.

Advertisement
Advertisement

ಬಳಿಕ ಮಾತನಾಡಿ, ರಾಷ್ಟ್ರೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ ಪರಿಷತ್ ಒಂದಿಂಚೂ ತನ್ನ ಸಿದ್ದಾಂತವನ್ನು ಬದಲಿಸದೆ 70 ವರ್ಷದಿಂದ ದೇಶದೆಲ್ಲೆಡೆ ವಿದ್ಯಾರ್ಥಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.

Advertisement

ವೇದಿಕೆಯಲ್ಲಿ , ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಇದರ ಅಧ್ಯಕ್ಷರಾದ ಕುಲದೀಪ್ ಪೆಲ್ತಡ್ಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ವಿಭಾಗ ಪ್ರಮುಖರು ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಕೇಶವ ಬಂಗೇರ ಮತ್ತು ನಗರ ಕಾರ್ಯದರ್ಶಿ ಧನ್ಯರಾಜ್ ಕಾಪುಮಲೆ ಉಪಸ್ಥಿತರಿದ್ದರು.

ವರ್ಗದ ಮೊದಲ ಅವಧಿ ಸೈದ್ಧಾಂತಿಕ ಭೂಮಿಕೆ ಯ ವಿಚಾರವಾಗಿ ಕೇಶವ ಬಂಗೇರ  ಮಾತನಾಡಿದರು. ಬಳಿಕ ಅನೌಪಚಾರಿಕ ಬೈಠಕ್ ನ್ನು ಕಿಶನ್ ಜಬಳೆ ನಡೆಸಿದರು.
ಕಾರ್ಯ ಪದ್ದತಿ ಅವಧಿಯನ್ನು ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ನಡೆಸಿದರು. ವಿಶೇಷ ಭಾಷಣವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಆಡಳಿತಾಧಿಕಾರಿಯಾದ ವೆಂಕಟೇಶ್  ನಡೆಸಿಕೊಟ್ಟರು.ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವ, ಪ್ರಶಿಕ್ಷಣ ಅವಧಿಯನ್ನು ವಿವೇಕಾನಂದ ಕಾಲೇಜಿ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಮತ್ತು ಪುತ್ತೂರು ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್  ತೇಜಶ್ರೀ ವೆಂಕಟೇಶ್ ಇವರು ನಡೆಸಿಕೊಟ್ಟರು.

Advertisement

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಿಂದಿ ಶಿಕ್ಷಕಿ  ನಳಿನಾಕ್ಷಿ ಕಲ್ಮಡ್ಕ ಮಾತನಾಡಿ ರಾಷ್ಟ್ರೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಇಂತಹ ಸಂಘಟನೆಗಳು ಬಹು ಪೂರಕ ಎಂದು ಹೇಳಿದರು.

Advertisement

ವೇದಿಕೆಯಲ್ಲಿ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಪುತ್ತೂರು ಜಿಲ್ಲಾ ಸಂಚಾಲಕ ಮಂಜುನಾಥ್ ಕುಕ್ಕೆ ಸುಬ್ರಹ್ಮಣ್ಯ ಮತ್ತು ಸುಳ್ಯ ನಗರ ಕಾರ್ಯದರ್ಶಿ ಧನ್ಯರಾಜ್ ಕಾಪುಮಲೆ ಉಪಸ್ಥಿತರಿದ್ದರು. ನಂತರ ಸುಳ್ಯ ನಗರದ 2019-20 ನೇ ನೂತನ ಕಾರ್ಯಕಾರಣಿಯನ್ನು ಘೋಷಿಸಲಾಯಿತು.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು – ಈ ಬಾರಿ ಆನೆಗಳ ಸಂಖ್ಯೆ ಏರಲಿದೆಯಾ..?
May 16, 2024
2:00 PM
by: The Rural Mirror ಸುದ್ದಿಜಾಲ
Karnataka Weather |16-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಮೇ 17 ರಿಂದ ಉತ್ತಮ ಮಳೆ ಸಾಧ್ಯತೆ |
May 16, 2024
1:58 PM
by: ಸಾಯಿಶೇಖರ್ ಕರಿಕಳ
ಮಳೆ ಸುರಿಯುತ್ತಿದ್ದಂತೆ ರಾಜ್ಯದಲ್ಲಿ ಡೆಂಘೀ ಭೀತಿ : ಮುಂಜಾಗ್ರತಾ ಕ್ರಮಕ್ಕೆ ಮುಂದಾದ ರಾಜ್ಯ ಆರೋಗ್ಯ ಇಲಾಖೆ
May 15, 2024
11:31 PM
by: The Rural Mirror ಸುದ್ದಿಜಾಲ
ನಮ್ಮ ಪ್ರಧಾನಿಯ ಆಸ್ತಿ ಎಷ್ಟು ಗೊತ್ತಾ..? ಅವರಿಗೆ ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ : ಬರೀ 3.02ಕೋಟಿ ಚರಾಸ್ತಿ
May 15, 2024
11:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror