ಸುಳ್ಯದಲ್ಲಿ ಕಳ್ಳನ ಕರಾಮತ್ತು : ನೋಟು ನೋಡಲು ಕೇಳಿ ಎಗರಿಸಿದ…!

September 3, 2019
8:59 PM

ಸುಳ್ಯ: ಇರಾನಿ ಮೂಲದನು ಎನ್ನಲಾದ ವ್ಯಕ್ತಿಯೊಬ್ಬ ಸುಳ್ಯದಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿ ಮಾಲಕರ ಹಣ ನಾಜೂಕಿನಿಂದ ಎಗರಿಸಿದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಸುಳ್ಯದ ಗಾಂಧಿನಗರದ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದಕ್ಕೆ ಮಧ್ಯಾಹ್ನದ ಹೊತ್ತಿಗೆ ಇರಾನ್ ಮೂಲದ ವ್ಯಕ್ತಿಗಳು ಎನ್ನುತ್ತಾ ಆಗಮಿಸಿ ನಮ್ಮಲ್ಲಿ ಇರುವ ಇಸ್ತ್ರಿ ಪೆಟ್ಟಿಗೆ ಬದಲಾಯಿಸಿ ಮಿಕ್ಸಿ ಕೊಡುತ್ತೀರಾ ಎಂದು ವಿಚಾರಿಸಿಕೊಂಡು ಬಂದಿದ್ದರು. ನಂತರ ಭಾರತದ ದೊಡ್ಡ ನೋಟು ಯಾವುದು ಎಂದು  ಅಂಗಡಿ ಮಾಲಕರ ಬಳಿ ಆತ್ಮೀಯವಾಗಿ ಮಾತನಾಡುತ್ತಾ ಅಂಗಡಿ ಮಾಲಕರ ಬಳಿ ಇದ್ದ ನೋಟುಗಳನ್ನು ನೋಡುತ್ತಲೇ ಮಾಲಕರಿಗೆ ತಿಳಿಯಂತೆ ನೋಟುಗಳನ್ನು  ಎಗರಿಸಿದರು. 2000, 500 ಹೀಗೇ ಎಲ್ಲಾ ಬಗೆಯ ನೋಟುಗಳನ್ನು ವೀಕ್ಷಣೆ ಮಾಡುತ್ತಾ ಜೇಬಿಗೆ ನಾಜೂಕಾಗಿ ತುಂಬಿದರು. ವ್ಯಾಪಾರ ನಡೆಯದೆ ಬಳಿಕ ಹಿಂತಿರುಗಿದರು. ನಂತರ ಅಂಗಡಿ ಮಾಲಕರು ಹಣ ಎಣಿಸಿದಾಗ 33 ಸಾವಿರದಷ್ಟು ಹಣ ನಾಪತ್ತೆಯಾಗಿತ್ತು. ತಕ್ಷಣವೇ ಸಿಸಿ ಕ್ಯಾಮಾರದ ಮೂಲಕ ವಿಡಿಯೋ ಗಮನಿಸಿದಾಗ ಹಣ ಎಗರಿಸಿದ ಬಗ್ಗೆ ತಿಳಿದಿದೆ. ಈ ಸಂಬಂಧವಾಗಿ ಇದುವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗುಟ್ಕಾ ಪ್ರಕರಣಗಳಲ್ಲಿ ಎಂಸಿಒಸಿಎ ಜಾರಿ ಪ್ರಶ್ನಿಸಿದ ಬಾಂಬೆ ಹೈಕೋರ್ಟ್ – ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೋರಿದ ಕೋರ್ಟ್
July 9, 2026
9:28 PM
by: ದ ರೂರಲ್ ಮಿರರ್.ಕಾಂ
ಗುಟ್ಕಾ ಜಾಲಕ್ಕೆ ಮಹಾರಾಷ್ಟ್ರದ ಭಾರೀ ಹೊಡೆತ..! 700ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲು – ಕಳಪೆ ಅಡಿಕೆ ಸಾಗಾಟವೂ ಈ ವ್ಯಾಪ್ತಿಯಲ್ಲಿ..!
July 9, 2026
9:12 PM
by: ಮಿರರ್‌ ಡೆಸ್ಕ್‌
ಮಂಗಳೂರಿನಲ್ಲಿ ಉದ್ಯೋಗ ಮೇಳ – ಜುಲೈ 14ರಂದು ನೇರ ಸಂದರ್ಶನ – ಬ್ಯಾಂಕ್‌ನಿಂದ ಟೆಕ್ನಿಕಲ್‌ ಹುದ್ದೆಗಳವರೆಗೆ ಅವಕಾಶ
July 9, 2026
8:51 PM
by: ದ ರೂರಲ್ ಮಿರರ್.ಕಾಂ
ಆಘಾತಕಾರಿ ವರದಿ- ಮೇ-ಜೂನ್‌ನಲ್ಲಿ ಭಾರತದ 10 ಮಕ್ಕಳಲ್ಲಿ 7 ಮಂದಿ ಶಾಲೆ ತಪ್ಪಿಸಿದರು..!
July 9, 2026
2:37 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror