ಸುಳ್ಯ : ಪ್ರಕೃತಿಯೇ ನಮಗೆ ಗುರು .ಆದರಿಂದ ನಾವು ಅನೇಕ ಪಾಠಕಲಿಯಬಹುದು.ಕಾಗೆ ಆಹಾರ ಕಂಡೊಡನೆ ತನ್ನೆಲ್ಲ ಬಳಗವನ್ನು ಕರೆಯುವ ಸಂಘಟನೆಯ ಪಾಠ . ಇರುವೆಯಿಂದ ಶಿಸ್ತು. ನಾಯಿಂದ ನಿಷ್ಠೆ ಹೀಗೆ ಹತ್ತಾರು ಮೌಲ್ಯಗಳು ಪ್ರಕೃತಿ ನೀಡುತ್ತಿದೆ . ಜಗತ್ತಿಗೆ ವೇದ, ಯೋಗ, ಜ್ಞಾನ, ತಂತ್ರಜ್ಞಾನವನ್ನು ಪರಿಚಯಿಸಿದ ದೇಶ ಭಾರತ ಎಂದು ಮಂಗಳೂರು ವಿಭಾಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೌದ್ಧಿಕ್ ಪ್ರಮುಖ್ ರಾಜೇಶ್ ಯಂ. ತಿಳಿಸಿದರು.
ಅವರು ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸುಳ್ಯ ನಗರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ನಡೆದ ಶ್ರೀಗುರು ಪೂಜಾ ಉತ್ಸವದಲ್ಲಿ ಬೌದ್ಧಿಕ್ ನೀಡಿದರು.
ಸಭಾಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ವಿ.ದಾಮೋದರ ಗೌಡ ವಹಿಸಿ, ವಿವೇಕವಿಲ್ಲದ ಜ್ಞಾನ ಸಮಾಜಕ್ಕೆ ಅಪಾಯಕಾರಿ ಹೆಚ್ಚು ಹೆಚ್ಚು ಕಲಿತಂತೆ ನಮ್ಮಲ್ಲಿ ಆಂತರಿಕ ಪರಿವರ್ತನೆಯಾಗಿ ಕಲಿತ ವಿದ್ಯೆ ಸಾರ್ಥಕಗೊಳ್ಳಬೇಕು. ಗುರು ಪೂರ್ಣಿಮೆ ಗುರು ಶಿಷ್ಯರ ಅನುಸಂಧಾನ ಎಂದರು.
ಸುಳ್ಯ ತಾಲೂಕು ಸಂಘಚಾಲಕ ಚಂದ್ರಶೇಖರ ತಳೂರು ವೇದಿಕೆಯಲ್ಲಿದ್ದರು. ನೂರಾರು ಸ್ವಯಂಸೇವಕರು ಭಾಗವಹಿಸಿ ಗುರುವಂದನೆ ಸಲ್ಲಿಸಿದರು. ಸತೀಶ ಕಾಟೂರು, ರಾಜೇಶ್ ಮೇನಾಲ, ಸುದರ್ಶನ ಸೂರ್ತಿಲ ಮೊದಲಾದವರು ಸಹಕರಿಸಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.