ಸುಳ್ಯದಲ್ಲಿ ಪ್ಲಾಸ್ಟಿಕ್ ನಿಷೇಧದ ಹೆಜ್ಜೆ….. ಕೈಜೋಡಿಸೋಣ ಬನ್ನಿ…., ಏಕೆಂದರೆ…..?

July 31, 2019
8:00 AM

ಸುಳ್ಯದಲ್ಲಿ ಪ್ಲಾಸ್ಟಿಕ್ ನಿಷೇಧದ ಹೆಜ್ಜೆ ಇರಿಸಲಾಗಿದೆ. ಈ ಸಂದರ್ಭ ಎಲ್ಲರದೂ ಒಂದೇ ಪ್ರಶ್ನೆ, ಪ್ಲಾಸ್ಟಿಕ್ ಇಲ್ಲದೆ ಇದ್ದರೆ ಹೇಗೆ ?.  ತುರ್ತಾಗಿ ದಿನಸಿ ವಸ್ತುಗಳನ್ನು  ಕೊಂಡೊಯ್ಯುವುದು  ಹೇಗೆ ಇತ್ಯಾದಿ ಪ್ರಶ್ನೆಗಳು ಮುಂದೆ ಬರುತ್ತವೆ. ಭವಿಷ್ಯದ ದೃಷ್ಟಿಯಿಂದ ಈ ಎಲ್ಲಾ ಪ್ರಶ್ನೆಗಳನ್ನು ಬದಿಗೊತ್ತಿ, ಆಡಳಿತದ ಜೊತೆ ನಾವೇ ಸಹಕಾರ ಮಾಡಬೇಕಿದೆ. ಏಕೆಂದರೆ ಪ್ಲಾಸ್ಟಿಕ್ ಇಂದು ಬಹುದೊಡ್ಡ ಸಮಸ್ಯೆಯ ವಸ್ತುವಾಗಿದೆ. ಹೀಗಾಗಿ ಪ್ರಶ್ನೆಗಳಲ್ಲ, ಇಂದು ಉತ್ತರ ಹುಡುಕಬೇಕಿದೆ. ಈ ಕಾರಣದಿಂದ ಆ.15 ರಿಂದ ಸುಳ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿ ಬರುತ್ತದೆ, ಇದು ಪ್ಲಾಸ್ಟಿಕ್ ನಿಂದ ನಮ್ಮ ಪರಿಸರಕ್ಕೆ ಸ್ವಾತಂತ್ರ್ಯ ಎಂದು ಅಂದುಕೊಳ್ಳೋಣ…. 

Advertisement
Advertisement

 

Advertisement

ಈಚೆಗೆ ಸುಳ್ಯ ನಗರಪಂಚಾಯತ್ ಪ್ರದೇಶದಲ್ಲಿ ಕಸಗಳ ರಾಶಿ ಇತ್ತು. ಇದರಲ್ಲಿ ಬಹುಪಾಲು ಕಂಡುಬಂದದ್ದು ಪ್ಲಾಸ್ಟಿಕ್ ತ್ಯಾಜ್ಯ. ಇದರ ವಿಲೇವಾರಿ ಆಗಿಲ್ಲವೆಂದು ಅಧಿಕಾರಿಗಳನ್ನು  ತರಾಟೆಗೆ ತೆಗೆದುಕೊಂಡದ್ದೂ ಆಗಿತ್ತು. ಸುಮ್ಮನೆ ಗಮನಿಸಿ . ಅಧಿಕಾರಿಗಳಾದರೂ ಈ ಕಸವನ್ನು ಏನು ಮಾಡಬೇಕು ? ಎಲ್ಲಿ ಹಾಕಿಸಬೇಕು? ಏಕೆಂದರೆ ಅದೆಲ್ಲವೂ ಪ್ಲಾಸ್ಟಿಕ್..!. ನಾವು ಎಸೆದು ಬಿಟ್ಟಿರುವ ಪ್ಲಾಸ್ಟಿಕ್ ಅಧಿಕಾರಿಗಳಿಗೆ, ಆಡಳಿತಕ್ಕೆ ತಲೆನೋವಿನ ಸಂಗತಿ…!, “ಎಲ್ಲೆಲ್ಲೂ ಪ್ಲಾಸ್ಟಿಕ್” ಎಂದು  ನಮಗೆ ಟೀಕೆಯ ವಿಷಯ…!

ಸುಮ್ಮನೆ ಗಮನಿಸಿ,

Advertisement

ಈಗಾಗಲೇ ಕಲ್ಚರ್ಪೆಯಲ್ಲಿ  ಕಸದ ರಾಶಿ ಇದೆ. ಅಲ್ಲೂ ಬಹುಪಾಲು ಪ್ಲಾಸ್ಟಿಕ್ ಇದೆ. ಎಷ್ಟೇ ವರ್ಷವಾದರೂ ಈ ತ್ಯಾಜ್ಯ ಕಡಿಮೆಯಾಗದು. ಮತ್ತೆ ಮತ್ತೆ ಕಸದ ರಾಶಿ ಹೆಚ್ಚುತ್ತಲೇ ಇದೆ.  ಸದ್ಯ ಕಲ್ಚರ್ಪೆಗೆ ಕಸ ಸಾಗಿಸಲಾಗದ ಸ್ಥಿತಿ ಇದೆ. ಅಲ್ಲಿನ ತ್ಯಾಜ್ಯ ಬೇರೆಡೆಗೆ ವರ್ಗಾವಣೆ ಮಾಡಲೂ ಆಗದ ಸಮಸ್ಯೆ. ಈಗಾಗಲೇ ಹಸಿ ಕಸ ಗೊಬ್ಬರವಾಗುತ್ತದೆ.  ಒಣಕಸದಲ್ಲಿ ಬಹುಪಾಲು ಪ್ಲಾಸ್ಟಿಕ್ ಆವರಿಸಿಕೊಂಡಿದೆ. ಇದಕ್ಕೇನು ಪರಿಹಾರ ಎಂಬುದಕ್ಕೆ ಉತ್ತರವೇ ಇಲ್ಲ.  ಹೀಗಾಗಿ ಸಾಮಾಜಿಕ ಹಿತದೃಷ್ಠಿಯಿಂದ ಆಡಳಿತವು ದಿಟ್ಟ ನಿರ್ಧಾರ ಕೈಗೊಂಡಿದೆ. ಇದಕ್ಕೆ ನಾವೆಲ್ಲರೂ ಕೈ ಜೋಡಿಸಲೇಬೇಕಿದೆ. ಏಕೆಂದರೆ ಭವಿಷ್ಯದ ದೃಷ್ಠಿಯಿಂದ, ಪರಿಸರ ಉಳಿವಿಗಾಗಿ, ಹಸಿರು ಹಸಿರು ಭೂಮಿಯನ್ನು ಕಾಣುವುದಕ್ಕಾಗಿ….

ಇದೆಲ್ಲಾ ಸಾಧ್ಯವಾ ಅಂತ ಪ್ರಶ್ನೆ ಮಾಡಬೇಡಿ, ನೆಗೆಟಿವ್ ಆಗಿ ಚಿಂತಿಸಬೇಡಿ, ಬದಲಾಗಿ ಇದನ್ನು ಹೇಗೆ ಜಾರಿ ಮಾಡಬಹುದು ಎಂದು ಯೋಚಿಸಿ, ಸಲಹೆ ನೀಡಿ. ವಾಟ್ಸಪ್ ಮೂಲಕ ಬರೆಯಿರಿ , ನಿಮ್ಮ ಹೆಸರು, ವಿಳಾಸದ ಜೊತೆ ನಿಮ್ಮ ಒಂದು ಫೋಟೊ ನಮ್ಮ ಸಂಖ್ಯೆಗೆ ಕಳುಹಿಸಿ. ಸುಳ್ಯನ್ಯೂಸ್.ಕಾಂ ಅದನ್ನು ಪ್ರಕಟಿಸಿ ಆಡಳಿತದ, ಸಾಮಾಜಿಕ ಕಾರ್ಯಕರ್ತ ಗಮನಕ್ಕೂ ತರಲು ಬಯಸುತ್ತದೆ.

Advertisement

ಆಗಸ್ಟ್ 15ರಿಂದ ಸುಳ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿ:

 

Advertisement

 

ಆಗಸ್ಟ್ 15 ರಿಂದ ಸುಳ್ಯ ನಗರದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಜಾರಿಗೆ ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞೆ ಅಹಮ್ಮದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ಆರಂಭದಲ್ಲಿ ಸುಳ್ಯ ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡಲಾಗುವುದು ಬಳಿಕ ಸುಳ್ಯ ತಾಲೂಕಿಗೆ ಪ್ಲಾಸ್ಟಿಕ್ ಮುಕ್ತ ಆಂದೋಲನವನ್ನು ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಕುರಿತು ವರ್ತಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆ.7 ರಂದು ಸುಳ್ಯ ನಗರದ ಹಳೆಗೇಟ್‍ನಿಂದ ಗಾಂಧೀನಗರದ ವರೆಗೆ ಜಾಗೃತಿ ಜಾಥಾ ನಡೆಸಲಾಗುವುದು. ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಮತ್ತು ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಲಾಗುವುದು. ಒಂದು ವಾರಗಳ ಕಾಲ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಆಗಸ್ಟ್ 15 ರ ಬಳಿಕ ಪ್ಲಾಸ್ಟಿಕ್ ಮಾರಾಟ ಕಂಡು ಬಂದರೆ ಅಂಗಡಿ ಮಾಲಕರ ಮೇಲೆ ಮತ್ತು ಪ್ಲಾಸ್ಟಿಕ್ ಬಳಕೆ ಮಾಡುವವವರ ಮೇಲೆ ದಂಡ ವಿಧಿಸಲು ನಿರ್ಧರಿಸಲಾಯಿತು. ಪ್ಲಾಸ್ಟಿಕ್ ನಿಷೇಧವನ್ನು ಖಡ್ಡಾಯವಾಗಿ ಜಾರಿ ಮಾಡಲಾಗುದು ಎಂದು ಕುಂಞ ಅಹಮ್ಮದ್ ಹೇಳಿದರು. ಜಾಗೃತಿ ಕಾರ್ಯಕ್ರಮದಲ್ಲಿ ವಾಣೀಜ್ಯ ಮತ್ತು ವರ್ತಕರ ಸಂಘದವರು, ನಗರ ಪಂಚಾಯತ್ ಸದಸ್ಯರನ್ನು, ವಿವಿಧ ಇಲಾಖೆಗಳು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು, ಸಂಘ ಸಂಸ್ಥೆಗಳನ್ನು ಸೇರಿಸಿಕೊಳ್ಳಲಾಗುವುದು.

ಪ್ಲಾಸ್ಟಿಕ್ ನಿಷೇಧ ಮಾಡುವ ಮುನ್ನ ಪರ್ಯಾಯ ಕೈ ಚೀಲದ ವ್ಯವಸ್ಥೆ ಮಾಡಬೇಕು ಎಂದು ಕೆ.ಎಲ್.ಪ್ರದೀಪ್‍ಕುಮಾರ್, ಅಶೋಕ್ ಎಡಮಲೆ ಮತ್ತಿತರರು ಸಲಹೆ ನೀಡಿದರು. ಬಟ್ಟೆಯ ಕೈಚೀಲ, ಪೇಪರ್ ಬ್ಯಾಗ್‍ಗಳ ಬಳಕೆಗೆ ಒತ್ತು ನೀಡಲು ನಿರ್ಧರಿಸಲಾಯಿತು. ವರ್ತಕರ ಸಂಘದ ವತಿಯಿಂದ ಪ್ಲಾಸ್ಟಿಕ್ ನಿಷೇಧ ಜಾರಿಗೆ ಪೂರ್ಣ ಸಹಕಾರ ನೀಡಲಾಗುವುದು ಎಂದು ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಹೇಳಿದರು. ನಗರ ಪಂಚಾಯತ್ ವೈಫಲ್ಯದಿಂದ ನಗರದ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಿದೆ ಎಂದು ಅವರು ಹೇಳಿದರು.
ನಗರ ಪಂಚಾಯತ್ ಮುಂಭಾಗದ ಕಟ್ಡದಲ್ಲಿ ರಾಶಿ ಬಿದ್ದಿರುವ ಕಸವನ್ನು ವಿಲೇವಾರಿ ಮಾಡಲು ಮತ್ತು ಕಲ್ಚರ್ಪೆಯಲ್ಲಿ ತುಂಬಿ ತುಳುಕಿರುವ ಕಸದ ವಿಲೇವಾರಿಗೆ ವಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಹೇಳಿದರು.

Advertisement

ನಗರ ಪಂಚಾಯತ್ ಸದಸ್ಯರಾದ ಸುಧಾಕರ, ಶಿಲ್ಪಾ ಸುದೇವ್, ಪ್ರಮುಖರಾದ ಗಣೇಶ್ ಭಟ್, ಅಬ್ದುಲ್ ಹಮೀದ್ ಜನತಾ, ಡಿ.ಎಸ್.ಗಿರೀಶ್, ಕೆ.ಆರ್.ಮನಮೋಹನ, ವಿನೋದ್ ಲಸ್ರಾದೋ, ಸುಂದರ ರಾವ್, ಲೋಕೇಶ್ ಕೆರೆಮೂಲೆ, ಲೋಕೇಶ್ ಗುಡ್ಡಮನೆ, ಶರತ್ ಪರಿವಾರ, ಸುಂದರ ಪಾಟಾಜೆ, ನಗರ ಪಂಚಾಯತ್ ಆರೋಗ್ಯಾಧಿಕಾರಿ ರವಿಕೃಷ್ಣ, ಶಿಕ್ಷಣ ಇಲಾಖೆಯ ಚಂದ್ರಶೇಖರ್ ಮತ್ತಿತರರು ಸಲಹೆ ಸೂಚನೆ ನೀಡಿದರು.

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಏರಿದ ತಾಪಮಾನ : ರಾಜ್ಯದಲ್ಲಿ ಇಂದಿನಿಂದ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!
April 25, 2024
11:01 PM
by: The Rural Mirror ಸುದ್ದಿಜಾಲ
ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |
April 25, 2024
3:13 PM
by: The Rural Mirror ಸುದ್ದಿಜಾಲ
ಬರಗಾಲದ ಪರಿಣಾಮ | ತರಕಾರಿ ಬೆಲೆ ಏರಿಕೆಯ ಬಿಸಿ | ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ…. ಎಲ್ಲವೂ ದರ ಏರಿಕೆ |.
April 25, 2024
2:39 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror