ಸುಳ್ಯ: ಸ್ವಚ್ಛ ಸುಳ್ಯ ತಂಡ ಮತ್ತು ಹೈ ಟೊರ್ಕ್ ಮೊಟೊ ಕ್ರೆವ್ ಗ್ರೂಪ್ ಸಹಭಾಗಿತ್ವದಲ್ಲಿ ನಗರದ ಪ್ಲಾಸ್ಟಿಕ್ ತ್ಯಾಜ್ಯವನ್ನು ಶೋಧಿಸಿ ವಿಲೇವಾರಿ ಮಾಡುವ ವಿಭಿನ್ನ ರೀತಿಯ ಪ್ಲಾಸ್ಟಿಕ್ ನಿರ್ಮೂಲನಾ ಜಾಥಾ ಸುಳ್ಯ ನಗರದಲ್ಲಿ ನಡೆಯಿತು.
ಚೆನ್ನಕೇಶವ ದೇವಾಲಯದ ಆವರಣದಿಂದ ಆರಂಭಗೊಂಡ ದ್ವಿಚಕ್ರ ವಾಹನ ಜಾಥಾಕ್ಕೆ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಚಾಲನೆ ನೀಡಿದರು. ಸುಮಾರು 50 ಕ್ಕಿಂತ ಹೆಚ್ಚಿನ ಬೈಕ್ ಸವಾರರು ಸುಳ್ಯ ನಗರದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ದಾರಿಯುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ತಂದು ವಿಲೇವಾರಿ ಮಾಡುವ ಮೂಲಕ ಜನರಲ್ಲಿ ಮುಂದೆ ಪ್ಲಾಸ್ಟಿಕ್ ಉಪಯೋಗಿಸಬೇಡಿ ಎಂದು ಜಾಗೃತಿ ಮೂಡಿಸುವ ವಿಭಿನ್ನ ರೀತಿಯ ಚಳುವಳಿ ಇದಾಗಿತ್ತು. ಸುಳ್ಯ ನಗರದಲ್ಲಿ ಆ.15 ರಿಂದ ಸುಳ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ಬರಲಿದ್ದು ಈ ಹಿನ್ನಲೆಯಲ್ಲಿ
ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಪರಿಸರ ಹಾನಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚೆನ್ನಕೇಶವ ದೇವಸ್ಥಾನದಿಂದ ಪ್ರಾರಂಭಗೊಂಡು, ಸುಳ್ಯ ನಗರದಾದ್ಯಂತ ಸಂಚರಿಸಿ ಪ್ಲಾಸ್ಟಿಕ್ ಕಸ ಸಂಗ್ರಹಿಸಲಾಯಿತು.
ಸುಳ್ಯ ಎಸ್ಐ ಎಂ.ಆರ್.ಹರೀಶ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸ್ವಚ್ಛ ನಗರ ಸುಳ್ಯ ತಂಡದ ವಿನೋದ್ ಲಸ್ರಾದೋ, ಲೋಕೇಶ್ ಗುಡ್ಡೆಮನೆ, ಡಿ.ಎಸ್. ಗಿರೀಶ್, ಕೆ.ಆರ್. ಮನಮೋಹನ್, ಸುಂದರ ರಾವ್, ನ.ಪಂ. ಸದಸ್ಯರಾದ ಶರೀಪ್ ಕಂಠಿ, ಬುದ್ಧ ನಾಯ್ಕ, ರೋಟರಿ ಕ್ಲಬ್‌ನ ರಾಮಚಂದ್ರ ಪಿ, ಡಿ.ಎಂ.ಶಾರೀಖ್, ನ.ಪಂ. ಆರೋಗ್ಯಾಧಿಕಾರಿ ರವಿಕೃಷ್ಣ, ಯುವ ಬ್ರಿಗೇಡ್‌ನ ಶರತ್ ಪರಿವಾರ್, ಹೈ ಟೊರ್ಕ್ ಮೊಟೊ ಕ್ರೆವ್ ಗ್ರೂಪ್‌ನ ಮಯೂರ್, ಕೌಶಲ್, ದೀಕ್ಷಿತ್ ರಾವ್, ಸಂಪ್ರೀತ್, ಸಚಿನ್, ಸನತ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…