ಸುಳ್ಯ: ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಗಾಂಧಿ ಸಂಕಲ್ಪ ಯಾತ್ರೆ ನಡೆಯಿತು. ಸುಳ್ಯದ ಪೈಚಾರ್ ಮತ್ತು ಅರಂಬೂರಿನಿಂದ ಏಕ ಕಾಲದಲ್ಲಿ ಗಾಂಧಿ ಸಂಕಲ್ಪ ಪಾದಯಾತ್ರೆ ಆರಂಭಗೊಂಡಿತು.
ಶಾಸಕ ಎಸ್.ಅಂಗಾರ ಪೈಚಾರ್ ನಲ್ಲಿ ಗಾಂಧಿ ಯಾತ್ರೆಗೆ ಚಾಲನೆ ನೀಡಿದರು. ಎರಡೂ ಕಡೆಯಿಂದ ಪಾದಯಾತ್ರೆ ನಗರದ ರಥಬೀದಿಯಲ್ಲಿ ಸಂಗಮಿಸಿ ಕೇರ್ಪಳದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಸಮಾಪನಗೊಂಡಿತು. ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಗಾಂಧಿ ಟೋಪಿ ಧರಿಸಿ ರಾಷ್ಟ್ರ ಧ್ವಜ ಹಿಡಿದು ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಬಿಜೆಪಿ ವತಿಯಿಂದ ರಾಷ್ಟ್ರದಾದ್ಯಂತ ನಡೆಯುತ್ತಿರುವ ಗಾಂಧಿ ಸಂಕಲ್ಪ ಯಾತ್ರೆಯ ಅಂಗವಾಗಿ ಕಾರ್ಯಕ್ರಮ ನಡೆಯಿತು. ಗಾಂಧೀಜಿಯರ ಆದರ್ಶ ಮೈಗೂಡಿಸಿಕೊಳ್ಳಲು ಮತ್ತು ಗ್ರಾಮ ಸ್ವರಾಜ್ಯದ ಕಲ್ಪನೆಯ ಸಾಕಾರಕ್ಕಾಗಿ ಗಾಂಧಿ ಸಂಕಲ್ಪ ಯಾತ್ರೆ ನಡೆಸಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel