ಸುಳ್ಯದಲ್ಲಿ ಇದೊಂದು ನೂತನ ಅಭಿಯಾನ. ಇದು ಪ್ರತಿಯೊಬ್ಬರೂ ಗಮನಿಸಿ ಮಾಡಲೇಬೇಕಾದ ಕಾರ್ಯ. ಇದು ಜಲಸಂರಕ್ಷಣೆಯ ಅಭಿಯಾನ. ನೀರು ಉಳಿದರೆ ಮಾತ್ರವೇ ಬದುಕು, ನಿರು ಉಳಿದರೆ ಮಾತ್ರವೇ ಕೃಷಿ. ನೀರು ಉಳಿದರೆ ಮಾತ್ರವೇ ಉಸಿರು. ಹೀಗಾಗಿ ಈಗ ಮಳೆಗಾಲದಲ್ಲಿ ಜಲಸಂರಕ್ಷಣೆಗೆ ಮನೆಮನೆಯಲ್ಲೂ ಇಂಗುಗುಂಡಿಯಾಗಬೇಕು ಎಂಬ ಉದ್ದೇಶದಿಂದ ಸುಳ್ಯದ ಸ್ನೇಹ ಶಾಲೆ ಅಭಿಯಾನ ಮಾಡುತ್ತಿದೆ. ಎಲ್ಲರ ಸಹಕಾರ ಇರಲಿ. ಸುಳ್ಯನ್ಯೂಸ್.ಕಾಂ ಸಹಕಾರ ನೀಡುತ್ತಿದೆ. ಅಭಿಯಾನದ ಜೊತೆ ಇರಲಿದೆ. ತಾಲೂಕಿನ ಎಲ್ಲಾ ಶಾಲೆಗಳಲ್ಲೂ ಈ ಅಭಿಯಾನ ನಡೆದು ಮಕ್ಕಳ ಮೂಲಕ ಮನೆಮನೆಗೆ ತಲುಪಲಿ. ಬನ್ನಿ ಕೈ ಜೋಡಿಸಿ….
Advertisement Advertisement
ಸುಳ್ಯ: ಮನೆಮನೆಯಲ್ಲಿ ಇಂಗುಗುಂಡಿ ರಚನೆಯಾಗಬೇಕು, ಈ ಮೂಲಕ ಜಲಸಂರಕ್ಷಣೆಯಾಗಬೇಕು. ಇದು ಅಭಿಯಾನ ಮುಂದೆ ಇದೊಂದು ಕ್ರಾಂತಿಯೇ ಆಗಬೇಕು, ದೇಶದಾದ್ಯಂತ ಜಲ ಸಂರಕ್ಷಣೆಯ ಬಗ್ಗೆ ಒಲವು ಹೆಚ್ಚಬೇಕು. ಇದು ಸ್ನೇಹ ಶಾಲೆಯ ಚಂದ್ರಶೇಖರ ದಾಮ್ಲೆ ಅವರ ಉದ್ದೇಶ. ಈ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಶಾಲೆಗಳಲ್ಲಿ ಜಲಾಮೃತ ಯೋಜನೆಯ ಮೂಲಕ ಮನೆ ಮನೆಯಲ್ಲೂ ಇಂಗು ಗುಂಡಿ ರಚನೆ ಮಾಡಿದ ಅಭಿಯಾನ ಇಂದಿನಿಂದ ಆರಂಭವಾಗುತ್ತಿದೆ.
ಸುಳ್ಯದ ಸ್ನೇಹ ಶಾಲೆಯಲ್ಲಿ ಈಗಾಗಲೇ ಇಂಗುಗುಂಡಿ ರಚನೆ ಮಾಡಿ ಯಶಸ್ಸು ಕಂಡಿದ್ದಾರೆ. ಇದಾದ ಬಳಿಕ ಮಕ್ಕಳ ಮೂಲಕ ಮನೆಮನೆಯಲ್ಲೂ ಇಂಗುಗುಂಡಿ ರಚನೆ ಮಾಡಿದ ಅದರ ಫೋಟೊ ಮಕ್ಕಳ ಮೂಲಕವೇ ತೆಗೆಸಿ ಶಾಲೆಯಲ್ಲಿ ಬಹುದೊಡ್ಡ ಬ್ಯಾನರ್ ಮೂಲಕ ಪ್ರದರ್ಶನ ಮಾಡಿದ್ದಾರೆ. ಇದೀಗ ಇಡೀ ತಾಲೂಕಿನಲ್ಲೀ ಜಲಸಂರಕ್ಷಣೆ ಮಕ್ಕಳ ಮೂಲಕ ಮನೆ ಮನೆಗೂ ತಲುಪಬೇಕು. ಕನಿಷ್ಟ ಒಂದು ಇಂಗುಗುಂಡಿ ಮಕ್ಕಳ ಮೂಲಕ ನಡೆದರೆ ತಾಲೂಕಿನಲ್ಲಿ ಸಂಗ್ರಹವಾಗುವ , ಭೂಮಿಗೆ ಸೇರುವ ನೀರು ಅಪಾರಪ್ರಮಾಣ. ಹೀಗಾಗಿ ಈ ಯೋಜನೆ ಇಂದಿನಿಂದ ಜಾರಿಯಾಗುತ್ತಿದೆ. ಈ ಯೋಜನೆಗೆ ಮುಂದೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದವರೆಗೂ ವಿಸ್ತಾರವಾಗಬೇಕು. ಸುಳ್ಯದಲ್ಲಿ ತೆಗೆದುಕೊಂಡ ಹೆಜ್ಜೆ ವಿಸ್ತಾರವಾಗಲಿ. ಬನ್ನಿ ಒಂದಾಗೋಣ. ಮುಂದೆ ಎಲ್ಲೆಲ್ಲಿ ಈ ಅಭಿಯಾನ ಇರುತ್ತದೆ ಎಂಬುದನ್ನೂ ತಿಳಿಸುತ್ತೇವೆ.
ಇಂದು ಸುಳ್ಯದ ಗಾಂಧಿನಗರ ಪ್ರೌಢಶಾಲೆಯಲ್ಲಿ ಸಂಜೆ 3 ಗಂಟೆಗೆ ಈ ಅಭಿಯಾನ ಆರಂಭವಾಗಲಿದೆ. ಬನ್ನಿ ಜೊತೆಯಾಗೋಣ
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…