ಸುಳ್ಯ: ಸುಳ್ಯದಲ್ಲಿ ಗುರುವಾರ ಉತ್ತಮ ಮಳೆಯಾಗಿದೆ. ಹಗಲು 11 ಗಂಟೆಯಿಂದ ಆರಂಭಗೊಂಡ ಮಳೆ ಮುಂದುವರಿದಿದೆ. ಮೋಡ ಕವಿದಿದ್ದು ಕತ್ತಲು ಕವಿದ ವಾತಾವರಣ ಇದೆ. ಮಳೆಯ ಕಾರಣದಿಂದ ಅಲ್ಲಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದೆ ರಸ್ತೆಯಲ್ಲಿ ನೀರು ಹರಿಯುತ್ತಿದೆ. ವಾಹನಗಳು ಸಾಗುವಾಗ ಕೆಸರು ನೀರು ಸಿಂಚನವಾಗುತ್ತಿದೆ. ಇಲಾಖೆಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಜನಪ್ರತಿನಿಧಿಗಳು ತಕ್ಷಣವೇ ಸೂಚನೆ ನೀಡಬೇಕಿದೆ.
ಮಂಗಳೂರು ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 120 ಮಿಲಿಮೀಟರ್ ಮಳೆಯಾಗಿದೆ. ಬತ್ತಿದ್ದ ನೇತ್ರಾವತಿ , ಕುಮಾರಧಾರಾ ನದಿಯಲ್ಲಿ ನೀರು ಹರಿಯುಲು ಆರಂಭಿಸಿದೆ. ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. ಚಂಡಮಾರುತದ ಕಾರಣದಿಂದ ದೊಡ್ಡ ದೊಡ್ಡ ಸಮುದ್ರದ ಅಲೆಗಳು ತೀರದಲ್ಲಿ ಅ ಪ್ಪಳಿಸುತ್ತಿದೆ. ಜಿಲ್ಲೆಯಾದ್ಯಂತ ಮಳೆ ಮೋಡ ಆವರಿಸಿದೆ. ಸಿಡಿಲು ಗುಡುಗು ಮಿಶ್ರಿತ ಮಳೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ, ಮರ ಉರುಳಿದ್ದು ಬಿಟ್ಟರೆ ಯಾವುದೇ ಅನಾಹುತಗಳಾಗಿಲ್ಲ. ಸೋಮೇಶ್ವರ-ಉಚ್ಚಿಲ ಭಾಗದಲ್ಲಿ ಒಂದು ಮನೆ ನಿನ್ನೆ ಸಂಜೆ ವೇಳೆ ಸಮುದ್ರ ಪಾಲಾಗಿದೆ. ಕಡಲು ಕೊರತೆ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಭೇಟಿ ನೀಡಿದ್ದಾರೆ.