ಸುಳ್ಯ: ಭ್ರಷ್ಟಾಚಾರ ಸುಳ್ಯದ ಬಹುತೇಕ ಇಲಾಖೆಗಳಲ್ಲಿ ತಾಂಡವವಾಡುತ್ತಿದೆ ಎಂಬ ವಿಚಾರ ಜನಸಾಮಾನ್ಯರಿಗೆ ನಿತ್ಯಜೀವನದಲ್ಲಿ ಅನುಭವಕ್ಕೆ ಬರುತ್ತಿದೆಯಾದರೂ ಬಹುತೇಕ ಜನತೆಗೆ ಆಡಳಿತ ವ್ಯವಸ್ಥೆ ಶುದ್ದೀಕರಣ ಯಾವ ರೀತಿ ಮಾಡಬೇಕೆಂದೆ ತಿಳಿಯದಾಗಿದೆ. ಆಯ್ಕೆಯಾದ ಜನಪ್ರತಿನಿಧಿ ಭ್ರಷ್ಟಾಚಾರ ಮಾಡದೇ ಇದ್ದರೆ ಸಾಲದು, ಭ್ರಷ್ಟಾಚಾರ ವಿರುದ್ದ ಧ್ವನಿ ಎತ್ತಬೇಕಿದೆ. ಸುಳ್ಯದಲ್ಲಿ ಈಗ ಕಂಡುಬಂದ ಭ್ರಷ್ಟಾಚಾರ ವಿರುದ್ಧ ಸೂಕ್ತ ಕ್ರಮವಾಗಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಇದೀಗ ಸುಳ್ಯದ ಸಬ್ ರಿಜಿಸ್ಟ್ರಾರ್ ಭ್ರಷ್ಟಾಚಾರ ಬಗ್ಗೆ ಜನಸಾಮಾನ್ಯರು ನೊಂದು ವೀಡಿಯೋ ವರದಿ ಮಾಡುವ ಮೂಲಕ ತಮ್ಮ ಕೊನೆಯ ಆಕ್ರೋಶದ ಅಸ್ತ್ರ ಪ್ರಯೋಗ ಮಾಡಿದ್ದಾರೆ ಇದರ ಬಗ್ಗೆಯೂ ಕೂಲಕುಂಶ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿ ಪಡಿಸಬೇಕು, ಮಾತ್ರವಲ್ಲ ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅವರನ್ನು ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ.
ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿರೋಧ ಪಕ್ಷದ ಬಿಜೆಪಿ ಕಾರ್ಯಕರ್ತರೇ ಮದ್ಯವರ್ತಿಗಳಾಗಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಇಲ್ಲದಾಗಿದೆ. ಸುಳ್ಯದಲ್ಲಿ ಭ್ರಷ್ಟಾಚಾರ ವಿರುದ್ದ ಬಿಜೆಪಿಯನ್ನು ಜನತೆ ಕಳೆದ 25 ವರ್ಷದಿಂದ ಎಲ್ಲಾ ಸ್ತರದಲ್ಲಿ ಆಯ್ಕೆ ಮಾಡಿದ್ದರೂ , ಬಿಜೆಪಿಯೂ ಒಂದು ವಿಶಿಷ್ಟ ಧಾರ್ಮಿಕ ಸಿದ್ದಾಂತದ ವಿಚಾರಕ್ಕೆ ಸೀಮಿತವಾದ ಪಕ್ಷವಾಗಿ, ಆಡಳಿತದಲ್ಲಿ ನಡೆಯುವ, ಯಾವುದೇ ಭ್ರಷ್ಟಾಚಾರ ವಿಷಯದಲ್ಲಿ ಈ ತನಕ ಹೋರಾಟವಾಗಲಿ , ತನಿಖೆಗೆ ದೂರು ನೀಡಿದ ಕುರುಹು ಕಂಡು ಬರುವುದಿಲ್ಲ. ರಾಜ್ಯ ಆಡಳಿತ ಕಾಂಗ್ರೆಸ್ ಸ್ಥಳೀಯವಾಗಿ ನಿಷ್ಕ್ರಿಯವಾಗಿ ಕೇವಲ ಬ್ರೋಕರ್ ಕೆಲಸದಲ್ಲಿ ನಿರತವಾಗಿದೆ ಎಂದು ಆರೋಪಿಸಿದೆ.
ಜನಸಾಮಾನ್ಯರು, ರೈತರು ಶ್ರಮಿಕರು ಭ್ರಷ್ಟಾಚಾರ ವಿರುದ್ದ ಒಂದಾಗಿ ವಿರೋಧಿಸಬೇಕು ಭ್ರಷ್ಟಾಚಾರ ವಿರೋಧಿ ಆಮ್ ಆದ್ಮಿ ಪಾರ್ಟಿ ಆಂದೋಲನದಲ್ಲಿ ಕೈಜೋಡಿಸಬೇಕೆಂದು ಎಂದು ಆಮ್ ಆದ್ಮಿ ಮನವಿ ಮಾಡಿದೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…