ಸುಳ್ಯದಾದ್ಯಂತ ದಿನಸಿ ಸಾಮಾಗ್ರಿ ಲಭ್ಯ | ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ | ಗುತ್ತಿಗಾರಿನಲ್ಲಿ ಮಾದರಿ ವ್ಯವಸ್ಥೆ |

March 26, 2020
2:51 PM

ಸುಳ್ಯ : ಕೊರೊನಾ ವೈರಸ್ ಹರಡುವುದು  ತಡೆಯುಲು ಸರಕಾರ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡು ಇದೀಗ ಲಾಕ್ ಡೌನ್ ಗೆ ಸೂಚನೆ ನೀಡಿದೆ. ಇದರ ಪ್ರಮುಖ ಉದ್ದೇಶ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು  ಹಾಗೂ ವೈರಸ್ ಹರಡುವುದು  ತಡೆಯುವುದು.

ಲಾಕ್ ಡೌನ್ ಸಂದರ್ಭ ದಿನಸಿ ಸಾಮಾಗ್ರಿ ಈಗ ಲಭ್ಯವಿದೆ. ದಿನಸಿ ಅಂಗಡಿಗಳು ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿರುತ್ತದೆ. ಈ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಲ್ಲೆಡೆ ವ್ಯವಸ್ಥೆ ಮಾಡಲಾಗಿದೆ. ಇಲ್ಲದೇ ಇದ್ದರೆ ಅಂಗಡಿ ಮಾಲೀಕರೇ ಇದಕ್ಕೆ ವ್ಯವಸ್ಥೆ ಮಾಡಬೇಕಿದೆ. ವೈರಸ್ ಹರಡುವುದು  ತಡೆಯುವುದರಲ್ಲಿ  ಈಗ ಅಂಗಡಿ ಮಾಲೀಕರ ಪಾತ್ರವೂ ಬಹುಮುಖ್ಯವಾಗಿದೆ. ಇದಕ್ಕಾಗಿ ಮಾರ್ಕ್ ಮಾಡಿ ಆ ಮೂಲಕವೇ ಸಾಮಾಗ್ರಿಗೆ ಬರುವಂತೆ ಸುಳ್ಯದಾದ್ಯಂತ ಗ್ರಾಮೀಣ ಭಾಗದವರೆಗೆ ವ್ಯವಸ್ಥೆ ಮಾಡಬೇಕಿದೆ.

ಸುಳ್ಯ ತಾಲೂಕಿನಾದ್ಯಂತ ಗುರುವಾರ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಅಂಗಡಿ , ಬ್ಯಾಂಕ್, ಹಾಲು, ತರಕಾರಿ ಲಭ್ಯವಾಗಿದೆ. ಆ ಬಳಿಕ ಬಂದ್ ಮಾಡಲಾಗಿದೆ. ನಾಳೆಯೂ ಮಧ್ಯಾಹ್ನ 12 ಗಂಟೆಯವರೆಗೆ ಲಭ್ಯವಿರುತ್ತದೆ. ಎಲ್ಲೇ ಆಗಲಿ ಸಾಮಾಜಿಕ ಅಂತರ ಕಾಪಾಡಬೇಕಿದೆ. ಆದರೆ ಅನಗತ್ಯವಾಗಿ ಪೇಟೆಗೆ, ಮನೆಯಿಂದ ಹೊರಗೆ ಬಂದರೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

 ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ:

ಐವರ್ನಾಡು ಸಹಕಾರಿ ಸಂಘದ ಪ್ರದೇಶದಲ್ಲಿ ದಿನಸಿ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಲಾಗಿತ್ತು. ಈ ಮೂಲಕ  ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.

ಗುತ್ತಿಗಾರಿನಲ್ಲಿ  ಮಾದರಿ ವ್ಯವಸ್ಥೆ:

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಬರದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಲಾಕ್ ಡೌನ್ ಸಂದರ್ಭ ಅಗತ್ಯ ಸೇವೆಗಾಗಿ ತುರ್ತು ಕಾರ್ಯಪಡೆ ರಚನೆ ಮಾಡಲಾಗಿದೆ. ಇದರ ಕಾರ್ಯಕರ್ತರು ಅಗತ್ಯ ಸಂದರ್ಭ ನೆರವಿಗೆ ಬರುತ್ತಾರೆ. ಈಗಾಗಲೇ ಹೊರಜಿಲ್ಲೆಗಳಿಂದ, ಹೊರ ದೇಶಗಳಿಂದ ಗುತ್ತಿಗಾರು ಗ್ರಾಮಕ್ಕೆ ಆಗಮಿಸಿದವರ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ 14 ದಿನಗಳ ಕಾಲ ಮನೆಯಿಂದ ಹೊರಬರಂದತೆ ಸೂಚನೆ ನೀಡಲಾಗಿದೆ.

 

ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು , ಪಿಡಿಒ ಶ್ಯಾಮ ಪ್ರಸಾದ್ , ಗ್ರಾಪಂ ಸದಸ್ಯ ರಾಕೇಶ್ ಮೆಟ್ಟಿನಡ್ಕ, ವಿಜಯಕುಮಾರ್ ಚಾರ್ಮತ,  ಕಾರ್ಯಕರ್ತರಾದ ಲೋಕೇಶ್ವರ ಡಿ ಆರ್ , ವಿನಯ ಮೆಟ್ಟಿನಡ್ಕ, ಮಹೇಶ್ ಪುಚ್ಚಪ್ಪಾಡಿ ಮೊದಲಾದವರು ಹೊರಜಿಲ್ಲೆಗಳಿಂದ ಬಂದವರ  ಮನೆಗಳಿಗೆ  ಭೇಟಿ ನೀಡಿ ಜಾಗೃತಿ ಮೂಡಿಸಿದರು.

 

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನ | ಆತಂಕಪಡುವ ಅಗತ್ಯವಿಲ್ಲ | ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಸ್ಪಷ್ಟನೆ
March 12, 2025
10:13 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗುಡುಗು ಸಹಿತ ಗಾಳಿ-ಮಳೆ | ಎರಡನೇ ಬಾರಿ ಸುರಿದ ಧಾರಾಕಾರ ಮಳೆ |
March 12, 2025
10:03 PM
by: ದ ರೂರಲ್ ಮಿರರ್.ಕಾಂ
ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್
March 12, 2025
7:19 AM
by: The Rural Mirror ಸುದ್ದಿಜಾಲ
 ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ
March 12, 2025
7:13 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror