ಸುಳ್ಯ : ಕೊರೊನಾ ವೈರಸ್ ಹರಡುವುದು ತಡೆಯುಲು ಸರಕಾರ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡು ಇದೀಗ ಲಾಕ್ ಡೌನ್ ಗೆ ಸೂಚನೆ ನೀಡಿದೆ. ಇದರ ಪ್ರಮುಖ ಉದ್ದೇಶ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ವೈರಸ್ ಹರಡುವುದು ತಡೆಯುವುದು.
ಲಾಕ್ ಡೌನ್ ಸಂದರ್ಭ ದಿನಸಿ ಸಾಮಾಗ್ರಿ ಈಗ ಲಭ್ಯವಿದೆ. ದಿನಸಿ ಅಂಗಡಿಗಳು ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿರುತ್ತದೆ. ಈ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಲ್ಲೆಡೆ ವ್ಯವಸ್ಥೆ ಮಾಡಲಾಗಿದೆ. ಇಲ್ಲದೇ ಇದ್ದರೆ ಅಂಗಡಿ ಮಾಲೀಕರೇ ಇದಕ್ಕೆ ವ್ಯವಸ್ಥೆ ಮಾಡಬೇಕಿದೆ. ವೈರಸ್ ಹರಡುವುದು ತಡೆಯುವುದರಲ್ಲಿ ಈಗ ಅಂಗಡಿ ಮಾಲೀಕರ ಪಾತ್ರವೂ ಬಹುಮುಖ್ಯವಾಗಿದೆ. ಇದಕ್ಕಾಗಿ ಮಾರ್ಕ್ ಮಾಡಿ ಆ ಮೂಲಕವೇ ಸಾಮಾಗ್ರಿಗೆ ಬರುವಂತೆ ಸುಳ್ಯದಾದ್ಯಂತ ಗ್ರಾಮೀಣ ಭಾಗದವರೆಗೆ ವ್ಯವಸ್ಥೆ ಮಾಡಬೇಕಿದೆ.
ಸುಳ್ಯ ತಾಲೂಕಿನಾದ್ಯಂತ ಗುರುವಾರ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಅಂಗಡಿ , ಬ್ಯಾಂಕ್, ಹಾಲು, ತರಕಾರಿ ಲಭ್ಯವಾಗಿದೆ. ಆ ಬಳಿಕ ಬಂದ್ ಮಾಡಲಾಗಿದೆ. ನಾಳೆಯೂ ಮಧ್ಯಾಹ್ನ 12 ಗಂಟೆಯವರೆಗೆ ಲಭ್ಯವಿರುತ್ತದೆ. ಎಲ್ಲೇ ಆಗಲಿ ಸಾಮಾಜಿಕ ಅಂತರ ಕಾಪಾಡಬೇಕಿದೆ. ಆದರೆ ಅನಗತ್ಯವಾಗಿ ಪೇಟೆಗೆ, ಮನೆಯಿಂದ ಹೊರಗೆ ಬಂದರೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.
ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ:
ಐವರ್ನಾಡು ಸಹಕಾರಿ ಸಂಘದ ಪ್ರದೇಶದಲ್ಲಿ ದಿನಸಿ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಲಾಗಿತ್ತು. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
ಗುತ್ತಿಗಾರಿನಲ್ಲಿ ಮಾದರಿ ವ್ಯವಸ್ಥೆ:
ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಬರದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಲಾಕ್ ಡೌನ್ ಸಂದರ್ಭ ಅಗತ್ಯ ಸೇವೆಗಾಗಿ ತುರ್ತು ಕಾರ್ಯಪಡೆ ರಚನೆ ಮಾಡಲಾಗಿದೆ. ಇದರ ಕಾರ್ಯಕರ್ತರು ಅಗತ್ಯ ಸಂದರ್ಭ ನೆರವಿಗೆ ಬರುತ್ತಾರೆ. ಈಗಾಗಲೇ ಹೊರಜಿಲ್ಲೆಗಳಿಂದ, ಹೊರ ದೇಶಗಳಿಂದ ಗುತ್ತಿಗಾರು ಗ್ರಾಮಕ್ಕೆ ಆಗಮಿಸಿದವರ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ 14 ದಿನಗಳ ಕಾಲ ಮನೆಯಿಂದ ಹೊರಬರಂದತೆ ಸೂಚನೆ ನೀಡಲಾಗಿದೆ.
ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು , ಪಿಡಿಒ ಶ್ಯಾಮ ಪ್ರಸಾದ್ , ಗ್ರಾಪಂ ಸದಸ್ಯ ರಾಕೇಶ್ ಮೆಟ್ಟಿನಡ್ಕ, ವಿಜಯಕುಮಾರ್ ಚಾರ್ಮತ, ಕಾರ್ಯಕರ್ತರಾದ ಲೋಕೇಶ್ವರ ಡಿ ಆರ್ , ವಿನಯ ಮೆಟ್ಟಿನಡ್ಕ, ಮಹೇಶ್ ಪುಚ್ಚಪ್ಪಾಡಿ ಮೊದಲಾದವರು ಹೊರಜಿಲ್ಲೆಗಳಿಂದ ಬಂದವರ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…
ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…
ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ.…