ಸುಳ್ಯ: ಮಾತಿನಲ್ಲಿ ಹೇಳಲಾಗದ್ದನ್ನು, ಭಾಷೆಯ ಮೂಲಕ ವ್ಯಕ್ತಪಡಿಸಲಾಗದ್ದನ್ನು, ಭಾವನೆಗಳ ಮೂಲಕ ಅಥವಾ ದೇಹ ಭಾಷೆಯ ಮೂಲಕ ಹೇಳಬಹುದು. ಮಾತಿನಲ್ಲಿ ಹೇಳಲಾಗದ ಲಕ್ಷ ಲಕ್ಷ ಸಂದೇಶಗಳನ್ನು ಕಲೆಗಳ ಮೂಲಕ ಕಲಾವಿದರು ತಮ್ಮ ಭಾವನೆಗಳಿಂದ ಮತ್ತು ಆಂಗಿಕವಾಗಿ ಹೇಳುತ್ತಾರೆ. ಅದೇ ಸಂಪದ್ಭರಿತ ಸುಳ್ಯದ ಕಲಾ ಸಾಂಸ್ಕೃತಿಕ ಕ್ಷೇತ್ರಕ್ಕೆ ಮೆರುಗು ಹೆಚ್ಚಿಸಲು ಇನ್ನು ‘ಆಂಗಿಕ’ ಸ್ಪರ್ಶ ದೊರೆಯಲಿದೆ.
ಕಳೆದ ಒಂದೂವರೆ ವರ್ಷದಿಂದ ಸುಳ್ಯದ ಕಲಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ನೂರಾರು ಯುವ ಪ್ರತಿಭೆಗಳನ್ನು ಬೆಳೆಸುತ್ತಿರುವ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ, ಕಲಾವಿದ, ನಾಟಕಕಾರ ಲೋಕೇಶ್ ಊರುಬೈಲು ನೇತೃತ್ವದಲ್ಲಿ ಸುಳ್ಯದಲ್ಲಿ ಆರಂಭಗೊಂಡಿರುವ ನೂತನ ಸಂಸ್ಥೆಯೇ ಆಂಗಿಕ. ಮಾತಿನಲ್ಲಿ ಹೇಳಲಾಗದ ನೂರಾರು ಭಾವನೆಗಳನ್ನು ಬಿತ್ತರಿಸಿ ಕಲಾವಿದರ ಪ್ರೌಢಿಮೆ, ಸೌಂದರ್ಯ, ಮೆರುಗು ಹೆಚ್ಚಿಸಲಿದೆ ಈ ಆಂಗಿಕ.
ವೇದಿಕೆ ಮೇಲೆ ಕಲಾ ಸಾಂಸ್ಕೃತಿಕ ವೈಭವ ಪ್ರಸ್ತುತಿಪಡಿಸುವ ಕಲಾವಿದರ ಸೌಂದರ್ಯ ಹೆಚ್ಚಿಸಿವುದರಲ್ಲಿ ಅವರು ಧರಿಸುವ ಆಭರಣ, ವಸ್ತ್ರಗಳು ಪ್ರಮುಖ ಪಾತ್ರ ವಹಿಸುತ್ತದೆ. ಸುಳ್ಯದಲ್ಲಿ ನೂರಾರು ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. ಆದರೆ ಕಲಾ ಪ್ರದರ್ಶನದ ಸಂದರ್ಭಗಳಲ್ಲಿ ಧರಿಸುವ ವಸ್ತ್ರ, ಆಭರಣಗಳು ಮತ್ತು ಪರಿಕರಗಳು ಇಲ್ಲಿ ಲಭ್ಯವಿಲ್ಲ. ಆದುದರಿಂದ ಕಲಾವಿದರಿಗೆ ಅಗತ್ಯವಿರುವ ವಸ್ತ್ರಗಳು ಮತ್ತು ಆಭರಣಗಳನ್ನು ಒದಗಿಸುವ ಪ್ರಯತ್ನ ಆಂಗಿಕದ ಮೂಲಕ ನಡೆಸಲಾಗುತ್ತದೆ. ಸುಳ್ಯ ಬಸ್ ನಿಲ್ದಾಣದ ಬಳಿಯ ಕೆ.ಆರ್.ಕಾಂಪ್ಲೆಕ್ಸ್ ನಲ್ಲಿ ಆಂಗಿಕ ಕಾರ್ಯಾರಂಭ ಮಾಡಿದೆ.
ಏನೆಲ್ಲ ದೊರೆಯಲಿದೆ: ಜನಪದ, ಸಿನಿಮಾ, ಶಾಸ್ತ್ರೀಯ, ನೃತ್ಯ ಪ್ರಕಾರಗಳ ಎಲ್ಲಾ ವಿಧದ ವೇಷಭೂಷಣಗಳು, ಆಭರಣಗಳು, ಛದ್ಮವೇಷ, ನಾಟಕ, ರಂಗಪರಿಕರಗಳು ಇಲ್ಲಿ ಲಭ್ಯವಿದೆ. ಅಲ್ಲದೆ ವಾರ್ಷಿಕೋತ್ಸವ, ಸಭೆ, ಸಮಾರಂಭಗಳಿಗೆ ನೃತ್ಯ, ನಾಟಕ, ಹಾಡು, ಸಿನಿಮಾ, ಮನರಂಜನೆ, ನಿರ್ದೇಶನ, ನಿರ್ಮಾಣ ಮಾಡಿಕೊಡಲಾಗುತ್ತದೆ. ಸನ್ಮಾನ ಸಮಾರಂಭಗಳಿಗೆ ಬೇಕಾದ ಪೇಟ, ಹಾರ, ಶಾಲು, ಸ್ಮರಣಿಕೆ, ಗುಣಮಟ್ಟದ ಆಕರ್ಷಣೀಯ ಫಲಕಗಳು ಹಾಗು ಸ್ಮರಣಿಕೆಗಳು ಒಂದೇ ಕಡೆ ಲಭ್ಯವಿದೆ. ಎಲ್ಲಾ ಸಭೆ, ಶುಭ ಸಮಾರಂಭಗಳಿಗೆ ಬೇಕಾದ ವೇದಿಕೆ ಅಲಂಕಾರ ಮಾಡಿ ಕೊಡಲಾಗುತ್ತದೆ. ಹಾಗು ಕಲಾತ್ಮಕ ವೇದಿಕೆಯ ನಿರ್ಮಾಣವನ್ನೂ ಮಾಡಿ ಕೊಡಲಾಗುವುದು ಎಂದು ಲೋಕೇಶ್ ಊರುಬೈಲು ಹೇಳುತ್ತಾರೆ.
ಸುಳ್ಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಅದಕ್ಕೆ ಬೇಕಾಗುವ ವಸ್ತ್ರ, ಆಭರಣ, ಪರಿಕರಗಳನ್ನು ಹೊಂದಿಸುವುದು ಕಲಾವಿದರಿಗೆ ದೊಡ್ಡ ಸವಾಲೇ ಸರಿ. ಈ ನಿಟ್ಟಿನಲ್ಲಿ ಕಲಾವಿದರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒದಗಿಸಿಕೊಡುವ ಪ್ರಯತ್ನ ಆಂಗಿಕದ ಮೂಲಕ ನಡೆಸುವ ಇರಾದೆ ಇದೆ ಎನ್ನುತ್ತಾರೆ ಲೋಕೇಶ್ ಊರುಬೈಲು.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…