ಸುಳ್ಯ:ಮುಖ್ಯ ಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸುಳ್ಯದ ಶಾಸಕ ಎಸ್. ಅಂಗಾರರನ್ನು ಸಚಿವ ಸ್ಥಾನ ನೀಡದೆ ಕಡೆಗಣಿಸಲಾಗಿದೆ. ಸುಳ್ಯ ವಿದಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾದ ಪಕ್ಷ ನಿಷ್ಠೆ ಹೊಂದಿರುವ ಯಾವುದೇ ಕಳಂಕವಿಲ್ಲದ ಆರ್.ಎಸ್.ಎಸ್. ಕಾರ್ಯಕರ್ತರಾಗಿರುವ ಅಂಗಾರರಿಗೆ ಮಂತ್ರಿ ಸ್ಥಾನ ನೀಡದೆ ಬಿಜೆಪಿ ಹೈಕಮಾಂಡ್ ಮೋಸ ಮಾಡಿದ್ದೂ ಕಳಂಕಿತ, ಹಣಬಲ, ಪ್ರಭಾವ ಹೊಂದಿರುವ ಶಾಸಕರಿಗೆ ಮಣೆ ಹಾಕುವ ಮೂಲಕ ಸುಳ್ಯಕ್ಕೆ ಮತ್ತೊಮ್ಮೆ ಅವಮಾನ ಮಾಡಿದ್ದನ್ನು ನಾವು ಖಂಡಿಸುತ್ತೆವೆ ಎಂದು ಸುಳ್ಯ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಗೀತಾ ಕೋಲ್ಚಾರು ಪ್ರತಿಕ್ರಿಯೆ ನೀಡಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel