ಸುಳ್ಯ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸುಳ್ಯದ ಶಾಸಕ ಎಸ್. ಅಂಗಾರರನ್ನು ಕಡೆಗಣಿಸಲಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾದ ಪಕ್ಷ ನಿಷ್ಠೆ ಹೊಂದಿರುವ ಯಾವುದೇ ಕಳಂಕವಿಲ್ಲದ ಆರ್.ಎಸ್.ಎಸ್. ಕಾರ್ಯಕರ್ತರಾಗಿರುವ ಅಂಗಾರರಿಗೆ ಮಂತ್ರಿ ಸ್ಥಾನ ನೀಡದೆ ಬಿಜೆಪಿ ಹೈಕಮಾಂಡ್ ನೈತಿಕತೆ ಕಳೆದುಕೊಂಡಿದೆ. ಆ ಮೂಲಕ ಸುಳ್ಯಕ್ಕೆ ಮತ್ತೊಮ್ಮೆ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಅವಮಾನ ಮಾಡಿದೆ. ಬಿಜೆಪಿ ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಾದರೂ ಅವಕಾಶ ನೀಡಲಿ ಎಂದು ಬಯಸುತ್ತೇವೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಗೌಡ ಕೊಯಿಂಗಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಸುಳ್ಯ ನಗರದ ಅಬಿವೃದ್ದಿಯಾಗುವ ನಮ್ಮ ಕನಸು ಕನಸಾಗಿ ಉಳಿಯಲಿದೆ: ಶರೀಫ್ ಕಂಠಿ
ನಮ್ಮ ಸುಳ್ಯದ ಶಾಸಕ ಅಂಗಾರರವರು ಸಚಿವರಾಗಿ ಸುಳ್ಯ ನಗರದ ಅಬಿವೃದ್ದಿಯಾಗುವ ನಮ್ಮ ಕನಸು ಕನಸಾಗಿ ಉಳಿಯಲಿದೆ ಬಿಜೆಪಿ ಸರಕಾರ ನಿಷ್ಠಾವಂತರಿಗೆ ಅವಕಾಶ ಕೊಡುವುದಿಲ್ಲ.ಭ್ರಷ್ಟರಿಗೆ ಮಣೆ ಹಾಕುತ್ತಾರೆ.ಯಾವಾಗ ನಮ್ಮ ನಗರ ಸುಂದರ ನಗರವಾಗುವುದು ಎಂದು ನಗರ ಪಂಚಾಯತ್ ಸದಸ್ಯ ಶರೀಪ್ ಕಂಠಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ದಕ್ಷಿಣ ಕರಾವಳಿ, ಮಲೆನಾಡು ಭಾಗಗಳಲ್ಲಿ ಬೇಸಿಗೆ ಮಳೆಯು ಮುಂದುವರಿಯುವ ಲಕ್ಷಣಗಳಿವೆ. ಉತ್ತರ…
ರಾಜಕೀಯ ಎನ್ನುವುದು ಕೃಷಿ ಹಾಗೂ ಅಡಿಕೆ ಬೆಳೆಗಾರರ ವಿಚಾರದಲ್ಲಿ ಕೂಡಾ ಹೇಗೆ ಇರುತ್ತದೆ,…
ಮನುಷ್ಯನಿಗೆ ಆಹಾರ, ನಿದ್ರೆಗಳು ಸಹಜ. ವಯೋವೃದ್ಧರಿಗೆ ಬೋಜನದ ನಂತರದ ನಿದ್ರೆಯಿಂದ ಮೈಮನಗಳಿಗೆ ಸ್ಫೂರ್ತಿ.…
ದಾವಣಗೆರೆ ಜಿಲ್ಲೆಯ 6 ತಾಲೂಕುಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ 197…
ಯಾದಗಿರಿ ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳಿನಲ್ಲಿ ಗರಿಷ್ಠ 45 ಡಿಗ್ರಿ ಸೆಲ್ಸಿಯಸ್ ತಾಪಮಾನ…
ವಿಶ್ವವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ…