ಸುಳ್ಯ ಲಂಚಾವತಾರ: ಸುಳ್ಯದ ಸಬ್ ರಿಜಿಸ್ಟ್ರಾರ್ ಬದಲಾವಣೆ

June 14, 2019
10:00 AM

ಸುಳ್ಯ: ಸುಳ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿ ಕೇಶವಮೂರ್ತಿ ಹಲವಾರು ಸಮಯಗಳಿಂದ ಲಂಚ , ಭ್ರಷ್ಟಾಚಾರದಲ್ಲಿ  ತೊಡಗಿಕೊಂಡಿದ್ದರೂ ಯಾವುದೇ ಕ್ರಮ ಆಗದ ಹಿನ್ನೆಲೆಯಲ್ಲಿ  ಸುಳ್ಯನ್ಯೂಸ್.ಕಾಂ ವಿಡಿಯೋ ಸಹಿತ ವರದಿ ಮಾಡಿತ್ತು. ಅದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ  ಸುಳ್ಯಕ್ಕೆ ಮಂಗಳೂರಿನಿಂದ ಸುಧೀಂದ್ರ ಎಂಬವರು ಅಧಿಕಾರ ಪಡೆದಿದ್ದಾರೆ.

Advertisement

ಸುಳ್ಯದಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಚೇರಿಯ ದ್ವಿತೀಯ ದರ್ಜೆಯ ಸಹಾಯಕ ಕೇಶವಮೂರ್ತಿ ಅವರು ಸುಳ್ಯದಲ್ಲಿ  ಜನಸಾಮಾನ್ಯರಿಂದ ತೊಡಗಿ ಯೋಧರೊಬ್ಬರಿಂದಲೂ ಇ ಸಿ ಗೆ ಹಣ ಪಡೆದಿದ್ದ ಬಗ್ಗೆ ಆರೋಪ ಇತ್ತು. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಮಾತನಾಡಿದ್ದರೂ ಯಾವುದೇ ಕ್ರಮ ಆಗಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ವ್ಯವಸ್ಥೆ ಬಗ್ಗೆ ಕೃಷಿರೊಬ್ಬರು ಸುಳ್ಯನ್ಯೂಸ್.ಕಾಂ ಮಾಹಿತಿ ನೀಡಿದ್ದರು. ಹೀಗಾಗಿ ವಿಡಿಯೋ ಸಹಿತ ವರದಿ ಮಾಡಿತ್ತು. ಅದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ  ಮತ್ತು ಆನ್ಲೈನ್ ಮಾಧ್ಯಮಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. 

ಈ ಬಗ್ಗೆ ಶಾಸಕ ಅಂಗಾರ , ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಸೇರಿದಂತೆ ಜನಪ್ರತಿನಿಧಿಗಳು, ಸಾಮಾಜಿಕ ಸಂಘಟನೆಗಳು ಅಧಿಕಾರಿ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಿದ್ದರು. ಸದ್ಯ ಕೇಶವ ಮೂರ್ತಿ ಬಂಟ್ವಾಳದಲ್ಲಿ  ಕೆಲಸ ನಡೆಸುತ್ತಿದ್ದು ಕಡ್ಡಾಯ ರಜೆಯ ಮೂಲಕ ತೆರಳಲು ಆದೇಶದ ಸೂಚನೆ ಇದೆ. ಈ ನಡುವೆ ಭ್ರಷ್ಟಾಚಾರ ನಿಗ್ರಹ ದಳ ಕೇಸು ದಾಖಲಿಸಿಕೊಳ್ಳಲಿದೆ.

ಸುಳ್ಯದಲ್ಲಿ ಇನ್ನೂ ಹಲವು ಇಲಾಖೆಗಳಲ್ಲಿ  ಭ್ರಷ್ಟಾಚಾರ ನಡೆಯುತ್ತಿದೆ ಆರೋಪ ಇದೆ. ಲಂಚ ನೀಡದೆ ಕಡತಗಳು ಮುಂದುವರಿಯುವುದಿಲ್ಲ, ಹಾಗೂ ಸತಾಯಿಸಲಾಗುತ್ತಿದೆ ಎಂಬ ಆರೋಪ  ಇದೆ.  ಈ ಬಗ್ಗೆ ಕೃಷಿಕರು, ಸಾರ್ವಜನಿಕರು ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾಗಿದೆ.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ
ಪಶು ಆಹಾರ : ಈ ವಿಷಯ ನಿಮಗೆ ತಿಳಿದಿರಲಿ !
June 24, 2025
10:26 AM
by: ದ ರೂರಲ್ ಮಿರರ್.ಕಾಂ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಮಾರುಕಟ್ಟೆ ಏನಾಯ್ತು..? | ವಿಘ್ನೇಶ್ವರ ಭಟ್‌ ವರ್ಮುಡಿ ಅವರ ವಿಶ್ಲೇಷಣೆ …
May 22, 2025
8:43 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group