ಸುಳ್ಯ: ಬೆಂಗಳೂರಿನ ವಿಪಶ್ಶನ ಧ್ಯಾನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ 10 ದಿನಗಳ ಧ್ಯಾನ ಶಿಬಿರವು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜರಗುತ್ತಿದೆ.
ವಿಪಶ್ಶನವೆಂದರೆ ಧ್ಯಾನದ ಮೂಲಕ ಮನಸ್ಸಿನ ವಿಕಾರಗಳನ್ನು ನಿವಾರಿಸಿ ಶಾಂತಿ ಸಂತೋಷಗಳನ್ನು ಪಡೆಯುವ ಸರಳ ಮಾರ್ಗ. ಇದಕ್ಕೆ ಸೂಕ್ತವಾದ ಪರಿಸರ ಇರುವ ಸ್ನೇಹ ಶಾಲೆಯಲ್ಲಿ ಇದೇ ಮೇ 8 ರಂದು ಸಂಜೆ 7 ಗಂಟೆಗೆ ಮುಖ್ಯ ಧ್ಯಾನ ಮಂದಿರವನ್ನು ಶಿರಾರ್ಥಿಗಳು ಪ್ರವೇಶಿಸುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಸುಳ್ಯ, ಪುತ್ತೂರು, ಮಂಗಳೂರು, ಕಾರ್ಕಳ, ಕಾಸರಗೋಡು, ಉಡುಪಿ, ಹೆಬ್ರಿ, ಕುಂದಾಪುರ, ಹೊನ್ನಾವರ, ತೀರ್ಥಹಳ್ಳಿ, ಮುಂಬೈ, ದುಬೈ ಮುಂತಾದೆಡೆಗಳಿಂದ ವಿವಿಧ ಉದ್ಯಮಗಳಿಂದ ಬಂದ 42 ಮಂದಿ ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ. 22 ರಿಂದ 94 ವರ್ಷ ವಯೋಮಾನದ ಶಿಬಿರಾರ್ಥಿಗಳಲ್ಲಿ 24 ಮಹಿಳೆಯರು ಹಾಗೂ 18 ಪುರುಷರಿದ್ದಾರೆ. ಬೆಂಗಳೂರು ಕೇಂದ್ರದಿಂದ ಒಬ್ಬರು ಗುರೂಜಿ ಹಾಗೂ ಹತ್ತು ಮಂದಿ ಸಹಾಯಕರಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel