ಸುಳ್ಯ: ರಾಜಕೀಯ ವಿವಾದ ಸೃಷ್ಠಿಸಿದ್ದ, ಪ್ರತಿಭಟನೆ, ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿ ಪೂರ್ತಿಯಾಗುತ್ತಿದೆ. ಕೇಂದ್ರ ರಸ್ತೆ ನಿಧಿ ಅನುದಾನದಲ್ಲಿ ಆರು ಕೋಟಿ ರೂ ವೆಚ್ಚದಲ್ಲಿ ಸುಳ್ಯ-ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಕಾಂತಮಂಗಲದಿಂದ ಅಜ್ಜಾವರದ ಅಡ್ಪಂಗಾಯದವರೆಗೆ ಆರು ಕಿ.ಮಿ. ಅಭಿವೃದ್ಧಿ ನಡೆಯುತಿದೆ. ಇದರಲ್ಲಿ 4.5 ಕಿ.ಮಿ.ರಸ್ತೆ ಡಾಮರೀಕರಣ ಪೂರ್ತಿಯಾಗಿದೆ. ಉಳಿದ ಸುಮಾರು ಒಂದೂವರೆ ಕಿ.ಮಿ ರಸ್ತೆಯಲ್ಲಿ ಜಲ್ಲಿ ಹಾಸುವ ಕೆಲಸ ಪೂರ್ತಿಯಾಗಿದೆ. ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದ್ದು ಡಾಮರೀಕರಣ ಕೆಲಸ ಸದ್ಯದಲ್ಲಿಯೇ ಪೂರ್ತಿಯಾಗಲಿದೆ ಎಂದು ಇಂಜಿನಿಯರ್‍ಗಳು ತಿಳಿಸಿದ್ದಾರೆ. 5.5 ಮೀಟರ್ ಅಗಲದಲ್ಲಿ ರಸ್ತೆ ಡಾಮರೀಕರಣ ಮಾಡಲಾಗಿದೆ. ಅಗಲೀಕರಣ ಮಾಡಿ ಅಲ್ಲಲ್ಲಿ ಕಿರು ಸೇತುವೆ, ಮೋರಿಗಳ ನಿರ್ಮಾಣವೂ ನಡೆದಿದೆ. ಡಾಮರು ಕಂಡು ದಶಕಗಳೇ ಕಳೆದು ಸಂಪೂರ್ಣ ಎಕ್ಕುಟ್ಟಿ ಹೋಗಿದ್ದ ರಸ್ತೆಯಲ್ಲಿನ ಪ್ರಯಾಣ ದೇವರಿಗೇ ಪ್ರೀತಿ ಎಂಬ ಸ್ಥಿತಿ ಇತ್ತು. ಕಳೆದ ಬೇಸಿಗೆಯಲ್ಲಿ ಕಾಮಗಾರಿ ಆರಂಭಿಸಿ ಮಳೆಗಾಲಕ್ಕೆ ಮುನ್ನ ಸ್ವಲ್ಪ ಭಾಗ ಅಭಿವೃದ್ಧಿಸಿ ಡಾಮರೀಕರಣ ನಡೆಸಲಾಗಿತ್ತು. ಮಳೆಗಾಲ ಕಳೆದ ಬಳಿಕ ಕಾಮಗಾರಿ ಮತ್ತೆ ಆರಂಭಿಸಲಾಗಿತ್ತು.
ದಶಕದ ಯಾತನೆಗೆ ಮುಕ್ತಿ: ಸುಳ್ಯ ಅಜ್ಜಾವರ ಮಧ್ಯೆಯ ಆರೂವರೆ ಕಿ.ಮಿ.ರಸ್ತೆ ಅಭಿವೃದ್ಧಿ ಕಾಣದೆ ದಶಕಗಳೇ ಕಳೆದು ಹೋಗಿತ್ತು. ಇದೀಗ ರಸ್ತೆ ಅಭಿವೃದ್ಧಿ ಕಂಡಿರುವುದರಿಂದ ದಶಕದ ಯಾತನೆಗೆ ಮುಕ್ತಿ ದೊರೆಯುವಂತಾಗಿದೆ. ಕಾಂತಮಂಗಲ ವೃತ್ತದಿಂದ ಅಡ್ಪಂಗಾಯದವರೆಗೆ ಒಟ್ಟು ಏಳೂವರೆ ಕಿ.ಮಿ.ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿ ಆರೂವರೆ ಕಿ.ಮಿ. ಸಂಪೂರ್ಣ ಎಕ್ಕುಟ್ಟಿ ಹೋಗಿ ಪ್ರಯಾಣ ದುಸ್ತರವಾಗಿತ್ತು. ಸುಳ್ಯ-ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಸುಳ್ಯದಿಂದ ಮಂಡೆಕೋಲು ಗಡಿವರೆಗೆ ಕರ್ನಾಟಕದ ಭಾಗ ಒಟ್ಟು 14 ಕಿ.ಮಿ. ರಸ್ತೆ ಇದೆ. ಇದರಲ್ಲಿ ಅಡ್ಪಂಗಾಯದಿಂದ ಮಂಡೆಕೋಲು ಪೇಟೆವರೆಗೆ ಮೂರು ಕಿ.ಮಿ.ಲೋಕೋಪಯೋಗಿ ರಸ್ತೆ ಹೊರತುಪಡಿಸಿದರೆ ಉಳಿದ 11 ಕಿ.ಮಿ.ಜಿಲ್ಲಾ ಪಂಚಾಯಿತಿ ರಸ್ತೆ ಇದೆ. ಇದರಲ್ಲಿ ನಾಲ್ಕು ಕೋಟಿ ರೂ ಅನುದಾನದಲ್ಲಿ ನಾಲ್ಕೂವರೆ ಕಿ.ಮಿ. ಕೆಲವು ವರ್ಷಗಳ ಹಿಂದೆ ಅಭಿವೃದ್ದಿಗೊಂಡಿತ್ತು. ಕಾಂತಮಂಗಲ ಹಾಗು ಅಜ್ಜಾವರಗಳಲ್ಲಿ ಒಟ್ಟು ಒಂದು ಕಿ.ಮಿ.ಕಾಂಕ್ರೀಟೀಕರಣ ಮತ್ತು ಮಂಡೆಕೋಲು ಪೇಟೆಯಿಂದ ಗಡಿಯವರೆಗೆ 3.5 ಕಿ.ಮಿ.ಡಾಮರೀಕರಣ ಮಾಡಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಕಾಂತಮಂಗಲ-ಅಜ್ಜಾವರ ಮಧ್ಯೆ ಉಳಿದ ಆರೂವರೆ ಕಿ.ಮಿ. ರಸ್ತೆ ಡಾಮರೀಕರಣ ಕಾಣದೇ ಒಂದೂವರೆ ದಶಕ ಸಂದಿತ್ತು.
ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ನಿಧಿಯಿಂದ ಆರು ಕೋಟಿ ರೂ ಅನುದಾನ ನಾಲ್ಕು ವರ್ಷದ ಹಿಂದೆಯೇ ಮಂಜೂರುಗೊಂಡಿತ್ತು. ಆದರೆ ಈ ಅನುದಾನದ ಟೆಂಡರ್ ಪ್ರಕ್ರಿಯೆ ನಡೆಯದೆ ಕಾಮಗಾರಿ ಆರಂಭಿಸಲು ವಿಳಂಬ ಆಗಿ ಭಾರೀ ವಿವಾದಕ್ಕೆ ಮತ್ತು ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ನಿರಂತರ ಒತ್ತಡ ಮತ್ತು ಪ್ರತಿಭಟನೆಯ ಬಳಿಕ ರಸ್ತೆ ಕಾಮಗಾರಿ ಆರಂಭಗೊಂಡಿತ್ತು.
ಕೇಂದ್ರ ರಸ್ತೆ ನಿಧಿಯಿಂದ ಕಾಂತಮಂಗಲ-ಅಜ್ಜಾವರ ರಸ್ತೆ ಅಭಿವೃದ್ಧಿ ನಡೆಯುತಿದ್ದು ಅಂತಿಮ ಹಂತದಲ್ಲಿದೆ. ಕಾಮಗಾರಿ ಆರಂಭಗೊಳ್ಳುವುದು ವಿಳಂಬವಾಗಿದ್ದರೂ ಇದೀಗ ಅತ್ಯುತ್ತಮ ರಸ್ತೆ ನಿರ್ಮಾಣಗೊಂಡಿದೆ. ರಸ್ತೆ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಿದ ಕಾರಣ ಸುಂದರ ರಸ್ತೆ ನಿರ್ಮಾಣಗೊಂಡಿದೆ-ನವೀನ್‍ಕುಮಾರ್ ಮೇನಾಲ, ಮಾಜಿ ಸದಸ್ಯ, ದ.ಕ.ಜಿಲ್ಲಾ ಪಂಚಾಯಿತಿ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…