ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಯಾರು ? ಅಥವಾ ಸುಳ್ಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬರುತ್ತದಾ ? …ಹೀಗೊಂದು ಪ್ರಶ್ನೆ ಈಗ ಕಲ್ಮಡ್ಕ ಪರಿಸರದಲ್ಲಿ ಕೇಳಿದೆ.
ಕಾರಣ ಇಷ್ಟೇ, ಇಲ್ಲಿ ಪಾಜಪಳ್ಳ -ಕುಕ್ಕುಜಡ್ಕ ರಸ್ತೆ ಅಭಿವೃದ್ದಿಯನ್ನು ಈಚೆಗೆ ಮಾಡಲಾಗಿದೆ. 5.80 ಕಿಮೀ ಉದ್ದದ ರಸ್ತೆಯನ್ನು 1.96 ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇದಕ್ಕೆ ಮಾಹಿತಿ ನೀಡುವ ಸಲುವಾಗಿ ಫಲಕ ಹಾಕಲಾಗುತ್ತದೆ. ಇದರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಹೆಸರು ಉಲ್ಲೇಖಿಸಲಾಗಿದೆ.
ಕಣ್ತಪ್ಪಿನಿಂದ ಈ ಲೋಪವಾಗಿರಬಹುದು. ಆದರೆ ಕೋಟಿ ಅನುದಾನದ ಮಾಹಿತಿ ಫಲಕದಲ್ಲಿ ಶಾಸಕರ ಹೆಸರೇ ಬದಲಾಗಿರುವುದು ಇಲಾಖೆಯ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಬಹುತೇಕ ಕಾಮಗಾರಿಗಳಲ್ಲಿ, ಕೆಲಸಗಳಲ್ಲಿ ಇಂತಹದ್ದೇ ಲೋಪಗಳು ಕೆಲವು ಇಲಾಖೆಗಳಿಂದ ಕಾಣುತ್ತದೆ. ಇದನ್ನು ಸುಳ್ಯದ ಸಜ್ಜನ ಶಾಸಕ ಅಂಗಾರ ಅವರೂ ಪ್ರಶ್ನೆ ಮಾಡುವುದಿಲ್ಲ. ಹೀಗಾಗಿ ಕಾಮಗಾರಿಗಳೂ ಹೀಗೇ ನಡೆಯುತ್ತದೆ ಎಂದು ಜನರು ಹೇಳುತ್ತಾರೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…