ಸುಳ್ಯ.ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್(ಎಸ್.ಎಸ್.ಎಫ್) ಸುಳ್ಯ ಡಿವಿಷನ್ ಕ್ಯೂ ಟೀಂ ವತಿಯಿಂದ ಸುಳ್ಯ ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದ ಪರಿಸರವನ್ನು 28 ರಂದು ಸ್ವಚ್ಛಗೊಳಿಸಲಾಯಿತು. ಬೆಳಗ್ಗೆ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕ ತಾಲೂಕು ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಕರುಣಾಕರ ಕೆ.ವಿ ಚಾಲನೆ ನೀಡಿದರು.
ತಾಲೂಕು ಆಸ್ಪತ್ರೆಯ ಶವಾಗಾರದ ಪರಿಸರದಲ್ಲಿ ಶೇಖರಣೆಗೊಂಡಿದ್ದ ಕಸ ತ್ಯಾಜ್ಯಗಳನ್ನು ಜೆಸಿಬಿ ಯಂತ್ರದ ಮೂಲಕ ಅಲ್ಲಿಂದ ತೆಗೆಸಿ ಶುಚಿಗೊಳಿಸಲಾಯಿತು. ಆಸ್ಪತ್ರೆಯ ಮುಂಭಾಗದ ಮೂಲಕ ಶವಾಗಾರಕ್ಕೆ ತೆರಳುವ ದಾರಿ ಮತ್ತು ಆಸ್ಪತ್ರೆಯ ಸುತ್ತಮುತ್ತಲೂ ಬೆಳೆದಿದ್ದ ಕಾಡು ಕೊಳೆಗಳನ್ನು ಕಟಾವು ಯಂತ್ರದ ಮೂಲಕ ತೆರವುಗೊಳಿಸಲಾಯಿತು.
ಎಸ್. ಎಸ್. ಎಫ್ ಸುಳ್ಯ ಡಿವಿಷನ್ ಅಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ, ದ.ಕ ಈಸ್ಟ್ ಝೋನ್ ಬ್ಲಡ್ ಸೈಬೋ ಉಸ್ತುವಾರಿ ಸಿದ್ದೀಖ್ ಗೂನಡ್ಕ, ಎಸ್.ವೈ.ಎಸ್ ನಾಯಕರುಗಳಾದ ಅಶ್ರಫ್ ಸಖಾಫಿ ಕುಂಬಕ್ಕೋಡು, ಹಸೈನಾರ್ ಗುತ್ತಿಗಾರು, ಸಂಶುದ್ದೀನ್ ಪಳ್ಳಿಮಜಲು ಮುಂತಾದವರ ನೇತೃತ್ವದಲ್ಲಿ ಸುಮಾರು ಮೂವತ್ತರಷ್ಟು ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಕಾರ್ಯಕರ್ತರನ್ನು ಸುಳ್ಯ ನಗರ ಪಂಚಾಯತ್ ಸದಸ್ಯ ಉಮರ್ ಕೆ.ಎಸ್. ರವರು ಪಾಲ್ಗೊಂಡು ಮಾರ್ಗದರ್ಶನ ನೀಡಿ ಸಹಕರಿಸಿದರು.
ಎಸ್‌ಎಸ್‌ಎಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹುದ್ದೀನ್ ಹಿಮಮಿ, ಕೆಸಿಎಫ್ ಅಬುಧಾಬಿ ಪಬ್ಲೀಕೇಶನ್ ಕನ್ವಿನರ್ ಕಬೀರ್ ಜಟ್ಟಿಪಳ್ಳ ಸ್ವಚತೆ ಬಗ್ಗೆ ಮಾಹಿತಿ ನೀಡಿದರು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…