ಸುಳ್ಯ: ಜಲಸಂರಕ್ಷಣೆಯ ಜಾಗೃತಿಯ ಉದ್ದೇಶದಿಂದ ಆರಂಭಗೊಂಡಿರುವ “ಮನೆಮನೆ ಇಂಗುಗುಂಡಿ” ಅಭಿಯಾನ ಸುಳ್ಯದ ಸರಕಾರಿ ಪದವಿಪೂರ್ವ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಜರಗಿತು.
ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ. ಚಂದ್ರಶೇಖರ ದಾಮ್ಲೆ ಭವಿಷ್ಯದಲ್ಲಿ ನೀರಿನ ಕೊರತೆಯನ್ನು ನೀಗಿಸಲು ಇಂಗು ಗುಂಡಿಗಳ ಅಗತ್ಯವನ್ನು ಮನಗಾಣಿಸಿದರು.
ಭಾಗವಹಿಸಿದ್ದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳ ವಠಾರದಲ್ಲಿ ಇಂಗು ಗುಂಡಿ ಮಾಡಲು ನಿರ್ಧರಿಸಿದರು. ಕಾಲೇಜಿನ ಪ್ರಭಾರ ಉಪಪ್ರಾಂಶುಪಾಲೆ ಜಯಶ್ರೀ ಹಾಗೂ ಶಿಕ್ಷಕಿ ವಿಜಯಲಕ್ಷಿ ಮತ್ತು ಸ್ನೇಹಶಾಲೆಯ ಶಿಕ್ಷಕ ದೇವಿಪ್ರಸಾದ್ ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel