ಇತ್ತೀಚೆಗೆ ಸುಳ್ಯ-ಪುತ್ತೂರು ರಸ್ತೆಯ ಬದಿಯ ಕೆರೆಗೆ ಕಾರೊಂದು ಉರುಳಿ ಬಿದ್ದು 4 ಜನರು ಮೃತರಾದರು. ಈ ದಾರುಣ ಘಟನೆ ಬಳಿಕ ಹಲವು ಕಡೆಗಳಲ್ಲಿ ಇಂತಹ ಕೆರೆಗಳು ಇರುವುದರ ಬಗ್ಗೆ ಜನಸಾಮಾನ್ಯರು ಹೇಳುತ್ತಾರೆ.ಇಂತಹದ್ದೇ ಒಂದು ಕೆರೆಯ ಬಗ್ಗೆ ಸುಳ್ಯನ್ಯೂಸ್.ಕಾಂ ಗೆ ಫೋಟೋ ಸಹಿತ ಸಾರ್ವಜನಿಕರು ಕಳುಹಿಸಿದ್ದಾರೆ. ಅದರ ಕಡೆಗೆ ಬೆಳಕು ಹರಿಸಲಾಗಿದೆ. ಇದನ್ನು ಆಡಳಿತವು ಗಮನಿಸಿ ತುಸು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ದಾರುಣ ಘಟನೆಗಳು ಕಡಿಮೆ ಆದಾವು ಎಂಬ ಆಶಯದೊಂದಿಗೆ..
ಸುಳ್ಯ-ಪುತ್ತೂರು ರಸ್ತೆಯಲ್ಲಿ ಕೆರೆಗೆ ಕಾರು ಬಿದ್ದು 4 ಜನ ಮೃತಪಟ್ಟ ಬಳಿಕ ಇದೀಗ ಸಾರ್ವಜನಿಕರು ಎಚ್ಚರಿಕೆ ವಹಿಸಿ ಅಂತಹ ಘಟನೆಗಳು ಮರುಕಳಿಸಬಾರದು ಎಂದು ಜಾಗೃತೆ ವಹಿಸಿದ್ದಾರೆ. ಮಾಧ್ಯಮಗಳ ಮೂಲಕ ಆಡಳಿತವನ್ನು ಎಚ್ಚರಿಸುವ ಹಾಗೂ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈಗ ಸುಳ್ಯ-ಗುತ್ತಿಗಾರು ರಸ್ತೆ ನಡುವಿನ ನಾರ್ಣಕಜೆ ಬಳಿಯ ಕೆರೆಯ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಇಲ್ಲಿ ಇನ್ನಷ್ಟು ಮುಂಜಾಗ್ರತೆ ಬೇಕು ಎಂದು ಹೇಳಿದ್ದಾರೆ.
ಸುಳ್ಯ-ಗುತ್ತಿಗಾರು ರಸ್ತೆಯ ನಾರ್ಣಕಜೆ ಎಂಬಲ್ಲಿ ಕೆರೆಯೊಂದು ಇದೆ. ಇದಕ್ಕೆ ಈಗಾಗಲೇ ಲೋಕೋಪಯೋಗಿ ಇಲಾಖೆ ತಡೆಗೋಡೆ ಕಟ್ಟಿದೆ. ಆದರೆ ಅದು ಪೂರ್ತಿಯಾಗಿಲ್ಲ. ಈ ರಸ್ತೆ ಮೂಲಕ ಸ್ಥಳೀಯರು ಮಾತ್ರವಲ್ಲ ದೂರದ ಊರಿನಿಂದ ಅನೇಕರು ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ತೆರಳುತ್ತಾರೆ. ಹೀಗಾಗಿ ಪರವೂರಿನ ಮಂದಿಗೆ ಇಲ್ಲಿ ಕೆರೆ ಇರುವುದು ಅರಿವಿಗೆ ಬರುವುದಿಲ್ಲ. ಗುತ್ತಿಗಾರು ಕಡೆಯಿಂದ ಬರುವ ವೇಳೆ ನಿಯಂತ್ರಣ ತಪ್ಪಿದರೆ ಅಪಾಯವಾಗುವ ಸಾಧ್ಯತೆ ಇದೆ. ಇಲ್ಲಿ ಯಾವುದೇ ತಡೆಗೋಡೆ ಇಲ್ಲದೇ ಇರುವುದು ಹಾಗೂ ಕಾಡುಪೊದೆಗಳೂ ಇಲ್ಲಿ ತುಂಬಿರುವುದು ಅಪಾಯಕ್ಕೆ ಕಾರಣವಾಗುತ್ತದೆ. ಈ ಹಿಂದೊಮ್ಮೆ ವಾಹನವೊಂದು ಇಲ್ಲಿ ಬಿದ್ದಿತ್ತು ಎಂದು ಸಾರ್ವಜನಿಕರು ನೆನಪು ಮಾಡುತ್ತಾರೆ. ಈ ಕಾರಣದಿಂದ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಇಡೀ ಕೆರೆಗೆ ರಸ್ತೆ ಭಾಗದಿಂದ ತಡೆಗೋಡೆ ಅಗತ್ಯ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಮೂಲಕ ಅಪಾಯ ತಪ್ಪಿಸಬೇಕು ಎಂದು ಆಡಳಿತದ ಗಮನ ಸೆಳೆದಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…