Advertisement
ಸುದ್ದಿಗಳು

ಸುಳ್ಯ ಗೃಹರಕ್ಷಕದಳ ಘಟಕ ಕ್ರಿಯಾಶೀಲ – ಡಾ|ಮುರಲೀ ಮೋಹನ್ ಚೂಂತಾರು

Share

ಸುಳ್ಯ: ಜಿಲ್ಲೆಯಲ್ಲಿ ಸುಳ್ಯ ಗೃಹರಕ್ಷಕದಳದ ಘಟಕ ಅತ್ಯಂತ ಕ್ರಿಯಾಶೀಲ ಘಟಕ ಹಾಗೂ ಪ್ರಸ್ತುತ ವರ್ಷಗಳಲ್ಲಿ ಪ್ರಾಕೃತಿಕ ವಿಕೋಪ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ರಕ್ಷಿಸುವ ಮೂಲಕ ಜಿಲ್ಲಾ ಗೃಹರಕ್ಷಕ ಇಲಾಖೆ ಉತ್ತಮ ಕಾರ್ಯ ನಿರ್ವಹಿಸಿದೆ ಎಂದು ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ|ಮುರಲೀ ಮೋಹನ್ ಚೂಂತಾರು ಹೇಳಿದರು.

Advertisement
Advertisement
Advertisement

ಅವರು  ಸುಳ್ಯ ಜೂನಿಯರ್ ಕಾಲೇಜು ಬಳಿ ಇರುವ ಸುಳ್ಯ ಗೃಹರಕ್ಷಕದಳ ಹಾಗೂ ಪೌರರಕ್ಷಣಾದಳ ಕಚೇರಿಗೆ ಭೇಟಿ  ನೀಡಿದ ಬಳಿಕ ಮಾತನಾಡಿದರು. ಇದೇ ಸಂದರ್ಭ  ಘಟಕದ ಕಚೇರಿಯಲ್ಲಿ ಪ್ರತಿ ಗೃಹರಕ್ಷಕರ ಅಹವಾಲು ಸ್ವೀಕರಿಸಿದರು.

Advertisement

ಘಟಕದ ವತಿಯಿಂದ ವನಮಹೋತ್ಸವ: ಸುಳ್ಯ ಘಟಕದ ಕಚೇರಿ ಆವರಣದಲ್ಲಿ ವನಮಹೋತ್ಸವ ನಡೆಯಿತು. ಈ ವೇಳೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುಳ್ಯ ಲಯನ್ಸ್ ಕ್ಲಬ್ ನ ಮಾಜಿ ಗವರ್ನರ್ ಲಯನ್ಸ್ ಎಂ.ಬಿ.ಸದಾಶಿವ ಮಾತನಾಡಿ ಪ್ರಸ್ತುತ ವರ್ಷಗಳಲ್ಲಿ ಸುಳ್ಯ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ಸಮಯದಲ್ಲಿ ಪರಿಣಾಮಕಾರಿ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕರನ್ನು ಅಭಿನಂದಿಸಿದರು ಹಾಗೂ ತುರ್ತು ಸಂಧರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನೂ ತೊರೆದು ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ ಮಾಡಿದ ಗೃಹರಕ್ಷಕದಳದ ಕಾರ್ಯ ಶ್ಲಾಘನೀಯ ಗೃಹರಕ್ಷಕರು ಸಮಾಜದ ಆಸ್ತಿ ಎಂದು ನುಡಿದರು.

ಸುಳ್ಯ ಅರಣ್ಯ ಅಭಿವೃದ್ಧಿ ನಿಗಮದ ಮೆನೇಜರ್ ಲಯನ್ಸ್ ರಂಗನಾಥ್ ಮಾತನಾಡಿ ಮನಷ್ಯನ ಸ್ವಾರ್ಥಕ್ಕಾಗಿ ಪರಿಸರ ನಾಶವಾಗುತ್ತಿದೆ ಪರಿಸರದ ಅಸೋಮತೋಲನದಿಂದ ನಮಗೆ ತೊಂದರೆ ನಮಗಾಗಿ ಪರಿಸರ ರಕ್ಷಣೆ ಅನಿವಾರ್ಯ ಗೃಹರಕ್ಷಕದಳದ ವನಮಹೋತ್ಸವದಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು.

Advertisement

ಕಮಾಂಡೆಂಟ್ ಅವರಿಗೆ ಸುಳ್ಯ ಘಟಕದಿಂದ ಸನ್ಮಾನ: ಇದೆ ಸಂಧರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಡಾ|ಮುರಲೀ ಮೋಹನ್ ಚೂಂತಾರು ಅವರು  ಬರೆದ ಸಂಜೀವಿನಿ ಎಂಬ ಪುಸ್ತಕ ಕ್ಕೆ ರಾಜ್ಯ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ಘಟಕದ ವತಿಯಿಂದ ಸುಳ್ಯ ಲಯನ್ಸ್ ಅಧಕ್ಷರಾದ ಗಂಗಾಧರ ರೈ ಹಾಗೂ ಎಂ.ಬಿ.ಸದಾಶಿವ ರವರು ಸನ್ಮಾನಿಸಿದರು.

ಈ ವೇಳೆಗೆ ಸುಳ್ಯ ಘಟಕಾಧಿಕಾರಿ ಜಯಂತ್ ಶೆಟ್ಟಿ , ಸುಳ್ಯ ಘಟಕದ ಸಾರ್ಜೆಂಟ್ ಅಬ್ದುಲ್ ಗಫೋರ್, ರಾಜೇಶ್.ಬಿ ಎನ್.ಆರ್.ಸೋಮನಾಥ್, ಅಶ್ವತ್ಥ್. ಕೆ,ಘಟಕದ 60ಗೃಹರಕ್ಷಕರು,ರಕ್ಷಕಿಯರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

2 hours ago

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

8 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

8 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

1 day ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

1 day ago