ಸುದ್ದಿಗಳು

ಸುಳ್ಯ ತಾಪಂ ಸಭೆ : ಆಡಳಿತ ಪಕ್ಷದ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಸಭೆಯಲ್ಲೇ ಬಹಿರಂಗ…!

Share

ಸುಳ್ಯ:  ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ  ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಈ ಬಾರಿಯ ಸಭೆಯಲ್ಲಿ ಆಡಳಿತ ಪಕ್ಷದ  ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಸಭೆಯಲ್ಲಿ ಬಹಿರಂಗಗೊಂಡಿದೆ.

ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿಜೆಪಿ ಸದಸ್ಯ ರಾಧಾಕೃಷ್ಣ ಬೊಳ್ಳೂರು  ಅವರ ನಿಲುವನ್ನು ತಾಪಂ ಅಧ್ಯಕ್ಷ ಹಾಗೂ ಬಿಜೆಪಿ ಸದಸ್ಯರು ಬಹಿರಂಗವಾಗಿಯೇ ಖಂಡಿಸಿದರು. ನಗರ ಪಂಚಾಯತ್ ಕೊಳಚೆ ವಿಚಾರದಲ್ಲಿ ಸುದೀರ್ಘವಾಗಿ ಮಾತನಾಡಿದಾಗಲೂ ಬಿಜೆಪಿ ಸದಸ್ಯರೊಬ್ಬರು ಅಸಹಿಷ್ಣುತೆ ವ್ಯಕ್ತಪಡಿಸಿದರು.

ವಿವರ ಹೀಗಿದೆ…..

ಸಭೆ ಆರಂಭಗೊಂಡು ಪಾಲನಾ ವರದಿ ಚರ್ಚೆ ಆರಂಭಿಸಿದಾಗ “ಮೊದಲು ಸ್ಥಾಯಿ ಸಮಿತಿಯ ಲೆಕ್ಕಪತ್ರ ಮತ್ತು ಪಾಲನಾ ವರದಿ ಮಂಡಿಸಿ ಬಳಿಕ ತಾ.ಪಂ. ಪಾಲನಾ ವರದಿ ಕುರಿತು ಚರ್ಚೆ ನಡೆಯಬೇಕು ಎಂಬುದು ಕಾನೂನು. ಹಾಗೆ ಮಾಡಬೇಕು” ಎಂದು ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿಜೆಪಿ ಸದಸ್ಯ ರಾಧಾಕೃಷ್ಣ ಬೊಳ್ಳೂರು ಪಟ್ಟು ಹಿಡಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಚನಿಯ ಕಲ್ತಡ್ಕ “ಈ ತಾಲೂಕು ಪಂಚಾಯತ್ ಆರಂಭದಿಂದಲೂ ಇದೇ ರೀತಿಯ ನಡವಳಿ ಮುಂದುವರಿಯುತ್ತಾ ಬಂದಿದೆ. ಕಾನೂನು ಹಾಗಿದ್ದರೆ ನೀವು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾಗ ಯಾಕೆ ಕಾನೂನು ಪಾಲನೆ ಮಾಡಲಿಲ್ಲ” ಎಂದು ರಾಧಾಕೃಷ್ಣ ಬೊಳ್ಳೂರು ಅವರನ್ನು ಪ್ರಶ್ನಿಸಿದರು. ಅಧ್ಯಕ್ಷರ ಉತ್ತರಕ್ಕೆ ಬಿಜೆಪಿಯ ಇತರ ಸದಸ್ಯರು ಧ್ವನಿಗೂಡಿಸಿದರು.

ನಗರ ಪಂಚಾಯತ್ ಕೊಳಚೆ ವಿಚಾರದಲ್ಲಿ ರಾಧಾಕೃಷ್ಣ ಬೊಳ್ಳೂರು ಸುದೀರ್ಘ ಚರ್ಚೆ ನಡೆಸಿದಾಗ ಅಸಹಿಷ್ಣುತೆ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಉದಯ ಕೊಪ್ಪಡ್ಕ ನಗರ ಪಂಚಾಯತ್ ಕೊಳಚೆ ಒಂದು ವಿಷಯವನ್ನು ಮಾತ್ರ ಅಸ್ಟು ದೀರ್ಘ ಚರ್ಚೆ ಮಾಡಿದರೆ ಹೇಗೆ, ನಮಗೆ ಬೇರೆ ವಿಚಾರ ಚರ್ಚೆ ಮಾಡಲು ಇದೆ ಎಂದು ಹೇಳಿದ ಘಟನೆಗೂ ಸಭೆ ಸಾಕ್ಷಿಯಾಯಿತು.

ಅಧಿಕಾರಿಗಳು ಗೈರು- ಒಂದು ಗಂಟೆ ತಡವಾಗಿ ಸಭೆ ಆರಂಭ:

ತಾ.ಪಂ.ಸಭೆಗೆ ಅಧಿಕಾರಿಗಳು ಗೈರಾದ ಕಾರಣ ತಾ.ಪಂ.ಸಾಮಾನ್ಯ ಸಭೆ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿರಲಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು ಅಧಿಕಾರಿಗಳು ಇಲ್ಲದೆ ಸಭೆ ನಡೆಸುವುದು ಬೇಡ. ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಬಳಿಕ ಕೆಲವು ಅಧಿಕಾರಿಗಳು ಆಗಮಿಸಿದ ಬಳಿಕ ಒಂದು ಗಂಟೆಗೂ ಹೆಚ್ಚು ಸಮಯ ತಡವಾಗಿ ಸಭೆ ಆರಂಭಗೊಂಡಿತು.

ಕಳೆದ ಕೆಲವು ಸಮಯಗಳಿಂದ ಸುಳ್ಯದ ಹಲವು ಸಭೆಗಳು ಇದೇ ಮಾದರಿಯಲ್ಲಿ ನಡೆಯುತ್ತಿದೆ. ಸಭೆ ನಡೆಸಿದ ಬಳಿಕ ಫಾಲೋ ಅಪ್ ಇಲ್ಲದೇ ಇರುವುದು ಕಂಡುಬಂದರೆ. ಅಧಿಕಾರಿಗಳಿಗೂ ಸಭೆಯ ಬಗ್ಗೆ ಗಂಭೀರತೆ ಇಲ್ಲದೇ ಇರುವುದು  ಕಂಡುಬಂದಿದೆ.  ಸಭೆಯಲ್ಲಿ ಕೇಳುವ ಪ್ರಶ್ನೆಗೆ ಮಾಡಲಾಗಿದೆ, ತಿಳಿಸಲಾಗಿದೆ ಎಂಬ ವರದಿಯೊಂದಿಗೆ ಸಭೆ ಮುಕ್ತಾಯವಾಗುವುದು ಕಂಡುಬರುತ್ತಿದೆ. ಸುಳ್ಯದ ಪ್ರಮುಖವಾದ ವಿದ್ಯುತ್ ಸಮಸ್ಯೆ , ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆಯ ಬಗ್ಗೆ ಇದುವರೆಗೆ ನಡೆದ ಬಹುತೇಕ ಸಭೆಗಳೂ ಫಲ ನೀಡದೇ  ಇರುವುದು  ಕಂಡುಬಂದಿದೆ.

 

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

6 hours ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

6 hours ago

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…

6 hours ago

ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago

ಸಂಬಾರ ಮಂಡಳಿಯ ದರ ಪಟ್ಟಿಯಲ್ಲಿ ಶಿರಸಿಯ ಕಾಳುಮೆಣಸು ನಮೂದಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…

14 hours ago

ಹೆತ್ತವರವನ್ನು ನೋಡಿಕೊಳ್ಳದ ಮಕ್ಕಳ ದಾನಪತ್ರ ರದ್ದುಗೊಳಿಸುವ ಅವಕಾಶ ಕಾನೂನಿನಲ್ಲಿದೆ | ಸಚಿವ ಕೃಷ್ಣಭೈರೇಗೌಡ

ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…

14 hours ago