Advertisement

ಸುಳ್ಯ ತಾಲೂಕಿನಲ್ಲಿ ಮಾದರಿಯಾದ ಅರಂತೋಡು ಸಹಕಾರಿ ಸಂಘ | ಸಹಕಾರಿ ಸಂಘ ಹೀಗೂ “ಸಹಕಾರ” ಮಾಡಬಹುದು |

Share

ಸುಳ್ಯ: ಕೊರೊನಾ ವೈರಸ್ ಹರಡುವುದು ತಡೆಯಲು ಲಾಕ್ಡೌನ್ ಅನಿವಾರ್ಯವಾಗಿ ಮಾಡಲೇಬೇಕಾಗಿತು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತಕ್ಕಾಗಿ ಕೈಗೊಂಡಿರುವ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಿದರು.

ಆದರೆ ಗ್ರಾಮೀಣ ಭಾಗದಲ್ಲಿ ತಕ್ಷಣವೇ ಎಲ್ಲಾ ವ್ಯವಸ್ಥೆಗಳು ಸರಕಾರಕ್ಕೂ ಮಾಡಲೂ ಕಷ್ಟವಿದೆ. ಇಂತಹ ಸಂದರ್ಭದಲ್ಲಿ  ಸಂಘಸಂಸ್ಥೆಗಳು ನೆರವಿಗೆ ಬಂದರೆ ಯಶಸ್ಸು ಖಚಿತ. ಆದರೆ ಸುಳ್ಯದಂತಹ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಅನುಷ್ಟಾನವಾಗಲೇಬೇಕೆಂದು ಶ್ರಮ ವಹಿಸುವ ಮಂದಿ ಇದ್ದಾರೆ. ಅಂತಹದ್ದರಲ್ಲಿ  ಮುಂಚೂಣಿಯಲ್ಲಿ  ಯೋಜನಾಬದ್ಧವಾಗಿ ಕೆಲಸ ಮಾಡಿ ಗಮನ ಸೆಳೆದಿರುವುದು ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ.

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಡಳಿತ ಮಂಡಳಿ  ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಘದ ಸದಸ್ಯರ ನೆರವಿಗೆ ಹಲವು ಯೋಜನೆಗಳನ್ನು ಘೋಷಿಸಿದೆ.

ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಸದಸ್ಯರು ಪಡೆದಿರುವ ಕೃಷಿಯೇತರ ಸಾಲಗಳ ಕಂತುಗಳನ್ನು 30 ದಿನಗಳ ಮಟ್ಟಿಗೆ ಮುಂದೂಡಿದೆ. ಕೃಷಿಕ ಸದಸ್ಯರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಲಭ್ಯವಿಲ್ಲದೆ ಇರುವುದರಿಂದ ಹಾಗು ಇದರಿಂದ ನಗದಿನ ಲಭ್ಯತೆಯಿಲ್ಲದಿರುವುದರಿಂದ ಕೃಷಿಕರ ಮತ್ತು ಸಂಘದ ಹಿತದೃಷ್ಟಿಯಿಂದ ಸದಸ್ಯರ ಕೃಷಿಯೇತರ ಸಾಲಗಳ ಕಂತುಗಳನ್ನು ಮುಂದೂಡಿದೆ. ಹಾಗೂ ಸಂಘದ ವ್ಯಾಪ್ತಿಯಲ್ಲಿನ ಪಡಿತರ ಚೀಟಿಯಿಲ್ಲದ ಸುಮಾರು 50 ಕಡು ಬಡವ ಕುಟುಂಬಗಳಿಗೆ ಉಚಿತವಾಗಿ ಪಡಿತರ ಕಿಟ್ ವಿತರಿಸಲಾಯಿತು ಮತ್ತು ಸಂಘದ ವ್ಯಾಪ್ತಿಯಲ್ಲಿನ ಹೊರ ರಾಜ್ಯದ ಕಾರ್ಮಿಕರಿಗೆ ಕೂಡ ಪಡಿತರವನ್ನು ವಿತರಿಸಿದೆ.

 

ಸಂಘದ ಸದಸ್ಯರ ತುರ್ತು ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸದಸ್ಯರಿಂದ ಸ್ಪರ್ಧಾತ್ಮಕ ದರದಲ್ಲಿಎ.13 ರಿಂದ ಗೇರುಬೀಜಗಳನ್ನು ಸಂಗ್ರಹಿಸಲು ತೀರ್ಮಾನಿಸಿದೆ. ಈ ಆರ್ಥಿಕ ತುರ್ತು ಸಂದರ್ಭದಲ್ಲಿ ಬೆಳೆಗಳನ್ನು ಮಾರಾಟ ಮಾಡಲು ಮಾರುಕಟ್ಟೆಯ ಲಭ್ಯತೆ ಇಲ್ಲದಿರುವಿಕೆಯಿಂದ ಕೃಷಿಕರ ಬೆಳೆಗಳನ್ನು ಕಡಿಮೆ ಬೆಲೆ ನೀಡಿ ಬೆಳೆಗಳನ್ನು ಖರೀದಿಸುತ್ತಿರುವುದು ಕಂಡು ಬಂದಿರುವುದರಿಂದ ಸಂಘದ ಸದಸ್ಯರಿಗೆ ಬೆಳೆದ ಬೆಳೆಗಳ ಆಧಾರದಲ್ಲಿ ಉತ್ಪತ್ತಿ ಈಡಿನ ಸಾಲ ನೀಡಲು ಕೂಡ ತೀರ್ಮಾನಿಸಿದೆ.

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ತೊಡಿಕಾನ ಗ್ರಾಮದ 7 ವಿತರಣಾ ಕೇಂದ್ರಗಳಲ್ಲಿ ಮತ್ತು  ಅರಂತೋಡು ಗ್ರಾಮದ 5 ವಿತರಣಾ ಕೇಂದ್ರಗಳಲ್ಲಿ ಪಡಿತರವನ್ನು ಫಲಾನುಭವಿಗಳಿಗೆ ವಿತರಿಸಿತು.

ಕೇಂದ್ರ ಸರಕಾರದ ಲಾಕ್ಡೌನ್ ಆದೇಶದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಕ್ರಮವನ್ನು ಸಂಘದ ಆಡಳಿತ ಮಂಡಳಿಯು ತೀರ್ಮಾನಿಸಿತು. ಪಡಿತರ ವಿತರಣೆಯ ಸಂದರ್ಭದಲ್ಲಿನ ಉಂಟಾಗಬಹುದಾದ ಗುಂಪುಸೇರುವಿಕೆಯನ್ನು ತಡೆಯುವ ಸಲುವಾಗಿ ಹಾಗು ಈ ಮೂಲಕ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಸಲುಬಾಗಿ ಮತ್ತು ಸರಕಾರದ ಲಾಕ್ಡೌನ್ ಉದ್ದೇಶವು ಯಶಸ್ವಿಯಾಗಿ ಪಾಲಿಸುವ ನಿಟ್ಟಿನಲ್ಲಿ ಸಂಘದ ಸದಸ್ಯರ ಮತ್ತು ಸಿಬ್ಬಂದಿಗಳ ಹಿತದೃಷ್ಟಿಯಿಂದ ಸಂಘದ ಆಡಳಿತ ಮಂಡಳಿಯು ತುರ್ತು ಸಭೆ ಸೇರಿ ಮತ್ತು ಸಂಘದ ವ್ಯಾಪ್ತಿಯಲ್ಲಿನ ಪ್ರಮುಖರ ಸಭೆಯನ್ನು ಕರೆದು ಪಡಿತರವನ್ನು ಬೈಲುವಾರು ವಿತರಣೆಯ ತೀರ್ಮಾನವನ್ನು ಕೈಗೊಂಡಿತು.

ಸಂಘದ ವತಿಯಿಂದ ವಾರ್ಡ್‍ವಾರು ಪಡಿತರ ವಿತರಣೆಯನ್ನು ವಿತರಿಸುವ ಸಂದರ್ಭದಲ್ಲಿ ಅರಂತೋಡು ಜಿಲ್ಲಾ ಪಂಚಾಯತ್ ಸದಸ್ಯರಾದ  ಹರೀಶ್ ಕಂಜಿಪಿಲಿಯವರು, ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾ ಮೇದಪ್ಪರವರು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕೊಡೆಂಕೇರಿಯವರು ವಿತರಣಾ ಕೇಂದ್ರಗಳಿಗೆ ಭೇಟಿಯನ್ನು ನೀಡಿದರು. ಅರಂತೋಡು ಮತ್ತು ತೊಡಿಕಾನ ಗ್ರಾಮದ ಗ್ರಾಮಲೆಕ್ಕಿಗರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಂಪೂರ್ಣವಾಗಿ ಸಹಕರಿಸಿದರು.

ಪಡಿತರವನ್ನು ವಾರ್ಡ್‍ವಾರು ವಿತರಿಸುವ ಸಂದರ್ಭದಲ್ಲಿ ಸಂಘದ ನಿರ್ದೇಶಕರು ಮತ್ತು ಸದಸ್ಯರುಗಳು ಪಿಕಪ್ ವಾಹನಗಳನ್ನು ಉಚಿತವಾಗಿ ನೀಡಿ ಪಡಿತರಗಳ ಸಾಗಾಟಕ್ಕಾಗಿ ಸಂಪೂರ್ಣವಾಗಿ ಸಹಕರಿಸಿದರು. ಪಡಿತರ ವಿತರಣೆಗೆ ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಗಂಗಾಧರ ಬನ, ಕೇಶವ ಅಡ್ತಲೆ, ನಾಗೇಶ್ ಅಡ್ಯಡ್ಕ, ಧನಲಕ್ಷ್ಮಿ ಅಮೆಮನೆ, ಸುಶೀಲಾ ಪಂಜಿಕೋಡಿ, ಚಿತ್ರಾ ದೇರಾಜೆ, ರವಿ ಪೂಜಾರಿ ಆಯಾಯ ವಾರ್ಡ್‍ಗಳ ಜವಾಬ್ದಾರಿ ವಹಿಸಿಕೊಂಡು ಸಹಕರಿಸಿದರು.

ಅರಂತೋಡು ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಮೋಹನ್ ದೇರಾಜೆ, ದಿವ್ಯ ಮತ್ತು ಚೌಕಾರು ದೊಡ್ಡಕುಮೇರಿ, ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷರಾದ ದಯಾನಂದ್ ಕುರುಂಜಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ನಿರ್ದೇಶಕರುಗಳಾದ ಕುಸುಮಾಧರ ಅಡ್ಕಬಳೆ, ಚಂದ್ರಶೇಖರ ಚೋಡಿಪಣೆ, ವಿನೋದು ಉಳುವಾರು, ಸಂತೋಷ್ ಸಿ. ಕೆ. ನಿಧೀಶ್ ಅರಂತೋಡು, ಚಿತ್ರಾ ದೇರಾಜೆ, ಗಣೇಶ್ ಕರಿಂಬಿ, ಸೋಮಯ್ಯ, ಭಾರತಿ ಪಿ, ವಿಜೇತ್ ಮರುವಳ, ಕೇಶವ ಅಡ್ತಲೆ, ಎ.ಪಿ.ಎಮ್.ಸಿ ಅಧ್ಯಕ್ಷರಾದ ದೀಪಕ್ ಕುತ್ತಮೊಟ್ಟೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪಕರಾದ ಆನಂದ ಕಲ್ಲುಗದ್ದೆ, ಮಾಜೀ ಜಿ.ಪಂ. ಸದಸ್ಯ ಸತೀಶ್ ನಾಯ್ಕ ಮೊದಲಾದವರು ಸಹಕರಿಸಿದರು. ಸ್ಪಂದನ ಗೆಳೆಯರ ಬಳಗ ಅಡ್ತಲೆ, ಯುವ ಬ್ರಿಗೇಡ್ ಅರಂತೋಡು ಇದರ ಸದಸ್ಯರು ಸಹಕರಿಸಿದರು.

ಸಂಕ್ಷಿಪ್ತ ರೂಪ ಹೀಗೆ……

  • ಸದಸ್ಯರ ಕೃಷಿಯೇತರ ಸಾಲಗಳ ಕಂತುಗಳನ್ನು 30 ದಿನಗಳ ಮಟ್ಟಿಗೆ ಮುಂದೂಡಿಕೆ.
  • ಸಂಘದ ವ್ಯಾಪ್ತಿಯಲ್ಲಿ ಪಡಿತರ ಚೀಟಿಯಿಲ್ಲದ ಸುಮಾರು 50 ಕುಟುಂಬಗಳಿಗೆ ಸಂಘದ ವತಿಯಿಂದ ಉಚಿತ ಪಡಿತರ ಕಿಟ್ ವಿತರಣೆ.
  • ಸಂಘದ ಸದಸ್ಯರ ತುರ್ತು ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಗೇರು ಬೀಜಗಳನ್ನು ಸಂಗ್ರಹಿಸಲು ನಿರ್ಧಾರ.
  • ಸಂಘದ ವ್ಯಾಪ್ತಿಯಲ್ಲಿರುವ ಹೊರ ರಾಜ್ಯದ ಕಾರ್ಮಿಕರಿಗೆ ಪಡಿತರವನ್ನು ಉಚಿತವಾಗಿ ನೀಡಿಕೆ.
  • ಸಂಘದ ವತಿಯಿಂದ ಅರಂತೋಡು ಮತ್ತು ತೊಡಿಕಾನ ಗ್ರಾಮಗಳಲ್ಲಿ ವಾರ್ಡ್ ವಾರು ಪಡಿತರ ವಿತರಣೆ.
  • ಸಂಘದ ವ್ಯಾಪ್ತಿಯಲ್ಲಿ 9 ಕಡೆಗಳಲ್ಲಿ ಏಕಕಾಲದಲ್ಲಿ ಏಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ.
  • ಉಚಿತವಾಗಿ ಪಡಿತರವನ್ನು ಸಾಗಾಣಿಕೆ ಮಾಡಿದ ಸಂಘದ ನಿರ್ದೇಶಕರು ಮತ್ತು ಸದಸ್ಯರು.
  • ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ತೊಡಿಕಾನ ಗ್ರಾಮಲೆಕ್ಕಿಗರು ನೋಡೆಲ್ ಅಧಿಕಾರಿಯಾಗಿ ನೇಮಕ.
  • ಪಡಿತರ ವಿತರಣೆಯಲ್ಲಿ ಸಂಪೂರ್ಣವಾಗಿ ಕೈಜೋಡಿಸಿದ ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು.
  • ಸ್ವಯಂ ಸೇವಕರಾಗಿ ಭಾಗವಹಿಸಿದ ಸಂಘದ ಯುವ ಸದಸ್ಯರು, ಸಂಘ ಸಂಸ್ಥೆಗಳು.
  • ಅತ್ಯಂತ ಅಚ್ಚುಕಟ್ಟಾದ ರೀತಿಯಲ್ಲಿ ಪಡಿತರವನ್ನು ಮನೆ ಮನೆಗೆ ತಲುಪಿಸಿದ ಆಡಳಿತ ಮಂಡಳಿ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

9 hours ago

ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ

ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…

10 hours ago

ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ

ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…

19 hours ago

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ

ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…

19 hours ago

ಭಾರತೀಯ ಕೊಕ್ಕೋಗೆ ಜಾಗತಿಕ ಮಟ್ಟದ ಮಾನ್ಯತೆ | ಈಗ ಮೌಲ್ಯವರ್ಧನೆಯೇ ರೈತರಿಗೆ ಹೊಸ ದಾರಿ

ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…

20 hours ago