ಸುಳ್ಯ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಂಪೂರ್ಣ ಭಾರತವೇ ಎ.14 ರವರೆಗೆ ಲಾಕ್ ಡೌನ್ ಆಗಲಿದೆ. ಹೀಗಾಗಿ ಈಗ ಪ್ರತೀ ತಾಲೂಕು, ಗ್ರಾಮ, ಹಳ್ಳಿಗಳಲ್ಲಿ ಮುಂಜಾಗ್ರತಾ ಕ್ರಮ ನಡೆದಿದೆ. ಸುಳ್ಯ ತಾಲೂಕಿನಲ್ಲಿ ಕಳೆದ 15 ದಿನದಲ್ಲಿ 154 ಮಂದಿ ವಿದೇಶದಿಂದ ಬಂದವರು ಇದ್ದಾರೆ. ಹೀಗಾಗಿ ಇವರ ಆರೋಗ್ಯದ ಮೇಲೆ ನಿಗಾ ಹಾಗೂ ಆ ಮನೆಯವರು ಪ್ರತ್ಯೇಕತೆ ಕಾಯ್ದುಕೊಳ್ಳಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಸುಳ್ಯ ತಾಲೂಕಿನಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಆದರೆ ತೀವ್ರ ನಿಗಾ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲೂ ಎಚ್ಚರಿಕೆ ವಹಿಸಲಾಗಿದೆ.
Advertisement
ಜನರು ಸಾದ್ಯವಾದಷ್ಟು ವ್ಯಕ್ತಿಗಳ ನಡುವೆ ಅಂತರ ಹಾಗೂ ಅಂಗಡಿಗಳಲ್ಲಿ ಅನಗತ್ಯವಾಗಿ ಮುಟ್ಟುವುದು ಕಡಿಮೆ ಮಾಡಬೇಕು. ಮನೆಯಲ್ಲಿ ಸ್ವಚ್ಛತೆ ಹಾಗೂ ಆಗಾಗ ಕೈ ತೊಳೆಯುವುದು ಅಗತ್ಯವಾಗಿದೆ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement