ಸುಳ್ಯ ತಾಲೂಕು ಸಂಪೂರ್ಣ ಸ್ತಬ್ಧ | ಅಗತ್ಯ ವಸ್ತುಗಳ ಖರೀದಿಗೆ ಕಾಲಮಿತಿ | ಮೆಡಿಕಲ್ ಶಾಪ್ ತೆರೆದಿದೆ | ಪೆಟ್ರೋಲ್ ಲಭ್ಯವಿದೆ | ಏನೆಲ್ಲಾ ಸೇವೆ ಇದೆ | ಜನರ ಜವಾಬ್ದಾರಿ ಏನು ?

March 25, 2020
1:35 PM

ಸುಳ್ಯ: ಕೊರೊನಾ ವೈರಸ್ ಹರಡುವುದು ತಡೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಎ.14 ರವರೆಗೆ ಭಾರತ ಲಾಕ್ ಡೌನ್ ಆಗಲಿದೆ. ಇದರ ಮೊದಲ ದಿನ ಸುಳ್ಯ ತಾಲೂಕು ಸ್ತಬ್ಧವಾಗಿದೆ. ವಾಹನಗಳ ಓಡಾಟ ವಿರಳವಾಗಿತ್ತು.

Advertisement

ಸುಳ್ಯ ಸೇರಿದಂತೆ ಬೆಳ್ಳಾರೆ, ಪಂಜ, ಗುತ್ತಿಗಾರು, ಸಂಪಾಜೆ, ಸುಬ್ರಹ್ಮಣ್ಯ ಸೇರಿಂದತೆ ಗ್ರಾಮೀಣ ಭಾಗಗಳಲ್ಲೂ ಜನರ ಓಡಾಟ ವಿರಳವಾಗಿತ್ತು. ಆದರೆ  ಅಗತ್ಯ ವಸ್ತುಗಳ ಖರೀದಿಗೆ ಮಾತ್ರಾ ಜನರು ಮುಗಿಬೀಳುತ್ತಿದ್ದಾರೆ. ಸುಮಾರು 20 ದಿನಗಳಿಗೆ ಸಾಕಾಗುವಷ್ಟು ಮಾತ್ರವೇ ಖರೀದಿ ಮಾಡಿದರೆ ಸಾಕು ಎಂದರೂ ಜನರು ಗೊಂದಲಗಳಿಗೆ ಒಳಗಾಗಿ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ದಿನಸಿ ಅಂಗಡಿಗಳಲ್ಲಿ  ರಶ್ ಉಂಟಾಗುತ್ತಿದೆ. ಇದಕ್ಕಾಗಿ ಇಲಾಖೆಗಳು, ಅಧಿಕಾರಿ ಸರಿಯಾದ ಮಾಹಿತಿ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ. ದಿನಸಿ ಖರೀದಿ ಅಗತ್ಯವಾಗಿದೆ, ಆದರೆ ಅಧಿಕಾರಿಗಳು ಒಂದು ಹೇಳುತ್ತಾರೆ, ಪೊಲೀಸ್ ಇಲಾಖೆ ಇನ್ನೊಂದು ಹೇಳುತ್ತದೆ, ಸ್ಥಳೀಯ ಪಂಚಾಯತ್ ಬೇರೊಂದು ಹೇಳುತ್ತದೆ. ಹೀಗಾಗಿ ಗೊಂದಲ ಇದೆ ಎಂದು ಗ್ರಾಮೀಣ ಭಾಗದಲ್ಲಿ  ಜನರು ಹೇಳುತ್ತಾರೆ.

ಇದಕ್ಕಾಗಿ ಗ್ರಾಮೀಣ ಭಾಗ ಹಾಗೂ ನಗರದಲ್ಲಿ  ದಿನಸಿ ಖರೀದಿಗೆ ಸಮಯದ ಮಿತಿ ನೀಡಿ ಖರೀದಿಗೆ ಅವಕಾಶ ನೀಡಬೇಕು. ಹಾಗೆಂದು ಖರೀದಿ ನೆಪದಲ್ಲಿ  ದಿನವೂ ಪೇಟೆಗ ಬರದಂತೆ ಸ್ಥಳೀಯರೇ ಎಚ್ಚರಿಕೆ ವಹಿಸಬೇಕಿದೆ. ಇದರ ಜೊತೆಗೆ ವರ್ತಕರಿಗೂ ಅಕ್ಕಿ ಸಹಿತ ದಿನಸಿ ಸಾಮಾಗ್ರಿಗಳ ಪೂರೈಕೆಗೂ ಅವಕಾಶ ನೀಡಬೇಕಾಗಿದೆ ಎಂದು ವರ್ತಕರು ಹೇಳುತ್ತಾರೆ.

ಉಳಿದಂತೆ ಪೆಟ್ರೋಲ್, ಮೆಡಿಕಲ್ ಶಾಪ್ ತೆರೆದಿದೆ. ಪಡಿತರ ಅಂಗಡಿಗಳು, ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನುಗಳು, ಪ್ರಾಣಿಗಳ ಮೇವು ಸೇರಿದಂತೆ  ಅಂಗಡಿಗಳು ತೆರೆದಿರಬೇಕು. ಆದರೆ ಲಾಕ್ ಡೌನ್ ನಿಯಮ ಪಾಲನೆ ಮಾಡಬೇಕಿದೆ.

Advertisement

Advertisement

ಕೇಂದ್ರ ಸರಕಾರ ಲಾಕ್ ಡೌನ್ ನಿಯಮದಲ್ಲಿ  ವಿನಾಯಿತಿ ಇರುವ ಸೇವೆಗಳು :

  • ಆಸ್ಪತ್ರೆಗಳು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದ ಔಷಧಾಲಯಗಳು,  ವೈದ್ಯಕೀಯ ಸಲಕರಣೆಗಳ ಅಂಗಡಿಗಳು, ಚಿಕಿತ್ಸಾಲಯಗಳು, ಆಂಬ್ಯುಲೆನ್ಸ್ , ವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಎಲ್ಲಾ ವೈದ್ಯಕೀಯ ಸಿಬ್ಬಂದಿ, ದಾದಿಯರು, ಪ್ಯಾರಾ-ವೈದ್ಯಕೀಯ ಸಿಬ್ಬಂದಿ, ಇತರ ಆಸ್ಪತ್ರೆ ಬೆಂಬಲ ಸೇವೆಗಳಿಗೆ ಸಾಗಿಸಲು ಅನುಮತಿ ಇದೆ
  • ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ.
  • ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಮುಕ್ತವಾಗಿರುತ್ತವೆ.
  • ದೂರಸಂಪರ್ಕ, ಇಂಟರ್ನೆಟ್ ಸೇವೆಗಳು, ಪ್ರಸಾರ ಮತ್ತು ಕೇಬಲ್ ಸೇವೆಗಳು ಮನೆಯಿಂದ ಸಾಧ್ಯವಾದಷ್ಟು ಸುಗಮ ಕೆಲಸವನ್ನು ಖಚಿತಪಡಿಸಿಕೊಳ್ಳಲು ಕಾರ್ಯನಿರ್ವಹಿಸಲಿವೆ.
  • ಇ-ಕಾಮರ್ಸ್ ಸೇವೆ.
  • ಪೆಟ್ರೋಲ್ ಪಂಪ್‌ಗಳು, ಎಲ್‌ಪಿಜಿ, ಪೆಟ್ರೋಲಿಯಂ ಮತ್ತು ಅನಿಲ ಚಿಲ್ಲರೆ ಮತ್ತು ಶೇಖರಣಾ ಮಳಿಗೆಗಳು ತೆರೆದಿರುತ್ತವೆ
  • ವಿದ್ಯುತ್, ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳ ಸೇವೆ

ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಈ  ಕ್ರಮಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು, ಐಪಿಸಿಯ ಸೆಕ್ಷನ್ 188 ರ ಅಡಿಯಲ್ಲಿ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ .

ಇತರ ಪ್ರಮುಖ ಅಂಶಗಳು:

@ ಎಲ್ಲಾ ಸರಕಾರಿ ಕಚೇರಿಗಳು – ರಾಜ್ಯ ಮತ್ತು ಕೇಂದ್ರ ಎರಡೂ  ಮುಚ್ಚಲ್ಪಡುತ್ತವೆ. ಅದರಲ್ಲಿ  ರಕ್ಷಣಾ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಖಜಾನೆ, ಸಾರ್ವಜನಿಕ ಉಪಯುಕ್ತತೆಗಳು (ಪೆಟ್ರೋಲಿಯಂ, ಸಿಎನ್‌ಜಿ, ಎಲ್‌ಪಿಜಿ, ಪಿಎನ್‌ಜಿ ಸೇರಿದಂತೆ), ವಿಪತ್ತು ನಿರ್ವಹಣೆ, ವಿದ್ಯುತ್ ಉತ್ಪಾದನೆ, ಅಂಚೆ ಕಚೇರಿಗಳು ಇತ್ಯಾದಿ ವಿನಾಯಿತಿ ಪಡೆದಿದೆ.

@ ರಾಜ್ಯ ಸರಕಾರಿ ಕಚೇರಿಗಳಿಗೆ, ಪುರಸಭೆಯ ಸಂಸ್ಥೆಗಳು ಸೀಮಿತ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತವೆ.

Advertisement

@ ಎಲ್ಲಾ ಸಾರಿಗೆ ಸೇವೆಗಳು ರದ್ದೆದು. ಅಗತ್ಯ ವಸ್ತುಗಳ ಸಾಗಣೆಗೆ ಮತ್ತು ಅಗ್ನಿಶಾಮಕ, ಕಾನೂನು ಸುವ್ಯವಸ್ಥೆ ಸೇವೆಗಳಿಗೆ ಮಾತ್ರ ವಿನಾಯಿತಿ.

@ ಎಲ್ಲಾ ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗಾಗಿ ಮುಚ್ಚಲಾಗಿದೆ.

@ ಯಾವುದೇ ರೀತಿಯ ಎಲ್ಲಾ ಕಾರ್ಯಕ್ರಮವಿಲ್ಲ,  ಅಂತ್ಯಕ್ರಿಯೆಯ ಸಂದರ್ಭದಲ್ಲಿ ಕನಿಷ್ಟ ಜನರಿಗೆ ಮಾತ್ರಾ ಅವಕಾಶ

@ 20 ಜನರಿಗಿಂತ ಹೆಚ್ಚಿನ ಜನರುಳ್ಳ ಸಭೆಗೆ ಅನುಮತಿ ಇಲ್ಲ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ
ಅಡಿಕೆ ಕೊಳೆರೋಗ | ಸಿಎಂ ಜೊತೆ ಶಾಸಕ ಅಶೋಕ್ ಕುಮಾರ್ ರೈ ಚರ್ಚೆ
August 14, 2025
2:53 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 14-08-2025 | ಆ.20 ರವರೆಗೂ ಮಳೆ -ತುಂತುರು ಮಳೆ
August 14, 2025
2:48 PM
by: ಸಾಯಿಶೇಖರ್ ಕರಿಕಳ
ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!
August 14, 2025
7:39 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror

Join Our Group