ಸುಳ್ಯ: ಕೊರೊನಾ ವೈರಸ್ ಹರಡುವುದು ತಡೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಎ.14 ರವರೆಗೆ ಭಾರತ ಲಾಕ್ ಡೌನ್ ಆಗಲಿದೆ. ಇದರ ಮೊದಲ ದಿನ ಸುಳ್ಯ ತಾಲೂಕು ಸ್ತಬ್ಧವಾಗಿದೆ. ವಾಹನಗಳ ಓಡಾಟ ವಿರಳವಾಗಿತ್ತು.
ಸುಳ್ಯ ಸೇರಿದಂತೆ ಬೆಳ್ಳಾರೆ, ಪಂಜ, ಗುತ್ತಿಗಾರು, ಸಂಪಾಜೆ, ಸುಬ್ರಹ್ಮಣ್ಯ ಸೇರಿಂದತೆ ಗ್ರಾಮೀಣ ಭಾಗಗಳಲ್ಲೂ ಜನರ ಓಡಾಟ ವಿರಳವಾಗಿತ್ತು. ಆದರೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರಾ ಜನರು ಮುಗಿಬೀಳುತ್ತಿದ್ದಾರೆ. ಸುಮಾರು 20 ದಿನಗಳಿಗೆ ಸಾಕಾಗುವಷ್ಟು ಮಾತ್ರವೇ ಖರೀದಿ ಮಾಡಿದರೆ ಸಾಕು ಎಂದರೂ ಜನರು ಗೊಂದಲಗಳಿಗೆ ಒಳಗಾಗಿ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ದಿನಸಿ ಅಂಗಡಿಗಳಲ್ಲಿ ರಶ್ ಉಂಟಾಗುತ್ತಿದೆ. ಇದಕ್ಕಾಗಿ ಇಲಾಖೆಗಳು, ಅಧಿಕಾರಿ ಸರಿಯಾದ ಮಾಹಿತಿ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ. ದಿನಸಿ ಖರೀದಿ ಅಗತ್ಯವಾಗಿದೆ, ಆದರೆ ಅಧಿಕಾರಿಗಳು ಒಂದು ಹೇಳುತ್ತಾರೆ, ಪೊಲೀಸ್ ಇಲಾಖೆ ಇನ್ನೊಂದು ಹೇಳುತ್ತದೆ, ಸ್ಥಳೀಯ ಪಂಚಾಯತ್ ಬೇರೊಂದು ಹೇಳುತ್ತದೆ. ಹೀಗಾಗಿ ಗೊಂದಲ ಇದೆ ಎಂದು ಗ್ರಾಮೀಣ ಭಾಗದಲ್ಲಿ ಜನರು ಹೇಳುತ್ತಾರೆ.
ಇದಕ್ಕಾಗಿ ಗ್ರಾಮೀಣ ಭಾಗ ಹಾಗೂ ನಗರದಲ್ಲಿ ದಿನಸಿ ಖರೀದಿಗೆ ಸಮಯದ ಮಿತಿ ನೀಡಿ ಖರೀದಿಗೆ ಅವಕಾಶ ನೀಡಬೇಕು. ಹಾಗೆಂದು ಖರೀದಿ ನೆಪದಲ್ಲಿ ದಿನವೂ ಪೇಟೆಗ ಬರದಂತೆ ಸ್ಥಳೀಯರೇ ಎಚ್ಚರಿಕೆ ವಹಿಸಬೇಕಿದೆ. ಇದರ ಜೊತೆಗೆ ವರ್ತಕರಿಗೂ ಅಕ್ಕಿ ಸಹಿತ ದಿನಸಿ ಸಾಮಾಗ್ರಿಗಳ ಪೂರೈಕೆಗೂ ಅವಕಾಶ ನೀಡಬೇಕಾಗಿದೆ ಎಂದು ವರ್ತಕರು ಹೇಳುತ್ತಾರೆ.
ಉಳಿದಂತೆ ಪೆಟ್ರೋಲ್, ಮೆಡಿಕಲ್ ಶಾಪ್ ತೆರೆದಿದೆ. ಪಡಿತರ ಅಂಗಡಿಗಳು, ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಡೈರಿ ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನುಗಳು, ಪ್ರಾಣಿಗಳ ಮೇವು ಸೇರಿದಂತೆ ಅಂಗಡಿಗಳು ತೆರೆದಿರಬೇಕು. ಆದರೆ ಲಾಕ್ ಡೌನ್ ನಿಯಮ ಪಾಲನೆ ಮಾಡಬೇಕಿದೆ.
ಕೇಂದ್ರ ಸರಕಾರ ಲಾಕ್ ಡೌನ್ ನಿಯಮದಲ್ಲಿ ವಿನಾಯಿತಿ ಇರುವ ಸೇವೆಗಳು :
ಗೃಹ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಈ ಕ್ರಮಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು, ಐಪಿಸಿಯ ಸೆಕ್ಷನ್ 188 ರ ಅಡಿಯಲ್ಲಿ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ .
ಇತರ ಪ್ರಮುಖ ಅಂಶಗಳು:
@ ಎಲ್ಲಾ ಸರಕಾರಿ ಕಚೇರಿಗಳು – ರಾಜ್ಯ ಮತ್ತು ಕೇಂದ್ರ ಎರಡೂ ಮುಚ್ಚಲ್ಪಡುತ್ತವೆ. ಅದರಲ್ಲಿ ರಕ್ಷಣಾ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಖಜಾನೆ, ಸಾರ್ವಜನಿಕ ಉಪಯುಕ್ತತೆಗಳು (ಪೆಟ್ರೋಲಿಯಂ, ಸಿಎನ್‌ಜಿ, ಎಲ್‌ಪಿಜಿ, ಪಿಎನ್‌ಜಿ ಸೇರಿದಂತೆ), ವಿಪತ್ತು ನಿರ್ವಹಣೆ, ವಿದ್ಯುತ್ ಉತ್ಪಾದನೆ, ಅಂಚೆ ಕಚೇರಿಗಳು ಇತ್ಯಾದಿ ವಿನಾಯಿತಿ ಪಡೆದಿದೆ.
@ ರಾಜ್ಯ ಸರಕಾರಿ ಕಚೇರಿಗಳಿಗೆ, ಪುರಸಭೆಯ ಸಂಸ್ಥೆಗಳು ಸೀಮಿತ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತವೆ.
@ ಎಲ್ಲಾ ಸಾರಿಗೆ ಸೇವೆಗಳು ರದ್ದೆದು. ಅಗತ್ಯ ವಸ್ತುಗಳ ಸಾಗಣೆಗೆ ಮತ್ತು ಅಗ್ನಿಶಾಮಕ, ಕಾನೂನು ಸುವ್ಯವಸ್ಥೆ ಸೇವೆಗಳಿಗೆ ಮಾತ್ರ ವಿನಾಯಿತಿ.
@ ಎಲ್ಲಾ ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗಾಗಿ ಮುಚ್ಚಲಾಗಿದೆ.
@ ಯಾವುದೇ ರೀತಿಯ ಎಲ್ಲಾ ಕಾರ್ಯಕ್ರಮವಿಲ್ಲ, ಅಂತ್ಯಕ್ರಿಯೆಯ ಸಂದರ್ಭದಲ್ಲಿ ಕನಿಷ್ಟ ಜನರಿಗೆ ಮಾತ್ರಾ ಅವಕಾಶ
@ 20 ಜನರಿಗಿಂತ ಹೆಚ್ಚಿನ ಜನರುಳ್ಳ ಸಭೆಗೆ ಅನುಮತಿ ಇಲ್ಲ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…