ಸುಳ್ಯ: ದಕ್ಷಿಣ ಭಾರತದ ಪ್ರತಿಷ್ಠಿತ ಸಮನ್ವಯ ವಿದ್ಯಾಸಮುಚ್ಚಯ ಜಾಮಿಯ್ಯ ಸಅದಿಯ್ಯ ಅರಬಿಯ್ಯ, ದೇಳಿ, ಕಾಸರಗೋಡು ಇದರ ಸುವರ್ಣ ಮಹೋತ್ಸವದ ಪ್ರಚಾರ ಪೂರ್ವಭಾವಿ ಸಭೆ ಹಾಗು ಸುಳ್ಯ ತಾಲೂಕು ಸಅದೀಸ್ ಸಂಗಮವು, ತಾಲೂಕು ಸಅದೀಸ್ ಅಧ್ಯಕ್ಷರಾದ ಯು.ಎಸ್. ಕುಞ್ಞಿಕ್ಕೋಯ ತಙಳ್ ಸಅದಿ ಯವರ ಅಧ್ಯಕ್ಷತೆಯಲ್ಲಿ ಸುಳ್ಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು.
ಸಮಾರಂಭವನ್ನು ಸಯ್ಯಿದ್ ತ್ವಾಹಿರ್ ತಙಳ್ ಸಅದಿ ಉದ್ಘಾಟಿಸಿದರು. ಅಬ್ದುಲ್ಲಾಹಿ ಸಅದಿ ಅಜ್ಜಾವರ ವಿಷಯ ಮಂಡಿಸಿ ಮಾತನಾಡಿದರು. ಸಅದಿಯ್ಯ ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ, ತಾಲೂಕಿನಾದ್ಯಂತ ಸಮ್ಮೇಳನ ಪ್ರಚಾರ ಕಾರ್ಯವನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.
ಚರ್ಚೆಯಲ್ಲಿ ಸಅದೀಸ್ ನಾಯಕರಾದ ಜಿ.ಎಸ್.ಅಬ್ದುಲ್ ಕಾದರ್ ಸಅದಿ ಅಜ್ಜಾವರ, ಹನೀಫ್ ಸಅದಿ ಪಂಜಿಕ್ಕಲ್, ಅಬ್ದುರ್ರಹ್ಮಾನ್ ಸಅದಿ ಕನಕಮಜಲು, ನೌಫಲ್ ಸಅದಿ ಜಾಲ್ಸೂರ್, ಸಿದ್ದೀಖ್ ಸಅದಿ ಎಣ್ಮೂರ್, ಉಬೈದ್ ಸಅದಿ ಅಡ್ಕಾರ್, ಹಸನ್ ಸಅದಿ ಪೈಂಬೆಚ್ಚಾಲು, ಇರ್ಷಾದ್ ಸ ಅದಿ ಎಣ್ಮೂರ್, ಸಿರಾಜ್ ಸಅದಿ ಅಲೆಕ್ಕಾಡಿ ಮೊದಲಾದವರು ಭಾಗವಹಿಸಿದರು. ಅಬ್ದುಲ್ಲಾಹಿ ಸಅದಿ ಸ್ವಾಗತಿಸಿ, ವಂದಿಸಿದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…