Advertisement
ಸುದ್ದಿಗಳು

ಸುಳ್ಯ ದಸರಾಕ್ಕೆ ವೈಭವದ ಚಾಲನೆ

Share

ಸುಳ್ಯ: ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ, ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ೪೮ ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ -ಸುಳ್ಯ ದಸರಾ ೨೦೧೯ಕ್ಕೆ ವೈಭವದ ಚಾಲನೆ ದೊರೆತಿದೆ. ಜ್ಯೋತಿ ವೃತ್ತದಿಂದ ಶ್ರೀ ಶಾರದಾ ದೇವಿ ಮೂರ್ತಿಯ ಪ್ರತಿಷ್ಠಾ ಮೆರವಣಿಗೆ ಸುಳ್ಯ ನಗರದಲ್ಲಿ ನಡೆದು, ಚೆನ್ನಕೇಶವ ದೇವಸ್ಥಾನದ ಮುಂಭಾಗದ ಶ್ರಿ ಶಾರದಾಂಬಾ ಮಂಟಪದಲ್ಲಿ ದೇವಿಯ ಪ್ರತಿಷ್ಠಾಪನೆ ನಡೆಯಿತು. ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ಪ್ರತಿಷ್ಠಾಪನೆ ನೆರವೇರಿಸಲಾಯಿತು.

 

ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಶಾಸಕ ಎಸ್‌.ಅಂಗಾರ,ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಕೆ.ಗೋಕುಲ್ ದಾಸ್, ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ, ರವಿಚಂದ್ರ ಕೊಡಿಯಾಲಬೈಲು, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಕೋಶಾಧಿಕಾರಿ ರಾಜು ಪಂಡಿತ್, ಶಾರದಾಂಬಾ ಸೇವಾ ಟ್ರಸ್ಟ್ ನ ಅಧ್ಯಕ್ಷ ನವೀನ್ ಚಂದ್ರ ಬೆಂಗಳೂರು, ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಶಿಲಾವತಿ, ಬುದ್ಧ ನಾಯ್ಕ, ಕಿಶೋರಿ ಶೇಟ್, ಸರೋಜಿನಿ ಪೆಲ್ತಡ್ಕ, ಬಾಲಕೃಷ್ಣ ರೈ, ಪ್ರವಿತಾ ಪ್ರಶಾಂತ್, ಶೀಲಾ ಅರುಣ ಕುರುಂಜಿ, ಶಿಲ್ಪಾ ಸುದೇವ್, ಸುಶೀಲಾ ಜಿನ್ನಪ್ಪ, ನಾರಾಯಣ, ವಾಣಿಶ್ರೀ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಮಾಜಿ ಸದಸ್ಯರಾದ ಗೋಪಾಲ ನಡುಬೈಲು, ದಿನೇಶ್ ಅಂಬೆಕಲ್ಲು, ಕಮಲಾಕ್ಷಿ ಟೀಚರ್ ಮತ್ತಿತರರು ಉಪಸ್ಥಿತರಿದ್ದರು.

ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ಏಳಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಬಳಿಕ ವಿದ್ಯಾಶ್ರೀ ರಾಧಾಕೃಷ್ಣ ಇವರ ನಿರ್ದೇಶನದಲ್ಲಿ ಗಾನನೃತ್ಯ ಅಕಾಡೆಮಿ ಮಂಗಳೂರು ಇವರಿಂದ ನೃತ್ಯ ಸಂಗಮ ಮತ್ತು ನೃತ್ಯ ರೂಪಕ ನಡೆಯುವುದು.

 

ಒಂಭತ್ತು ದಿನಗಳ ಕಾಲ ನಡೆಯುವ ವೈಭವದ ದಸರಾ ಉತ್ಸವ 13ರಂದು ಸಮಾಪನಗೊಳ್ಳಲಿದೆ.

ಅ.೬ರಂದು ಸುಳ್ಯದ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ ಇವರ ಸಹಯೋಗದಲ್ಲಿ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯುವುದು.
ಅ.೭ರಂದು ಬೆಳಗ್ಗೆ ಆಯುಧ ಪೂಜೆ, ಅ.ಎಂಟರಂದು ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ.ಅ.11 ರಂದು ಶ್ರೀ ಮಹಾ ಗಣಪತಿ ಗವನ, ಶ್ರೀ ಚಂಡಿಕಾ ಯಾಗ ನಡೆಯಲಿದೆ.
ಅ.೧೩ರಂದಯ ನಡೆಯಲಿದ್ದು ಅಂದು ಅದ್ದೂರಿ ಶೋಭಾ ಯಾತ್ರೆಯೊಂದಿಗೆ ದಸರಾ ಸಮಾಪನಗೊಳ್ಳಲಿದೆ. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 18-03-2026 | ಗುಡುಗು-ಆಲಿಕಲ್ಲು ಮಳೆ ಅಲರ್ಟ್‌ | ರಾಜ್ಯಾದ್ಯಂತ ಹವಾಮಾನ ಬದಲಾವಣೆ..!

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ…

2 hours ago

ದಕ್ಷಿಣ ಕನ್ನಡ–ಉಡುಪಿ ಭಾಗದಲ್ಲಿ 8–10% ಎಳೆ ಅಡಿಕೆ ಉದುರಿದೆ…!, ರಾಜ್ಯದಲ್ಲಿ ಎಲೆಚುಕ್ಕೆ ರೋಗದಿಂದ 88,559 ಹೆಕ್ಟೇರ್ ಹಾನಿ

ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ 8–10% ಎಳೆ ಅಡಿಕೆ ಉದುರುವುದಾಗಿ ಅಂದಾಜಿಸಲಾಗಿದ್ದು,…

8 hours ago

ಚಾಮರಾಜನಗರ–ಬೆಳಗಾವಿಯಲ್ಲಿ ಭಾರೀ ಆಲಿಕಲ್ಲು ಮಳೆ | ಬಿಸಿಲಿನ ನಡುವೆ ಇಳೆ ತಂಪು, ರೈತರಿಗೆ ಆತಂಕ

ಚಾಮರಾಜನಗರ ಮತ್ತು ಬೆಳಗಾವಿಯಲ್ಲಿ ಭಾರೀ ಆಲಿಕಲ್ಲು ಮಳೆ ಸುರಿದು ರೈತರು ಆತಂಕಗೊಂಡಿದ್ದಾರೆ. ಬೆಂಗಳೂರಿನ…

8 hours ago

ವಿದ್ಯುತ್ ಕೊರತೆಯ ನಿರ್ಣಾಯಕ ಸಮಸ್ಯೆಗೆ ಪರಿಹಾರ : ದೇಶದ ಸ್ಥಾಪಿತ ಸಾಮರ್ಥ್ಯ 520 ಗಿಗಾ ವ್ಯಾಟ್‌ ದಾಟಿತು

ದೇಶದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 520 ಗಿಗಾ ವ್ಯಾಟ್‌ಗಿಂತ ಹೆಚ್ಚು ಮಟ್ಟಕ್ಕೆ ಹೆಚ್ಚಿಸಲಾಗಿದೆ…

8 hours ago

ಅಡಿಕೆ ಹಾನಿಕಾರಕವಲ್ಲ – ಅಧ್ಯಯನ ಪ್ರಗತಿಯಲ್ಲಿ | ಹಾಳೆತಟ್ಟೆ ಹಾನಿಕಾರಕವಲ್ಲ

ಅಡಿಕೆಯ ಆರೋಗ್ಯ ಪರಿಣಾಮ ಹಾಗೂ ಸುರಕ್ಷತೆ ಕುರಿತು ರಾಷ್ಟ್ರೀಯ ಮಟ್ಟದ ಸಂಸ್ಥೆಗಳೊಂದಿಗೆ ಸಂಯುಕ್ತ…

16 hours ago

ಗಿರಿಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ | ಮುಳ್ಳಯ್ಯನಗಿರಿ–ಸೀತಾಳಯ್ಯಗಿರಿಯಲ್ಲಿ ಜಾಗೃತಿ ಕಾರ್ಯ

ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯಗಿರಿ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಯಿತು.…

18 hours ago