ಸುಳ್ಯ ನಗರ ಪಂಚಾಯತ್ ಕಟ್ಟಡದಲ್ಲಿ ಕಸ ರಾಶಿ- ಕಸವನ್ನು ಬೇರ್ಪಡಿಸಿ ವಾರದಲ್ಲಿ ವಿಲೇವಾರಿಗೆ ಸಿಂಧು ಬಿ ರೂಪೇಶ್ ಆದೇಶ

November 8, 2019
9:46 PM

ಸುಳ್ಯ: ನಗರ ಪಂಚಾಯಿತಿ ಮುಂಭಾಗದ ಕಟ್ಟಡದಲ್ಲಿ ತುಂಬಿಡಲಾಗಿರುವ ತ್ಯಾಜ್ಯವನ್ನು ನೋಡಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ನಗರ ಪಂಚಾಯಿತಿ ಅಧಿಕಾರಿಗಳನ್ನು ತೀವ್ರ ತರಾಟೆಗೆತ್ತಿಕೊಂಡ ಘಟನೆ ನಡೆಯಿತು.

Advertisement

ಶುಕ್ರವಾರ ಸುಳ್ಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಗರ ಪಂಚಾಯಿತಿಯ ಮುಂಭಾಗದ ಕಟ್ಟಡದಲ್ಲಿ ಮತ್ತು ಹಿಂಭಾಗದಲ್ಲಿ ಸುರಿಯಲಾಗಿರುವ ತ್ಯಾಜ್ಯ ರಾಶಿಯನ್ನು ವೀಕ್ಷಿಸಿದರು. ಇಲ್ಲಿ ತುಂಬಿಡಲಾಗಿರುವ ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡಬೇಕು ಎಂದು ಅವರು ಸೂಚಿಸಿದರು. ಎಷ್ಟು ವಿಧದಲ್ಲಿ ಬೇರ್ಪಡಿಸಲು ಸಾಧ್ಯವೋ ಅಷ್ಟು ವಿಧದಲ್ಲಿ ಬೇರ್ಪಡಿಸಬೇಕು. ಅದನ್ನು ಎಷ್ಟು ಮರು ಬಳಕೆಗೆ ಸಾಧ್ಯವೋ ಅಷ್ಟನ್ನು ಮಾರಾಟ ಮಾಡಿ ನಗರ ಪಂಚಾಯತ್‍ಗೆ ಆದಾಯ ಬರುವಂತಾಗಬೇಕು. ಒಂದು ವಾರದಲ್ಲಿ ತ್ಯಾಜ್ಯವನ್ನು ಸಂಪೂರ್ಣ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು. ಕೂಡಲೇ ಕಸ ಬೇರ್ಪಡಿಸುವ ಕಾರ್ಯ ಆರಂಭಿಸಬೇಕು. ಪ್ರತಿ ದಿನ ಕಸ ವಿಲೇವಾರಿ ಮಾಡಿದ ಪ್ರಗತಿಯ ಬಗ್ಗೆ ವರದಿಯನ್ನು ಪೋಟೋ ಸಮೇತ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.

ಕಸ ವಿಲೇವಾರಿಗೆ ಸೂಚನೆ ನೀಡಿದರೂ ಪಾಲಿಸುತ್ತಿಲ್ಲ. ತ್ಯಾಜ್ಯ ನಿರ್ವಹಣೆ ಸರಿಯಾಗಿಲ್ಲದ ಕಾರಣ ತೀವ್ರ ಸಮಸ್ಯೆ ಸೃಷ್ಠಿಸಿದೆ ಎಂದು ನಗರ ಪಂಚಾಯಿತಿ ಆಡಳಿತಾಧಿಕಾರಿ, ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಹಾಗು ನಗರ ಪಂಚಾಯಿತಿ ಸದಸ್ಯರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಈ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಎಲ್ಲಾ ತ್ಯಾಜ್ಯವನ್ನು ವಾರದಲ್ಲಿ ವಿಲೇವಾರಿ ಮಾಡಿ ವರದಿ ನೀಡುವಂತೆ ಮುಖ್ಯಾಧಿಕಾರಿ ಆದೇಶ ನೀಡಿದರು. ಸುಳ್ಯ ತಾಲೂಕು ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿಯವರಿಗೆ ತಹಶೀಲ್ದಾರ್ ಕುಂಞ ಅಹಮ್ಮದ್ ಸುಳ್ಯ ನಗರದ ತ್ಯಾಜ್ಯ ವಿಲೇವಾರಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ವಿವರಿಸಿದ್ದರು. ಈ ಹಿನ್ನಲೆಯಲ್ಲಿ ಅವರು ನಗರ ಪಂಚಾಯಿತಿಗೆ ಆಗಮಿಸಿ ತ್ಯಾಜ್ಯ ವಿಲೇವಾರಿಯ ಅವ್ಯವಸ್ಥೆಯನ್ನು ವೀಕ್ಷಿಸಿದರು.

Advertisement

ಪ್ರತಿದಿನದ ತ್ಯಾಜ್ಯವನ್ನು ಹಸಿ ಕಸ, ಒಣಕಸ ಎಂದು ಬೇರ್ಪಡಿಸಿ ಸಂಗ್ರಹಿಸಬೇಕು ಮತ್ತು ಅದೇ ದಿನದ ಕಸವನ್ನು ಅದೇ ದಿನ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ನ.ಪಂ. ಮುಖ್ಯಾಧಿಕಾರಿಗೆ ಮತ್ತಡಿ ಅವರಿಗೆ ಖಡಕ್ ಆಗಿ ಆದೇಶ ನೀಡಿದರು. ಕಸ ವಿಲೇವಾರಿ ನಡೆಸಲು ಬರ್ನಿಂಗ್ ಮೆಷಿನ್ ಖರೀದಿಸಲು ಅನುಮೋದನೆ ನೀಡುವುದಾಗಿ ಅವರು ತಿಳಿಸಿದರು.
ನಗರ ಪಂಚಾಯಿತಿ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಬಾಲಕೃಷ್ಣ ರೈ, ಸುಧಾಕರ, ವಾಣಿಶ್ರೀ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 17.08.2025 | ಕೆಲವು ಕಡೆ ಉತ್ತಮ ಮಳೆ | ಆ.19ರಿಂದ ಮಳೆ ಕಡಿಮೆ ನಿರೀಕ್ಷೆ
August 17, 2025
2:33 PM
by: ಸಾಯಿಶೇಖರ್ ಕರಿಕಳ
ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಭಾರತಕ್ಕೆ
August 17, 2025
6:52 AM
by: The Rural Mirror ಸುದ್ದಿಜಾಲ
ರಾಜ್ಯದ ಕರಾವಳಿ, ಮಲೆನಾಡು ಭಾರೀ ಮಳೆ ಸಂಭವ | ಘಟ್ಟ ಪ್ರದೇಶಗಳಲ್ಲಿ ಭೂ ಕುಸಿತ ಸಾಧ್ಯತೆ | ಹವಾಮಾನ ಇಲಾಖೆ ಎಚ್ಚರಿಕೆ
August 17, 2025
6:49 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 16-08-2025 | ಮಲೆನಾಡು-ಕರಾವಳಿಯಲ್ಲಿ ಉತ್ತಮ ಮಳೆ | ಆ.20 ರ ನಂತರ ಮಳೆ ಹೇಗೆ..?
August 16, 2025
3:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group