MIRROR FOCUS

ಸುಳ್ಯ ನಗರ ಪಂಚಾಯತ್ ತ್ಯಾಜ್ಯ ತೆರವಿಗೆ ಶೀಘ್ರದಲ್ಲೇ ಕ್ರಮ : ಜನರಿಗೆ ನೆಮ್ಮದಿಯ ಉಸಿರು…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ:ಸುಳ್ಯ ನಗರ ಪಂಚಾಯತ್ ಕಟ್ಟಡದಲ್ಲಿ ತುಂಬಿಡಲಾಗಿರುವ ಕಸವನ್ನು ತೆರವು ಮಾಡಲು ಮತ್ತು ಕಸ ವಿಲೇವಾರಿಗೆ ಬರ್ನಿಂಗ್ ಮೆಷಿನ್ ಖರೀದಿಗೆ ಸುಳ್ಯ ನಗರ ಪಂಚಾಯತ್ ನಲ್ಲಿ ನಡೆದ ವಿಶೇಷ ಸಭೆಯಲ್ಲಿ ನಿರ್ಧರಿಸಲಾಯಿತು. ಕಳೆದ ಎರಡು ವಾರಗಳಿಂದ ಸ್ಥಗಿತಗೊಂಡಿದ್ದ ನಗರದ ಕಸ ಸಂಗ್ರಹವನ್ನು ಮಂಗಳವಾರದಿಂದಲೇ ಆರಂಭಿಸಲು ನಿರ್ಧರಿಸಲಾಯಿತು.

Advertisement

ಶಾಸಕ ಎಸ್.ಅಂಗಾರ ಉಪಸ್ಥಿತಿಯಲ್ಲಿ ನಗರ ಪಂಚಾಯತ್ ಸದಸ್ಯರ, ಅಧಿಕಾರಿಗಳ ಮತ್ತು ಸಾರ್ವಜನಿಕರ ಸಭೆ ನಡೆಸಲಾಯಿತು. ಐದು ಲಕ್ಷರೂ ಮೊತ್ತದ ಬರ್ನಿಂಗ್ ಮೆಷಿನ್ ಖರೀದಿಸಲು ನಿರ್ಧರಿಸಲಾಯಿತು. ಇದಕ್ಕೆ ಕೂಡಲೇ ಅನುಮತಿ ನೀಡುವ ಕುರಿತು ಶಾಸಕರು ಜಿಲ್ಲಾಧಿಕಾರಿಗಳ ಜೊತೆ ದೂರವಾಣಿಯಲ್ಲಿ ಚರ್ಚೆ ನಡೆಸಿದರು. ನ.ಪಂ.ಕಟ್ಟಡದಲ್ಲಿ ತುಂಬಿಡಲಾದ ಕಸ ಸಾಗಾಟಕ್ಕೆ ಕೂಡಲೇ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಅದಕ್ಕೆ ಟೆಂಡರ್ ಕರೆಯಲು ಸೂಚಿಸಲಾಯಿತು.

ನಗರ ಪಂಚಾಯತ್ ನ ಕಸ ವಿಲೇವಾರಿ ಅವ್ಯವಸ್ಥೆಯ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯಿತು. ಕಸ ಸಂಗ್ರಹ ನಿಲ್ಲಿಸಿರುವುದಕ್ಕೆ ಸದಸ್ಯರಾದ ಎಂ.ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ, ಕೆ.ಎಸ್.ಉಮ್ಮರ್, ಶರೀಫ್ ಕಂಠಿ ಮೊದಲಾದವರು ಅಧಿಕಾರಿಗಳನ್ನು  ತರಾಟೆಗೆತ್ತಿಕೊಂಡರು. ಕಸ ವಿಲೇವಾರಿ ನಿಲ್ಲಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಸದಸ್ಯರು
ಕಸ ವಿಲೇವಾರಿ ಸರಿಯಾಗಿ ನಿರ್ವಹಿಸದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ನ.ಪಂ.ಆಡಳಿತಾಧಿಕಾರಿ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರು ಕ್ರಮ ಜರುಗಿಸುವುದಾಗಿ ತಿಳಿಸಿದರು. ಬಳಿಕ ಕಸ ವಿಲೇವಾರಿ ಮಾಡಲು ವಿಫಲರಾದವರ ವಿರುದ್ಧ ಕ್ರಮಕ್ಕೆ ಕೈಗೊಳ್ಳಬೇಕೆಂದು ಶಾಸಕರಲ್ಲಿಯೂ ಸದಸ್ಯರು ಪಟ್ಟು ಹಿಡಿದರು. ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ತಹಶೀಲ್ದಾರ್ ರಿಗೆ ಸೂಚಿಸಿದರು.

ನಗರ ಪಂಚಾಯತ್ ನ ಕಸ ವಿಲೇವಾರಿ ಘಟಕ ಕಲ್ಚರ್ಪೆಯಲ್ಲಿ ಒಂದು ವರ್ಷದಿಂದ ಕಸ ಹಾಕದಿರುವ ಬಗ್ಗೆ ಮತ್ತು ಅಲ್ಲಿ ತುಂಬಿರುವ ಕಸವನ್ನು ತೆರವು ಮಾಡದ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಕಲ್ಚರ್ಪೆಯಲ್ಲಿ ಕಸ ಹಾಕುವುದನ್ನು ನಿಲ್ಲಿಸಿರುವುದಕ್ಕೆ ಯಾಕೆ ಎಂದು ಪ್ರಶ್ನಿಸಿದ ಸದಸ್ಯರು ಅಲ್ಲಿ ತುಂಬಿರುವ ಕಸವನ್ನು ವಿಲೇವಾರಿ ಮಾಡಿ ಅಲ್ಲಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು. ಕಸವನ್ನು ಕೊಂಡೊಯ್ದು ಹಿಂದು ರುದ್ರಭೂಮಿಗೆ ಹಾಕಿರುವುದಕ್ಕೆ ನ.ಪಂ.ಸದಸ್ಯ ಬಾಲಕೃಷ್ಣ ಭಟ್ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರ ಪಂಚಾಯತ್ ಸದಸ್ಯರಾದ ಸುಧಾಕರ, ಶಶಿಕಲಾ, ಶಿಲ್ಪಾ ಸುದೇವ್,ಕಿಶೋರಿ ಶೇಠ್, ನಾರಾಯಣ, ಧೀರಾ ಕ್ತಾಸ್ತಾ, ವಾಣಿಶ್ರೀ, ಪೂಜಿತಾ, ಸರೋಜಿನಿ ಪೆಲ್ತಡ್ಕ, ಸುಶೀಲಾ ಜಿನ್ನಪ್ಪ, ಶೀಲಾ ಅರುಣ ಕುರುಂಜಿ, ಪ್ರವಿತಾ ಪ್ರಶಾಂತ್, ಬುದ್ಧ ನಾಯ್ಕ್, ಪ್ರಮುಖರಾದ ವಿನೋದ್ ಲಸ್ರಾದೋ, ಕೆ.ಆರ್.ಮನಮೋಹನ, ಡಿ.ಎಂ.ಶಾರಿಖ್, ಮನೋಜ್ ರೈ ಮತ್ತಿತರರು ಮಾತನಾಡಿದರು.

Advertisement

ತಡವಾಗಿ ಆಗಮಿಸಿದ ಶಾಸಕರು- ಸದಸ್ಯರ ಮಧ್ಯೆ ವಾಗ್ವಾದ:

ಕಸ ವಿಲೇವಾರಿ ಸಂಬಂಧಿಸಿ ನಗರ ಪಂಚಾಯತ್ ಸಭೆಗೆ ಶಾಸಕ ಎಸ್.ಅಂಗಾರ ತಡವಾಗಿ ಆಗಮಿಸಿದರು. ಈ ಕುರಿತು ಸಭೆಯ ಆರಂಭದಲ್ಲಿ ನಗರ ಪಂಚಾಯತ್ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಬಹು ಮುಖ್ಯವಾದ ಸಭೆಗೆ ಶಾಸಕರು ಬಾರದೇ ಇದ್ದುದು ಸರಿಯಲ್ಲ. ಶಾಸಕರಿಗೆ ಸಮಸ್ಯೆ ಪರಿಹರಿಸುವ ಕಾಳಜಿ ಇಲ್ಲ ಮತ್ತು ಅವರು ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಎಂದು ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದರು.

ಇದಕ್ಕೆ ಉತ್ತರಿಸಿದ ವಿನಯಕುಮಾರ್ ಕಂದಡ್ಕ ಶಾಸಕರು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಾರೆ‌. ಶಾಸಕರಿಗೆ ಮೊದಲೇ ತಿಳಿಸದ ಕಾರಣ ಮತ್ತು ಅಧಿಕಾರಿಗಳು ಅವರ ಸಮಯವನ್ನು ಗೊತ್ತುಪಡಿಸದ ಕಾರಣ ಸಮಸ್ಯೆ ಆಗಿದೆ ಎಂದು ಹೇಳಿದರು. ಈ ಕುರಿತು ಸದಸ್ಯರ ಮಧ್ಯೆ ಚರ್ಚೆ ನಡೆಯಿತು. ಬಳಿಕ ಸಭೆ ಮುಂದುವರಿಯಿತು. ಕೆಲವೊಂದು ನಿರ್ಧಾರಗಳನ್ನು ಕೈಗೊಂಡು ಶಾಸಕರ ಉಪಸ್ಥಿತಿಯಲ್ಲಿ ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಗಿ ಸಭೆ ಮುಕ್ತಾಯಗೊಳಿಸಲಾಯಿತು. ಸಭೆ ಮುಗಿಸಿ ಎಲ್ಲರೂ ಹೊರ ಬರುತ್ತಿದ್ದಂತೆ ಶಾಸಕ ಅಂಗಾರ ಆಗಮಿಸಿದರು.

ಬಳಿಕ ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು. ಪೂರ್ವ ನಿಗದಿತ ಕಾರ್ಯಕ್ರಮ ಇದ್ದ ಕಾರಣ ತಡವಾಯಿತು ಎಂದು ಶಾಸಕರು ತಿಳಿಸಿದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!

ಗ್ರಾಮೀಣ ಮಟ್ಟದ ಆರ್ಥಿಕ‌ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…

2 hours ago

ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ

ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…

2 hours ago

ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…

2 hours ago

ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…

2 hours ago

ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…

12 hours ago

ಸ್ವಾತಂತ್ರ್ಯಕ್ಕಾಗಿ ಮದುವೆ

ಕುಟುಂಬ ಎಂಬುದು ಸಮಾಜದ ಆಧಾರ ಸ್ಥಂಭ. ಮದುವೆ ಎಂಬುದು ಈ ಸ್ಥಂಭದ ತಳಪಾಯ.…

12 hours ago