ಸುಳ್ಯ: ಸುಳ್ಯ ನಗರ ಪಂಚಾಯತ್ ಗೆ ಮೇ.29ರಂದು ನಡೆಯುವ ಚುನಾವಣೆಗೆ ಬುಧವಾರ ಒಟ್ಟು 18 ನಾಮಪತ್ರ ಸಲ್ಲಿಸಲಾಗಿದೆ. 8 ಬಿಜೆಪಿ ಅಭ್ಯರ್ಥಿಗಳು ಏಳು ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಮತ್ತು ಮೂರು ಮಂದಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಒಂದು ದಿನ ಮಾತ್ರ ಉಳಿದಿದ್ದು ಇದುವರೆಗೆ ಒಟ್ಟು 22 ನಾಮಪತ್ರಗಳು ಸಲ್ಲಿಕೆಯಾಗಿದೆ.
ಎಂಟು ಮಂದಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ:
ಎಂಟು ಮಂದಿ ಬಿಜೆಪಿ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. 1ನೇ ವಾರ್ಡ್ (ದುಗಲಡ್ಕ)ನಿಂದ ಶಶಿಕಲಾ ಎ., 3ನೇ ವಾರ್ಡ್(ಜಯನಗರ)ನಿಂದ ರೋಹಿತ್ ಕೊಯಿಂಗೋಡಿ, 5ನೇ ವಾರ್ಡ್(ಹೆಗೇಟು)ನಿಂದ ಜಿ.ಬುದ್ಧ ನಾಯ್ಕ, 6ನೇ ವಾಡ್(ಬೀರಮಂಗಲ)ನಿಂದ ಯತೀಶ, 7ನೇ ವಾರ್ಡ್(ಬಿಡಿಒ-ಅಂಬೆಟಡ್ಕ) ವಾರ್ಡ್‍ನಿಂದ ಕಿಶೋರಿ ಶೇಟ್, 11ನೇ ವಾರ್ಡ್ (ಕುರುಂಜಿಗುಡ್ಡೆ)ನಿಂದ ಸುಧಾಕರ ಕೆ, 13ನೇ ವಾರ್ಡ್(ಬೂಡು)ನಿಂದ ಬೂಡು ರಾಧಾಕೃಷ್ಣ ರೈ, 16ನೇ ವಾರ್ಡ್(ಕಾಯರ್ತೋಡಿ)ನಿಂದ ಪ್ರವಿತಾ ಪ್ರಶಾಂತ್ ನಾಮಪತ್ರ ಸಲ್ಲಿಸಿದರು. ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್‍ನ ಏಳು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ:
ಏಳು ಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ಸಂಖ್ಯೆ 1(ದುಗಲಡ್ಕ) ವಾರ್ಡ್ ನಿಂದ ಜಯಂತಿ ಭಾಸ್ಕರ ಪೂಜಾರಿ, 4(ಶಾಂತಿನಗರ)ನೇ ವಾರ್ಡ್ ನಿಂದ ಎಸ್.ಎಂ.ಶಂಕರ, 6ನೇ ವಾರ್ಡ್ (ಬೀರಮಂಗಲ)ನಿಂದ ಡೇವಿಡ್ ಧೀರಾ ಕ್ರಾಸ್ತಾ, 7(ಬಿಡಿಓ-ಅಂಬೆಟಡ್ಕ)ನೇ ವಾರ್ಡ್ ನಿಂದ ಪ್ರೇಮ ಟೀಚರ್, 8(ಕುರುಂಜಿಭಾಗ್)ನೇ ವಾರ್ಡ್‍ನಿಂದ ಸುಜಯಾಕೃಷ್ಣ ಕೆ.ಪಿ., 10ನೇ ವಾರ್ಡ್ (ಕೇರ್ಪಳ)ನಿಂದ ಎಸ್.ಎಂ.ಉಮ್ಮರ್, 19ನೇ ವಾರ್ಡ್(ಮಿಲಿಟ್ರಿ ಗ್ರೌಂಡ್) ನಿಂದ ಜೂಲಿಯಾನ ಕ್ರಾಸ್ತಾ ನಾಮಪತ್ರ ಸಲ್ಲಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ, ಎಸ್.ಸಂಶುದ್ದೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಮತ್ತಿತರರು ಉಪಸ್ಥಿತರಿದ್ದರು.
3 ಮಂದಿ ಪಕ್ಷೇತರರು:
15ನೇ ವಾರ್ಡ್(ನಾವೂರು)ನಿಂದ ಅಬ್ದುಲ್ ಮಜೀದ್, 17ನೇ ವಾರ್ಡ್(ಬೋರುಗುಡ್ಡೆ)ನಿಂದ ಮಹಮ್ಮದ್ ಮಸೂದ್, 19ನೇ ವಾರ್ಡ್(ಮಿಲಿಟ್ರಿ ಗ್ರೌಂಡ್)ನಿಂದ ಎ.ಮೋಹಿನಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.