Advertisement
Uncategorized

ಸುಳ್ಯ ನ.ಪಂ.ಚುನಾವಣೆ : 18 ನಾಮಪತ್ರ ಸಲ್ಲಿಕೆ

Share

ಸುಳ್ಯ: ಸುಳ್ಯ ನಗರ ಪಂಚಾಯತ್ ಗೆ ಮೇ.29ರಂದು ನಡೆಯುವ ಚುನಾವಣೆಗೆ ಬುಧವಾರ ಒಟ್ಟು 18 ನಾಮಪತ್ರ ಸಲ್ಲಿಸಲಾಗಿದೆ. 8 ಬಿಜೆಪಿ ಅಭ್ಯರ್ಥಿಗಳು ಏಳು ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಮತ್ತು ಮೂರು ಮಂದಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಒಂದು ದಿನ ಮಾತ್ರ ಉಳಿದಿದ್ದು ಇದುವರೆಗೆ ಒಟ್ಟು 22 ನಾಮಪತ್ರಗಳು ಸಲ್ಲಿಕೆಯಾಗಿದೆ.

ಎಂಟು ಮಂದಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ:

ಎಂಟು ಮಂದಿ ಬಿಜೆಪಿ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. 1ನೇ ವಾರ್ಡ್ (ದುಗಲಡ್ಕ)ನಿಂದ ಶಶಿಕಲಾ ಎ., 3ನೇ ವಾರ್ಡ್(ಜಯನಗರ)ನಿಂದ ರೋಹಿತ್ ಕೊಯಿಂಗೋಡಿ, 5ನೇ ವಾರ್ಡ್(ಹೆಗೇಟು)ನಿಂದ ಜಿ.ಬುದ್ಧ ನಾಯ್ಕ, 6ನೇ ವಾಡ್(ಬೀರಮಂಗಲ)ನಿಂದ ಯತೀಶ, 7ನೇ ವಾರ್ಡ್(ಬಿಡಿಒ-ಅಂಬೆಟಡ್ಕ) ವಾರ್ಡ್‍ನಿಂದ ಕಿಶೋರಿ ಶೇಟ್, 11ನೇ ವಾರ್ಡ್ (ಕುರುಂಜಿಗುಡ್ಡೆ)ನಿಂದ ಸುಧಾಕರ ಕೆ, 13ನೇ ವಾರ್ಡ್(ಬೂಡು)ನಿಂದ ಬೂಡು ರಾಧಾಕೃಷ್ಣ ರೈ, 16ನೇ ವಾರ್ಡ್(ಕಾಯರ್ತೋಡಿ)ನಿಂದ ಪ್ರವಿತಾ ಪ್ರಶಾಂತ್ ನಾಮಪತ್ರ ಸಲ್ಲಿಸಿದರು. ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್‍ನ ಏಳು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ:

ಏಳು ಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ಸಂಖ್ಯೆ 1(ದುಗಲಡ್ಕ) ವಾರ್ಡ್ ನಿಂದ ಜಯಂತಿ ಭಾಸ್ಕರ ಪೂಜಾರಿ, 4(ಶಾಂತಿನಗರ)ನೇ ವಾರ್ಡ್ ನಿಂದ ಎಸ್.ಎಂ.ಶಂಕರ, 6ನೇ ವಾರ್ಡ್ (ಬೀರಮಂಗಲ)ನಿಂದ ಡೇವಿಡ್ ಧೀರಾ ಕ್ರಾಸ್ತಾ, 7(ಬಿಡಿಓ-ಅಂಬೆಟಡ್ಕ)ನೇ ವಾರ್ಡ್ ನಿಂದ ಪ್ರೇಮ ಟೀಚರ್, 8(ಕುರುಂಜಿಭಾಗ್)ನೇ ವಾರ್ಡ್‍ನಿಂದ ಸುಜಯಾಕೃಷ್ಣ ಕೆ.ಪಿ., 10ನೇ ವಾರ್ಡ್ (ಕೇರ್ಪಳ)ನಿಂದ ಎಸ್.ಎಂ.ಉಮ್ಮರ್, 19ನೇ ವಾರ್ಡ್(ಮಿಲಿಟ್ರಿ ಗ್ರೌಂಡ್) ನಿಂದ ಜೂಲಿಯಾನ ಕ್ರಾಸ್ತಾ ನಾಮಪತ್ರ ಸಲ್ಲಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ, ಎಸ್.ಸಂಶುದ್ದೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಮತ್ತಿತರರು ಉಪಸ್ಥಿತರಿದ್ದರು.

3 ಮಂದಿ ಪಕ್ಷೇತರರು:

15ನೇ ವಾರ್ಡ್(ನಾವೂರು)ನಿಂದ ಅಬ್ದುಲ್ ಮಜೀದ್, 17ನೇ ವಾರ್ಡ್(ಬೋರುಗುಡ್ಡೆ)ನಿಂದ ಮಹಮ್ಮದ್ ಮಸೂದ್, 19ನೇ ವಾರ್ಡ್(ಮಿಲಿಟ್ರಿ ಗ್ರೌಂಡ್)ನಿಂದ ಎ.ಮೋಹಿನಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್

ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ…

14 hours ago

ಕರ್ನಾಟಕದ 101 ತಾಲ್ಲೂಕುಗಳು ಬರಪೀಡಿತ : ಇನ್ನೂ 3 ತಾಲ್ಲೂಕುಗಳ ಮೇಲೂ ಬರದ ಛಾಯೆ

ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 89 ತೀವ್ರ ಹಾಗೂ 12…

14 hours ago

101 ತಾಲೂಕುಗಳಲ್ಲಿ ಬರದ ಛಾಯೆ – ಗ್ರಾಮೀಣರಿಗೆ ಉದ್ಯೋಗ ಹೆಚ್ಚಿಸಲು ಸಚಿವ ಖಂಡ್ರೆ ಸೂಚನೆ

ರಾಜ್ಯದ 101 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಬೇಡಿಕೆಗೆ ಅನುಗುಣವಾಗಿ…

14 hours ago

ಹವಾಮಾನ ವರದಿ | 28-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ಬದಲಾವಣೆ ಎಲ್ಲಿದೆ?

ಕರ್ನಾಟಕದಲ್ಲಿ ಮುಂಗಾರು ಸದ್ಯ ದುರ್ಬಲಗೊಂಡಿದ್ದು, ಬಹುತೇಕ ಕಡೆ ಬಿಸಿಲು–ಮೋಡದ ವಾತಾವರಣ ಹಾಗೂ ಅಲ್ಲಲ್ಲಿ…

21 hours ago

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

3 days ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

3 days ago