ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಸುಳ್ಯ ಬಿಜೆಪಿಗೆ ಡಬಲ್ ಧಮಾಕಾ. ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವುದರ ಜೊತೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಭರ್ಜರಿ ಗೆಲುವಿನತ್ತ ಮುನ್ನಡೆದಿರುವುದು ಕಾರ್ಯಕರ್ತರನ್ನು ಸಂಭ್ರಮದ ಅಲೆಯಲ್ಲಿ ತೇಲುವಂತೆ ಮಾಡಿದೆ. ಸುಳ್ಯದಲ್ಲಿ ಕಾರ್ಯಕರ್ತರು ಅಲ್ಲಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆರಂಭಿಸಿದ್ದಾರೆ.ಬೆಳಿಗ್ಗಿನಿಂದಲೇ ಬಿಜೆಪಿ ಭಾರೀ ಮುನ್ನಡೆಯ ಸೂಚನೆ ದೊರೆಯುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಹಲವು ಮಂದಿ ಅಲ್ಲಲ್ಲಿ ಸಿಹಿ ತಿಂಡಿ ವಿತರಿಸಿ, ಗೆಲುವಿನ ನಗೆ ಬೀರಿ ಸಂಭ್ರಮಿಸುತ್ತಿರುವುದು ಕಂಡು ಬರುತ್ತಿತ್ತು. ಬಿಜೆಪಿ ಕಚೇರಿ ಮತ್ತಿತರ ಬಿಜೆಪಿ ಕೇಂದ್ರಗಳಲ್ಲಿ ಸಂಭ್ರಮ ಮುಂದುವರಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel