ಸುಳ್ಯ: ಸುಳ್ಯದ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ನಾಟಕೋತ್ಸವ ಗುರುವಾರ ಸಂಜೆ ಆರಂಭಗೊಂಡಿದೆ.
ನಾಲ್ಕು ದಿನಗಳ ಕಾಲ ನಡೆಯುವ ನಾಟಕೋತ್ಸವವನ್ನು ಪ್ರಸಿದ್ಧ ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಉದ್ಘಾಟಿಸಿದರು. ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ, ಸುಳ್ಯ ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ನಟರಾಜ ಹೊನ್ನವಳ್ಳಿಯವರನ್ನು ಸನ್ಮಾನಿಸಲಾಯಿತು. ರಂಗಮನೆಯ ಅಧ್ಯಕ್ಷ ಜೀವನ್ ರಾಂ ಸುಳ್ಯ ಸ್ವಾಗತಿಸಿದರು. ಪ್ರಿಯಾಂಶು ಆಶಯ ಗೀತೆ ಹಾಡಿದರು. ರಚನಾ ಕಾರ್ಯಕ್ರಮ ನಿರೂಪಿಸಿದರು. ವಕೀಲ ಕೃಷ್ಣಮೂರ್ತಿ ವಂದಿಸಿದರು.
ಸಂಜೆ 6.30 ರಿಂದ ನಾಟಕ ಪ್ರದರ್ಶನ: ಉದ್ಘಾಟನೆಯ ಬಳಿಕ ನಟರಾಜ ಹೊನ್ನವಳ್ಳಿ ನಿರ್ದೇಶಿಸಿ ತುಮಕೂರಿನ ಡೀಪ್ ಫೋಕಸ್ ಅಭಿನಯದ ‘ಔರಂಗಜೇಬ್’ ನಾಟಕ ಪ್ರದರ್ಶನಗೊಂಡಿತು. ಡಿ.13ರಂದು ನೀನಾಸಂ ತಿರುಗಾಟ ಅಭಿನಯದ ‘ಕರ್ಣಸಾಂಗತ್ಯ’, ಡಿ.14 ರಂದು ನೀನಾಸಂ ತಿರುಗಾಟ ಅಭಿನಯದ ರಾಕ್ಷಸ – ತಂಗಡಿ, ಡಿ.15ರಂದು ಮಂಡ್ಯ ರಮೇಶ್ ಅವರ ನಟನ ಮೈಸೂರು ಅಭಿನಯದ ‘ಹುಚ್ಚು ಖೋಡಿ ಮನಸು’ ನಾಟಕ ಪ್ರದರ್ಶನಗೊಳ್ಳಲಿದೆ.