ಸುಳ್ಯ :ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ನೀಡುವ 2020 ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಗೆ ಹಿರಿಯ ರಂಗ ತಾಂತ್ರಿಕತಜ್ಞ ಪುರುಷೋತ್ತಮ ತಲವಾಟರನ್ನು ಆಯ್ಕೆ ಮಾಡಲಾಗಿದೆ ಎಂದು ರಂಗಮನೆ ಅಧ್ಯಕ್ಷರಾದ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.
ದೃಶ್ಯಕಲೆಯಲ್ಲಿ ಪದವಿ ಪಡೆದ ಪುರುಷೋತ್ತಮ ತಲವಾಟರವರು ಕಳೆದ 45 ವರ್ಷಗಳಿಂದ ರಂಗಭೂಮಿಯಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡವರು. ರಾಜ್ಯ ಹೊರರಾಜ್ಯಗಳಲ್ಲಿ ಅನೇಕ ಪ್ರಮುಖ ನಾಟಕಗಳನ್ನು ನಿರ್ದೇಶಿಸಿದ್ದು ಮಾತ್ರವಲ್ಲ; ದೇಶದ ಪ್ರಸಿದ್ಧ ರಂಗನಿರ್ದೇಶಕರ ನಾಟಕಗಳಿಗೆ ರಂಗಸಜ್ಜಿಕೆ, ರಂಗ ಪರಿಕರ, ವಸ್ತ್ರವಿನ್ಯಾಸ, ಬೆಳಕು ಸಂಯೋಜನೆ, ಪ್ರಸಾಧನ.. ಮುಂತಾಗಿ ರಂಗಭೂಮಿಯ ಸರ್ವ ತಾಂತ್ರಿಕ ವರ್ಗದಲ್ಲಿ ದುಡಿದ ಅಪರೂಪದ ರಂಗಕರ್ಮಿಯಾಗಿದ್ದಾರೆ.
ನಾಟಕ ಮಾತ್ರವಲ್ಲದೆ ಅನೇಕ ಚಲನಚಿತ್ರ, ಟಿ.ವಿ.ಧಾರವಾಹಿಗಳಲ್ಲೂ ಅಭಿನಯಿಸಿದ್ದಾರೆ. ಹೆಗ್ಗೋಡು, ಬಿಜಾಪುರ, ಸಾಗರ, ಮಂಡ್ಯ ಮುಂತಾದೆಡೆಯ ಅನೇಕ ರಂಗಮಂದಿರಗಳಿಗೆ ಪ್ರತಿಧ್ವನಿ ನಿವಾರಣೆ ಮತ್ತು ಶಾಶ್ವತ ಬೆಳಕಿನ ವಿನ್ಯಾಸ ಮಾಡಿದ ರಾಜ್ಯದ ವಿಶೇಷ ತಾಂತ್ರಿಕ ತಜ್ಞರಿವರು. ನೀನಾಸಂ ರಂಗ ಶಿಕ್ಷಣ ಕೇಂದ್ರ, ರಾಜ್ಯದ ಎಲ್ಲ ರಂಗಾಯಣಗಳು, ಆಳ್ವಾಸ್ ರಂಗ ಶಿಕ್ಷಣ ಕೇಂದ್ರ ಮುಂತಾದೆಡೆ ಅತಿಥಿ ಉಪನ್ಯಾಸಕರಾಗಿ ದುಡಿದಿದ್ದಾರೆ. ಪಾಂಡಿಚೇರಿ, ಮಧುರೈ, ಬೆಂಗಳೂರು, ಪಣಜಿ ಸೇರಿದಂತೆ ದೇಶದ ನೂರಕ್ಕೂ ಹೆಚ್ಚು ಕಡೆಗಳಲ್ಲಿ
ಪ್ರಸಾಧನ ಮತ್ತು ಮುಖವಾಡ ಕಾರ್ಯಾಗಾರಗಳನ್ನು ನಡೆಸಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಚಮನ್ ಲಾಲ್ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳು ಇವರಿಗೆ ಲಭಿಸಿವೆ.
ಇದೀಗ ರಂಗಮನೆ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು ರೂ:ಹತ್ತು ಸಾವಿರ ನಗದು, ಪ್ರಶಸ್ತಿ ಫಲಕ ಸ್ಮರಣಿಕೆ ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಮಾರ್ಚ್ 1 ರಂದು ರಂಗಮನೆಯಲ್ಲಿ ನಡೆಯುವ ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವದ ಸಮಾರೋಪದಂದು ನೀಡಲಾಗುವುದೆಂದು ಜೀವನ್ ರಾಂ ತಿಳಿಸಿದ್ದಾರೆ.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…