ಬೆಳ್ಳಾರೆ: ಸಮಸ್ತ ಮದ್ರಸದ ಅದ್ಯಾಪಕರುಗಳ ಸಂಘಟನೆಯಾದ ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಮಹಾ ಸಭೆಯು ಸಮಸ್ತ ಮದ್ರಸ ತಪಾಸಣಾದಿಕಾರಿ ಬಹು. ಖಾಸಿಂ ಮುಸ್ಲಿಯಾರ್ ರವರು ಅಧ್ಯಕ್ಷತೆಯಲ್ಲಿ ಬೆಳ್ಳಾರೆ ಮದ್ರಸ ಸಭಾಂಗಣದಲ್ಲಿ ಜರುಗಿತು.
ಸಭೆಯನ್ನು ಬಹು ಉಮರ್ ಫೈಝಿ ಉದ್ಘಾಟಿಸಿ ಮಾತನಾಡಿದರು. ನಂತರ 2019-2020ನೇ ಸಾಲಿನ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ಸುಳ್ಯ ರೇಂಜ್ ಮದ್ರಸ ಮ್ಯೇನೇಜ್ಮೆಂಟ್ ಅಧ್ಯಕ್ಷ ತಾಜ್ ಮುಹಮ್ಮದ್, ಖಜಾಂಜಿ ಹಸೈನಾರ್ ದರ್ಮತ್ತನಿ, ಹಮೀದ್ ಹಾಜಿ ಸುಳ್ಯ, ಇಬ್ರಾಹಿಂ ಹಾಜಿ , ಬೆಳ್ಳಾರೆ ಜಮಾಅತ್ ಉಪಾಧ್ಯಕ್ಷ ಯು.ಎಚ್.ಅಬೂಬಕ್ಕರ್, ಕೋಶಾಧಿಕಾರಿ ಹಾಜಿ.ಕೆ.ಮಮ್ಮಾಲಿ, ಸದಸ್ಯರುಗಳಾದ ಬಿ.ಎ.ಬಶೀರ್, ಅಬ್ದುಲ್ ಖಾದರ್ ಹಾಜಿ, ಕೆ.ಎ.ಬಶೀರ್, ಅಬ್ದುಲ್ ರಹಿಮಾನ್.ಟಿ, ಮುಂತಾದವರು ಉಪಸ್ಥಿತರಿದ್ದರು.
ಹಸೈನಾರ್ ಮುಸ್ಲಿಯಾರ್ ಬೆಳ್ಳಾರೆ ಖಿರಾಅತ್ ಪಠಿಸಿದರು. ರೇಂಜ್ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿ ವಂದಿಸಿದರು
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel