ಸುಳ್ಯ: ಸುಳ್ಯ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರಥಬೀದಿಯ ರೋಟರಿ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷ ಡಾ.ಕೆ.ಜಿ.ಪುರುಷೋತ್ತಮ ನೇತೃತ್ವದ ನೂತನ ಪದಾಧಿಕಾರಿಗಳ ತಂಡ ಅಧಿಕಾರ ವಹಿಸಿಕೊಂಡರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಎಸ್.ಭುಜಂಗ ಆಚಾರ್ಯ ಪದಗ್ರಹಣ ನೆರವೇರಿಸಿದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಎಂ.ರಂಗನಾಥ್ ಭಟ್, ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಕೇಶವ ಪಿ.ಕೆ, ಗಿರಿಧರ ಸ್ಕಂದ ಮುಖ್ಯ ಅತಿಥಿಗಳಾಗಿದ್ದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಡಾ.ಹರ್ಷಿತಾ ಪುರುಷೋತ್ತಮ್, ರೋಟರಿ ನೂತನ ಕಾರ್ಯದರ್ಶಿ ಪಿ.ಆರ್.ಸನತ್, ಕೋಶಾಧಿಕಾರಿ ಕೆ.ಜಿ.ಸತೀಶ್, ನಿರ್ಗಮನ ಅಧ್ಯಕ್ಷ ಎಸ್.ದಯಾನಂದ ಆಳ್ವ, ಕಾರ್ಯದರ್ಶಿ ಡಾ.ಎಚ್.ಗುರುರಾಜ ವೈಲಾಯ, ಕೋಶಾಧಿಕಾರಿ ಆನಂದ ಖಂಡಿಗ, ಪದಾಧಿಕಾರಿಗಳಾದ ಎನ್.ಎ.ಜಿತೇಂದ್ರ, ಪ್ರಭಾಕರನ್ ನಾಯರ್, ಚಂದ್ರಶೇಖರ ಪೇರಾಲು, ಮಹಾಲಕ್ಷ್ಮಿ ಕೊರಂಬಡ್ಕ, ಗಿರಿಜಾಶಂಕರ ತುದಿಯಡ್ಕ, ಜಗದೀಶ್ ಅಡ್ತಲೆ, ಅಬ್ದುಲ್ ಕಲಾಂ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.