ಸುಳ್ಯ ಲಯನೆಸ್ ಕ್ಲಬ್‍ಗೆ ಜಿಲ್ಲೆಯಲ್ಲಿ ತೃತೀಯ ಸ್ಥಾನ

July 23, 2019
10:00 AM

ಸುಳ್ಯ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ 317-ಆ ಜಿಲ್ಲೆಯಲ್ಲಿ ಲಯನೆಸ್ ಸಂಸ್ಥೆಯ ಒಟ್ಟು 23 ಕ್ಲಬ್ ಗಳಲ್ಲಿ ಸುಳ್ಯ ಲಯನೆಸ್ ಸಂಸ್ಥೆಯು ಮೂರನೇ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮಂಗಳೂರಿನ ವಾಮಂಜೂರಿನ ಚರ್ಚ್ ಹಾಲಿನಲ್ಲಿ ಜುಲೈ 13, 2019ರಂದು ನಡೆದ ಡಿಸ್ಟ್ರಿಕ್ಟ್ ಅವಾರ್ಡ್ ನೈಟ್ –“ಅಭಿನಂದನೆ – ಅಭಿವಂದನೆ” ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ಟ್ ಲಯನೆಸ್ ಅಂಬಾಸಡರ್ ಲ| ಇಂದಿರಾ ಅರುಣ್ ಶೆಟ್ಟಿ, ಮಾಜಿ ಗವರ್ನರ್ ಲ| ಅರುಣ್ ಶೆಟ್ಟಿ, ಡಿಸ್ಟ್ರಿಕ್ಟ್ ಗವರ್ನರ್ ಲ| ದೇವದಾಸ್ ಭಂಡಾರಿ, ಲ| ಸುಖಲತಾ ಭಂಡಾರಿಯವರು ಪ್ರಶಸ್ತಿಗಳನ್ನು ನೀಡಿದರು.
ಪ್ರಶಸ್ತಿಗಳನ್ನು ಸುಳ್ಯ ಲಯನೆಸ್ ಕ್ಲಬ್ಬಿನ ಅಧ್ಯಕ್ಷೆ ಲ| ತೇಜಸ್ವಿನಿ ಕಿರಣ್ ನೀರ್ಪಾಡಿ, ಖಜಾಂಜಿ ಲ| ಸೀಮಾ ಮನೋಜ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ| ರೂಪಶ್ರೀ ಜೆ. ರೈಯವರು ಪಡೆದುಕೊಂಡರು.
ಬೆಸ್ಟ್ ಲಯನೆಸ್ ಕ್ಲಬ್ ಅವಾರ್ಡ್, ಬೆಸ್ಟ್ ಸರ್ವೀಸ್ ಆಕ್ಟಿವಿಟೀಸ್ ಅವಾರ್ಡ್, ಬೆಸ್ಟ್ ಲಯನೆಸ್ ನೈಟ್ ಅವಾರ್ಡ್, ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್, ಬೆಸ್ಟ್ ಸೆಕ್ರೆಟರಿ ಅವಾರ್ಡ್, ಬೆಸ್ಟ್ ಟ್ರೆಶರರ್ ಅವಾರ್ಡ್, ಸ್ಕ್ರಾಪ್ ಬುಕ್ ಅವಾರ್ಡ್ ಇತ್ಯಾದಿ ಅವಾರ್ಡ್ ಸಂಸ್ಥೆಯ ಚಟುವಟಿಕೆಗಳ ಆಧಾರದಲ್ಲಿ ವಿತರಿಸಲಾಯಿತು. ಸುಳ್ಯ ಲಯನೆಸ್ ಕ್ಲಬ್ ಸ್ಕ್ರಾಪ್ ಬುಕ್ ಅವಾರ್ಡ್‍ನಲ್ಲಿ ದ್ವಿತೀಯ ಅಲ್ಲದೆ ಬೆಸ್ಟ್ ಪರ್‍ಫಾರ್ಮೆನ್ಸ್ ಇನ್ ಕೇರ್ ಫಾರ್ ಸ್ಪೆಶಲ್ ಚಿಲ್ಡ್ರನ್, ಇಮೇಜ್ ಬಿಲ್ಡಿಂಗ್, ಕೇರ್ ಫಾರ್ ಸೀನಿಯರ್ ಸಿಟಿಜನ್, ಎಂಪವರ್ ವುಮನ್, ಚೈಲ್ಡ್ ಕೇರ್, ಎನ್‍ವಿರಾನ್‍ಮೆಂಟ್, ಕೇರ್ ಫಾರ್ ಚಿಲ್ಡ್ರನ್, ರಿಲೀವಿಂಗ್ ಹಂಗರ್, ನೇಶನ್ ಫಸ್ಟ್, ಅಗ್ರಿಕಲ್ಚರ್, ಎಜ್ಯುಕೇಶನ್ ಮುಂತಾದ ವಿಭಾಗಗಳಲ್ಲಿ ಸುಳ್ಯ ಲಯನೆಸ್ ಸಂಸ್ಥೆ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತದೆ.
ಇದಲ್ಲದೆ ಲ| ಹರಿಣಿ ಸದಾಶಿವ ಇವರಿಗೆ “ಡೈಮಂಡ್ ಸುಪ್ರೀಂ ಎಕ್ಸಲೆಂಟ್ ಅವಾರ್ಡ್”, ಲ| ನೇತ್ರಾವತಿ ಪಡ್ಡಂಬೈಲ್‍ರವರಿಗೆ ಹಾಗೂ ಲ| ಗೀತಾ ಶೆಟ್ಟಿಯವರಿಗೆ “ಸಿಲ್ವರ್ ಸುಪ್ರೀಂ ಅವಾರ್ಡ್”, ಲ| ದಿವ್ಯಾ ನಂಜೆಯವರಿಗೆ “ಸಪೋರ್ಟಿಂಗ್ ಝೋನ್ ಚೇರ್ ಪರ್ಸನ್ ಅವಾರ್ಡ್”, ಲ| ಕಮಲಾ ಬಾಲಚಂದ್ರರವರಿಗೆ “ಸಪೋರ್ಟಿಂಗ್ ಡಿಸ್ಟ್ರಿಕ್ಟ್ ಚೇರ್ ಪರ್ಸನ್ ಅವಾರ್ಡ್” ಲಭಿಸಿರುತ್ತದೆ.
ಕಾರ್ಯಕ್ರಮದಲ್ಲಿ ಸುಳ್ಯ ಲಯನ್ಸ್ ಕ್ಲಬ್ ನ 2018-19ರ ಅಧ್ಯಕ್ಷ ಲಯನ್ ಜಗನ್ನಾಥ ರೈ, ಪ್ರಸ್ತುತ ಸಾಲಿನ ಅಧ್ಯಕ್ಷ ಲಯನ್ ಗಂಗಾಧರ ರೈ, ಖಜಾಂಜಿ ಲಯನ್ ತಮ್ಮಯ್ಯ, ಲಯನ್ ಕರ್ನಲ್ ಶರತ್ ಭಂಡಾರಿ, ಲಯನ್ ರಾಧಾಕೃಷ್ಣ ಮಾಣಿಬೆಟ್ಟು, ಲಯನ್ ನಳಿನ್ ಕುಮಾರ್ ಕೋಡ್ತುಗುಳಿ, ಲಯನ್ ಶಶಿಧರ ಶೆಟ್ಟಿ, ಲಯನ್ ಗಣೇಶ್ ರೈ ಪಾಲ್ಗೊಂಡಿದ್ದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌
August 13, 2025
11:03 PM
by: ದ ರೂರಲ್ ಮಿರರ್.ಕಾಂ
ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ
August 13, 2025
9:13 PM
by: The Rural Mirror ಸುದ್ದಿಜಾಲ
15 ದಿನಗಳಿಗೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ – ಜಿ. ಪಂ ಸಿಇಒ ಸೂಚನೆ 
August 13, 2025
8:04 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 13-08-2025 | ಆ.21 ರವರೆಗೆ ಮಳೆ ವಿಸ್ತರಣೆ ಎಲ್ಲಿ ? ವಾಯುಭಾರ ಕುಸಿತದ ಕಾರಣದಿಂದ ಮಳೆ ಎಲ್ಲೆಲ್ಲಾ ಇದೆ..?
August 13, 2025
2:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group