ಸುಳ್ಯ: ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ 317-ಆ ಜಿಲ್ಲೆಯಲ್ಲಿ ಲಯನೆಸ್ ಸಂಸ್ಥೆಯ ಒಟ್ಟು 23 ಕ್ಲಬ್ ಗಳಲ್ಲಿ ಸುಳ್ಯ ಲಯನೆಸ್ ಸಂಸ್ಥೆಯು ಮೂರನೇ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮಂಗಳೂರಿನ ವಾಮಂಜೂರಿನ ಚರ್ಚ್ ಹಾಲಿನಲ್ಲಿ ಜುಲೈ 13, 2019ರಂದು ನಡೆದ ಡಿಸ್ಟ್ರಿಕ್ಟ್ ಅವಾರ್ಡ್ ನೈಟ್ –“ಅಭಿನಂದನೆ – ಅಭಿವಂದನೆ” ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ಟ್ ಲಯನೆಸ್ ಅಂಬಾಸಡರ್ ಲ| ಇಂದಿರಾ ಅರುಣ್ ಶೆಟ್ಟಿ, ಮಾಜಿ ಗವರ್ನರ್ ಲ| ಅರುಣ್ ಶೆಟ್ಟಿ, ಡಿಸ್ಟ್ರಿಕ್ಟ್ ಗವರ್ನರ್ ಲ| ದೇವದಾಸ್ ಭಂಡಾರಿ, ಲ| ಸುಖಲತಾ ಭಂಡಾರಿಯವರು ಪ್ರಶಸ್ತಿಗಳನ್ನು ನೀಡಿದರು.
ಪ್ರಶಸ್ತಿಗಳನ್ನು ಸುಳ್ಯ ಲಯನೆಸ್ ಕ್ಲಬ್ಬಿನ ಅಧ್ಯಕ್ಷೆ ಲ| ತೇಜಸ್ವಿನಿ ಕಿರಣ್ ನೀರ್ಪಾಡಿ, ಖಜಾಂಜಿ ಲ| ಸೀಮಾ ಮನೋಜ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ| ರೂಪಶ್ರೀ ಜೆ. ರೈಯವರು ಪಡೆದುಕೊಂಡರು.
ಬೆಸ್ಟ್ ಲಯನೆಸ್ ಕ್ಲಬ್ ಅವಾರ್ಡ್, ಬೆಸ್ಟ್ ಸರ್ವೀಸ್ ಆಕ್ಟಿವಿಟೀಸ್ ಅವಾರ್ಡ್, ಬೆಸ್ಟ್ ಲಯನೆಸ್ ನೈಟ್ ಅವಾರ್ಡ್, ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್, ಬೆಸ್ಟ್ ಸೆಕ್ರೆಟರಿ ಅವಾರ್ಡ್, ಬೆಸ್ಟ್ ಟ್ರೆಶರರ್ ಅವಾರ್ಡ್, ಸ್ಕ್ರಾಪ್ ಬುಕ್ ಅವಾರ್ಡ್ ಇತ್ಯಾದಿ ಅವಾರ್ಡ್ ಸಂಸ್ಥೆಯ ಚಟುವಟಿಕೆಗಳ ಆಧಾರದಲ್ಲಿ ವಿತರಿಸಲಾಯಿತು. ಸುಳ್ಯ ಲಯನೆಸ್ ಕ್ಲಬ್ ಸ್ಕ್ರಾಪ್ ಬುಕ್ ಅವಾರ್ಡ್‍ನಲ್ಲಿ ದ್ವಿತೀಯ ಅಲ್ಲದೆ ಬೆಸ್ಟ್ ಪರ್‍ಫಾರ್ಮೆನ್ಸ್ ಇನ್ ಕೇರ್ ಫಾರ್ ಸ್ಪೆಶಲ್ ಚಿಲ್ಡ್ರನ್, ಇಮೇಜ್ ಬಿಲ್ಡಿಂಗ್, ಕೇರ್ ಫಾರ್ ಸೀನಿಯರ್ ಸಿಟಿಜನ್, ಎಂಪವರ್ ವುಮನ್, ಚೈಲ್ಡ್ ಕೇರ್, ಎನ್‍ವಿರಾನ್‍ಮೆಂಟ್, ಕೇರ್ ಫಾರ್ ಚಿಲ್ಡ್ರನ್, ರಿಲೀವಿಂಗ್ ಹಂಗರ್, ನೇಶನ್ ಫಸ್ಟ್, ಅಗ್ರಿಕಲ್ಚರ್, ಎಜ್ಯುಕೇಶನ್ ಮುಂತಾದ ವಿಭಾಗಗಳಲ್ಲಿ ಸುಳ್ಯ ಲಯನೆಸ್ ಸಂಸ್ಥೆ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತದೆ.
ಇದಲ್ಲದೆ ಲ| ಹರಿಣಿ ಸದಾಶಿವ ಇವರಿಗೆ “ಡೈಮಂಡ್ ಸುಪ್ರೀಂ ಎಕ್ಸಲೆಂಟ್ ಅವಾರ್ಡ್”, ಲ| ನೇತ್ರಾವತಿ ಪಡ್ಡಂಬೈಲ್‍ರವರಿಗೆ ಹಾಗೂ ಲ| ಗೀತಾ ಶೆಟ್ಟಿಯವರಿಗೆ “ಸಿಲ್ವರ್ ಸುಪ್ರೀಂ ಅವಾರ್ಡ್”, ಲ| ದಿವ್ಯಾ ನಂಜೆಯವರಿಗೆ “ಸಪೋರ್ಟಿಂಗ್ ಝೋನ್ ಚೇರ್ ಪರ್ಸನ್ ಅವಾರ್ಡ್”, ಲ| ಕಮಲಾ ಬಾಲಚಂದ್ರರವರಿಗೆ “ಸಪೋರ್ಟಿಂಗ್ ಡಿಸ್ಟ್ರಿಕ್ಟ್ ಚೇರ್ ಪರ್ಸನ್ ಅವಾರ್ಡ್” ಲಭಿಸಿರುತ್ತದೆ.
ಕಾರ್ಯಕ್ರಮದಲ್ಲಿ ಸುಳ್ಯ ಲಯನ್ಸ್ ಕ್ಲಬ್ ನ 2018-19ರ ಅಧ್ಯಕ್ಷ ಲಯನ್ ಜಗನ್ನಾಥ ರೈ, ಪ್ರಸ್ತುತ ಸಾಲಿನ ಅಧ್ಯಕ್ಷ ಲಯನ್ ಗಂಗಾಧರ ರೈ, ಖಜಾಂಜಿ ಲಯನ್ ತಮ್ಮಯ್ಯ, ಲಯನ್ ಕರ್ನಲ್ ಶರತ್ ಭಂಡಾರಿ, ಲಯನ್ ರಾಧಾಕೃಷ್ಣ ಮಾಣಿಬೆಟ್ಟು, ಲಯನ್ ನಳಿನ್ ಕುಮಾರ್ ಕೋಡ್ತುಗುಳಿ, ಲಯನ್ ಶಶಿಧರ ಶೆಟ್ಟಿ, ಲಯನ್ ಗಣೇಶ್ ರೈ ಪಾಲ್ಗೊಂಡಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…