ಸುಳ್ಯ : ಭಾರತೀಯ ಜೀವ ವಿಮಾ ನಿಗಮದ ವಿಮಾ ಸಪ್ತಾಹ ಸಮಾರೋಪ ಸುಳ್ಯದ ಎಲ್ಲೈಸಿ ಉಪಗ್ರಹ ಶಾಖೆಯಲ್ಲಿ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಶಾಖಾಧಿಕಾರಿ ಜಿ.ಶಶಿಧರ ಹೆಗ್ಡೆ ಅವರು ಮಾತನಾಡಿ ದೇಶದ ಉದ್ದಗಲಕ್ಕೂ ಪಸರಿಸಿರುವ ಪ್ರತಿಷ್ಠಿತ ಸಂಸ್ಥೆಯಾದ ಎಲ್ಲೈಸಿ 63 ಸಂವತ್ಸರಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ವಿಮಾ ಕ್ಷೇತ್ರದ ಉದಾರೀಕರಣ ನೀತಿಯಿಂದಾಗಿ ಉದ್ಭವಿಸಿದ ಹಲವು ಪ್ರಕ್ಷುಬ್ದ ಸನ್ನಿವೇಶಗಳನ್ನು ನಿಗಮವು ಸಮರ್ಥವಾಗಿ ನಿಭಾಯಿಸಿದೆ ಎಂದಾದರೆ ಅದಕ್ಕೆ ಗ್ರಾಹಕರು ಸಂಸ್ಥೆ ಮೇಲಿಟ್ಟಿರುವ ಪ್ರೀತಿ ವಿಶ್ವಾಸವೇ ಕಾರಣ. ನಿಮ್ಮ ಆಶೋತ್ತರಗಳಿಗೆ ಸ್ಪಂದಿಸುತ್ತಾ ಮುಂದೆಯೂ ದಕ್ಷ ಪ್ರಾಮಾಣಿಕ ಸೇವೆಯ ದೀಕ್ಷೆ ನಿರಂತರ ಮುಂದುವರಿಸುವ ಭರವಸೆ ನೀಡುತ್ತೇವೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿಗಮದ ಪ್ರತಿನಿಧಿ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರು ಶುಭ ಹಾರೈಸಿ, ವೃತ್ತಿ ಮೇಲಿನ ಗೌರವ, ಕರ್ತವ್ಯನಿಷ್ಠೆ ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ದುಡಿಮೆಯೊಂದಿಗೆ ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಳ್ಳಿ ಎಂದರು.
ಅಭಿವೃದ್ಧಿ ಅಧಿಕಾರಿಗಳಾದ ಕೆ.ಶ್ರೀನಿವಾಸ, ಗಣೇಶ ಎಂ.ಹೆಗಡೆ, ಜಯಕುಮಾರ್ ಪಿ. ಮತ್ತು ಉಮೇಶ ನಾಯಕ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.ವೃತ್ತಿಸಾಧಕ ಪ್ರತಿನಿಧಿಗಳಾದ ಶಂಕರಲಿಂಗಂ ಕೆ., ಮಾಧವ ಕೆ.ಜಾಲ್ಸೂರು ಮತ್ತು ವಸಂತ ಹೊದ್ದೆಟ್ಟಿ ಅವರನ್ನು ಗೌರವಿಸಲಾಯಿತು.
ಉಪ ಆಡಳಿತಾಧಿಕಾರಿ ಲಿಂಗಪ್ಪ ಗೌಡ ಸ್ವಾಗತಿಸಿ, ಪ್ರತಿನಿಧಿ ಪ್ರಭಾಕರ ಎಸ್.ಎನ್. ವಂದಿಸಿದರು. ಆಡಳಿತಾಧಿಕಾರಿ ಮಹಾಲಿಂಗ ನಾಯ್ಕ ಶುಭ ಹಾರೈಸಿದರು. ಪ್ರತಿನಿಧಿ ಪದ್ಮನಾಭ ಶೆಟ್ಟಿ ನಿರೂಪಿಸಿದರು. ಕಚೇರಿ ಸಹಾಯಕರಾದ ಸಂದೀಪ್ ಮತ್ತು ರಾಜೇಶ್ ಸಹಕರಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…