ಸುಳ್ಯ: ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ವತಿಯಿಂದ ಶಿವಳ್ಳಿ ಬಾಂಧವರಿಂದ ನೃತ್ಯ, ಹಾಡು, ನಾಟಕ, ಯಕ್ಷಗಾನ ಮೊದಲಾದ ವೈವಿಧ್ಯಮಯ ಕಾರ್ಯಕ್ರಮ ಇಲ್ಲಿನ ಶ್ರೀಗುರು ರಾಘವೇಂದ್ರ ಮಠದ ಆವರಣದಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಶಿವಳ್ಳಿ ಸಂಪನ್ನದ ಅಧ್ಯಕ್ಷೆ ಮಮತಾ ಮೂಡಿತ್ತಾಯ ವಹಿಸಿ ಕಲಾವಿದರಿಗೆ ಶುಭ ಹಾರೈಸಿದರು. ಖ್ಯಾತ ಮಿಮಿಕ್ರಿ ಕಲಾವಿದ ಪಟ್ಟಾಬಿರಾಮ ಸುಳ್ಯ ಅವರನ್ನು ಪತ್ರಕರ್ತ ಗಂಗಾಧರ ಮಟ್ಟಿ ಸಮ್ಮಾನಿಸಿ, ಪಟ್ಟಾಭಿ ಅವರ ಪ್ರತಿಭೆ ಇದೀಗ ರಾಜ್ಯವ್ಯಾಪಿ ಹರಡಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಇವರಿಗೆ ಮುಂದೆ ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ದೊರೆಯಲಿ ಎಂದು ಅಭಿನಂದಿಸಿದರು. ಸುಮತಿ ಪಟ್ಟಾಭಿ ಅವರನ್ನು ಪುರಸ್ಕರಿಸಲಾಯಿತು.
ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಪ್ರಥಮ್ ಮೂಡಿತ್ತಾಯ ಸ್ವಾಗತಿಸಿ, ಹರಿಕೃಷ್ಣ ನಾವಡ ವಂದಿಸಿದರು. ಸೌಮ್ಯ ಸೋಮಯಾಗಿ ಸಮ್ಮಾನ ಪತ್ರ ವಾಚಿಸಿದರು. ಸುಳ್ಯ, ಸುಬ್ರಹ್ಮಣ್ಯ ಮತ್ತು ಪಂಜದ ಶಿವಳ್ಳಿ ಘಟಕದ ಸದಸ್ಯರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel