ಸುಳ್ಯ: ಸುಳ್ಯದ ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಆಶ್ರಯದ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಶ್ರೀ ಗುರುರಾಯರ ಆರಾಧನಾ ಮಹೋತ್ಸವವು ವೇದಮೂರ್ತಿ ಶ್ರೀಹರಿ ಎಳಚಿತ್ತಾಯ ನೇತೃತ್ವದಲ್ಲಿ ನಡೆಯಿತು.
ಪೂರ್ವಾಹ್ನ ಮಹಾ ಗಣಪತಿ ಹವನ, ಪವಮಾನ ಹೋಮ, ಅಲಂಕಾರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.ಸಂಜೆ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ, ಮಹಿಳಾ ಪರಿಷತ್ ಸುಳ್ಯ ಮತ್ತು ಪಂಜದ ಶಿವಳ್ಳಿ ಸಂಪನ್ನ ಮಹಿಳಾ ಘಟಕದ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.ಬಳಿಕ ತೊಟ್ಟಿಲ ಸೇವೆ ನಡೆಯಿತು. ನೂತನವಾಗಿ ಗುರುಗಳಿಗೆ ತೊಟ್ಟಿಲನ್ನು ನೀಡಿದ ಕೃಷ್ಣ ನಾವಡ ಮತ್ತು ರವಿರಾಜ ನಾವಡ ಅವರನ್ನು ಹಾಗೂ ಚಪ್ಪರಕ್ಕೆ ಧನ ಸಹಾಯ ನೀಡಿದ ಕೇಶವ ಕೇಕುಣ್ಣಾಯ ಅವರನ್ನು ಗೌರವಿಸಲಾಯಿತು. ಅಷ್ಟಾವಧಾನ, ಸೇವೆಯಲ್ಲಿ ವೇದ, ವ್ಯಾಕರಣ, ಕಾವ್ಯ, ಜೋತಿಷ್ಯದಲ್ಲಿ ವೇದಮೂರ್ತಿಗಳಾದ ಶ್ರೀಹರಿ ಎಳಚಿತ್ತಾಯ, ಶ್ರೀವರ ಪಾಂಗಾಣ್ಣಾಯ, ಅರಂಬೂರು ಭಾರದ್ವಾಜ ಆಶ್ರಮದ ವೇದಪಾಠ ಶಾಲೆಯ ಪ್ರಾಂಶುಪಾಲ ವೇದಮೂರ್ತಿ ವೆಂಕಟೇಶ ಶಾಸ್ತ್ರಿ ಮತ್ತು ವೇದ ವಿದ್ಯಾರ್ಥಿಗಳು ಸಹಕರಿಸಿದರು.ಸಂಗೀತದಲ್ಲಿ ಕೃತಿಕಾ ಶಗ್ರಿತ್ತಾಯ, ಭಜನೆಯಲ್ಲಿ ಜಯಪ್ರಕಾಶ ಕಾಯರ್ತೋಡಿ, ಭರತನಾಟ್ಯದಲ್ಲಿ ಪೂರ್ವಿಕೃಷ್ಣ , ಚೆಂಡೆವಾದನ ಸುಮಂತ್ ಮತ್ತು ಸಮರ್ಥ ಕಡಂಬಳಿತ್ತಾಯ, ನಾಟಕದಲ್ಲಿ ತುಷಾರ ಗೌಡ ಸುಳ್ಯ ಮತ್ತು ಸಾಯಿ ನಕ್ಷತ್ರ, ಶೇಖರ ಮಣಿಯಾಣಿ ನೇತೃತ್ವದ ಮಹಾವಿಷ್ಣು ಚಿಕ್ಕಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಅಷ್ಟಾವಧಾನವನ್ನು ಪ್ರಕಾಶ್ ಮೂಡಿತ್ತಾಯ ಸಂಘಟಿಸಿದ್ದು, ಸುಧನ್ವಕೃಷ್ಣ, ಪ್ರಥಮ ಮೂಡಿತ್ತಾಯ, ಅನುಷಾ ಭಾರ್ಗವಿ ಸಹಕರಿಸಿದರು.
ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಟ್ರಸ್ಟಿನ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ ಮತ್ತು ಇತರ ಟ್ರಸ್ಟಿಯವರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…