ಹ್ಯಾಮಿಲ್ಟನ್: ನ್ಯೂಝಿಲ್ಯಾಂಡ್ ವಿರುದ್ಧದ ಮೂರನೇ ಟ್ವೆಂಟಿ-20 ಪಂದ್ಯವು ಟೈ ಆಗಿದ್ದು, ಸೂಪರ್ ಓವರ್ ನಲ್ಲಿ ಭಾರತವು ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ತಂಡ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ರೋಹಿತ್ ಶರ್ಮಾ ಅರ್ಧಶತಕ ನೆರವಿನಲ್ಲಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 179 ರನ್ ಗಳಿಸಿತ್ತು.ರೋಹಿತ್ ಶರ್ಮಾ 65 ರನ್ (40ಎ, 6ಬೌ,3ಸಿ) ದಾಖಲಿಸಿದರು.
179 ರನ್ ಗಳನ್ನು ಬೆನ್ನತ್ತಿದ ನ್ಯೂಝಿಲ್ಯಾಂಡ್ 20 ಓವರ್ ಗಳಲ್ಲಿ 179 ರನ್ ಗಳನ್ನು ದಾಖಲಿಸಲು ಮಾತ್ರ ಸಾಧ್ಯವಾಯಿತು. 20ನೆ ಓವರ್ ನಲ್ಲಿ ನ್ಯೂಝಿಲ್ಯಾಂಡ್ 9 ರನ್ ಗಳಿಸಬೇಕಾಗಿತ್ತು. ಮೊದಲ ಬಾಲ್ ನಲ್ಲಿ ಸಿಕ್ಸರ್ ನೀಡಿದ ಮುಹಮ್ಮದ್ ಶಮಿ ನಂತರದ 5 ಎಸೆತಗಳಲ್ಲಿ ನ್ಯೂಝಿಲ್ಯಾಂಡ್ 2 ರನ್ ಗಳಿಸಲಷ್ಟೇ ಅವಕಾಶ ನೀಡಿದರು.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿದ ನ್ಯೂಝಿಲ್ಯಾಂಡ್ 17 ರನ್ ಗಳನ್ನು ಗಳಿಸಿತು. ಭಾರತದ ಪರ ಕೊನೆಯ 2 ಎಸೆತಗಳಲ್ಲಿ 10 ರನ್ ಗಳ ಅವಶ್ಯಕತೆಯಿದ್ದಾಗ ರೋಹಿತ್ ಶರ್ಮಾ 2 ಸಿಕ್ಸರ್ ಸಿಡಿಸಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…