Advertisement
ವಿಶೇಷ ವರದಿಗಳು

ಸೂರಿಲ್ಲದ‌ ಬಡ ಕುಟುಂಬಕ್ಕೆ ಆಸರೆಯಾದ ಟೀಂ ನರೇಂದ್ರ ಪುತ್ತೂರು

Share
ಪುತ್ತೂರು: ಸಮಾಜ ಸೇವೆಯ ಮೂಲಕ ರಾಷ್ಟ‌ಕಟ್ಟುವ ಧ್ಯೇಯವನ್ನು ಅಳವಡಿಸಿಕೊಂಡು ರಚನೆಯಾದ ಟೀಂ ನರೇಂದ್ರ ಪುತ್ತೂರು ತಂಡವು ಸೂರಿಲ್ಲದ ಕುಟುಂಬವೊಂದಕ್ಕೆ ದಾನಿಗಳ ಸಹಕಾರದಿಂದ ಮನೆಯೊಂದನ್ನು ಕಟ್ಟಿಕೊಟ್ಟಿದೆ.
ನಾಲ್ಕು ಹೆಣ್ಣುಮಕ್ಕಳು ಮತ್ತು ಓರ್ವ ಪುತ್ರನನ್ನು ಹೊಂದಿರುವ ವಿಟ್ಲ ಸಮೀಪದ ಪೆರುವಾಯಿಯ‌ ಐತ್ತಪ್ಪ ನಾಯ್ಕ್ ದಂಪತಿಗಳದ್ದು ಪುಟ್ಟ ಡೇರೆಯೊಳಗೆ ವಾಸ. ಬಯಲಿನಲ್ಲೇ‌ ಶೌಚ, ‌ಸ್ನಾನಕ್ಕೆ ಮನೆ ಪಕ್ಕದ ತೋಡಿನ ಆಶ್ರಯ. ಇಂತಹ ಪರಿಸ್ಥಿತಿಯಲ್ಲಿದ್ದ ಬಡ ಕುಟುಂಬಕ್ಕೆ ಕೂಲಿ ಕೆಲಸದ ಮೂಲಕ ಏಕಮಾತ್ರ ಆಧಾರವಾಗಿದ್ದ ಮಗ ಮರದಿಂದ ಬಿದ್ದು ಸೊಂಟದಿಂದ ಕೆಳಗೆ ನಿಶ್ಯಕ್ತಿಯಿಂದಾಗಿ ನೆಲ ಬಿಟ್ಟು ಮೇಲೇಳಲಾಗದ್ದು ಮತ್ತೊಂದು ಆಘಾತ. ಇವರ ಮನಕಲಕುವ ಘಟನೆಯನ್ನು ತಿಳಿದು ನೆರವಾಗಲು ಮುಂದಾದದ್ದು ಪುತ್ತೂರಿನ ಟೀಂ ನರೇಂದ್ರ ‌ತಂಡ.
ಟೀಂ ನರೇಂದ್ರ ತಂಡದ ಅಧ್ಯಕ್ಷರಾದ ಸಂತೋಷ್ ಕುಮಾರ್ ವಾಗ್ಲೆ ಅವರ ನೇತೃತ್ವದ ಪದಾಧಿಕಾರಿಗಳ ತಂಡವು ದಾನಿಗಳ ಸಹಕಾರದಿಂದ ಕಟ್ಟಿದ ಸುಸಜ್ಜಿತವಾದ ಮನೆಯು ಇದೀಗ ಗೃಹ ಪ್ರವೇಶವನ್ನೂ ಮುಗಿಸಿ‌ ಕುಟುಂಬದ ಸದಸ್ಯರ ವಾಸಕ್ಕೆ ಲಭ್ಯವಾಗಿದೆ. ಅ.30 ರಂದು  ಮಾಣಿಲ ಶ್ರೀಧಾಮದ  ಶ್ರೀ ಮೋಹನದಾಸ ಸ್ವಾಮೀಜಿಯವರು ದೀಪ ಬೆಳಗಿಸುವುದರ ಮೂಲಕ ಹಸ್ತಾಂತರಿಸಲ್ಪಟ್ಟ ಹೊಸಮನೆಯಲ್ಲಿ ಟೀ ನರೇಂದ್ರದ ಖಜಾಂಜಿ ವೇ.ಮೂ.ಶ್ರೀಕೃಷ್ಣ ‌ಉಪಾಧ್ಯಾಯರು ಪೌರೋಹಿತ್ಯದಲ್ಲಿ ಗಣಪತಿ ಹವನ, ಸತ್ಯನಾರಾಯಣ ಪೂಜೆಯ ಮೂಲಕ ಶಾಸ್ತ್ರೋಕ್ತ ಗೃಹ ಪ್ರವೇಶ ಕಾರ್ಯಕ್ರಮ ಉಚಿತವಾಗಿ ನೆರವೇರಿಸಿದರು.
ಟೀಂ‌ ನರೇಂದ್ರ ತಂಡದ ಸೇವಾಕಾರ್ಯವನ್ನು ತಿಳಿದ ಪುತ್ತೂರಿನ‌ ಶಾಸಕರಾದ ಸಂಜೀವ ಮಠಂದೂರು  ಸ್ಥಳಕ್ಕಾಗಮಿಸಿ ಯುವಕರ ಕಾರ್ಯವನ್ನು ಶ್ಲಾಘಿಸಿ‌ ಕಾರ್ಯಕ್ರಮದಲ್ಲಿ ಭಾಗಿಯಾದರು.
ಈ‌ ಸಂದರ್ಭದಲ್ಲಿ ಚಣಿಲ ತಿಮ್ಮಪ್ಪ ಶೆಟ್ಟಿ, ದಾನಿಗಳಾದ ರವೀಂದ್ರ (ದೇವ ಟ್ರೇಡರ್ಸ್ ಪುತ್ತೂರು), ಡಾ. ಅಡಿಗ, ಡಾ ಭಾಸ್ಕರ ರಾವ್, ಟೀಮ್ ನರೇಂದ್ರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ವಾಗ್ಲೆ, ಕಾರ್ಯದರ್ಶಿ ಡಾ. ಸುರೇಶ್ ಪುತ್ತೂರಾಯ, ಕಾರ್ಯಕರ್ತರಾದ ಸುರೇಶ್ ಕಲ್ಲಾರೆ, ಜಿ. ಕೃಷ್ಣ, ಮನೋಜ್ ಪಡ್ಡಾಯೂರು, ಅಶ್ವತ್ಥ್ ಮೊದಲಾದವರು ಉಪಸ್ಥಿತರಿದ್ದರು.
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಲ್ಪಾವಧಿ ಬೆಳೆ ಸಾಲ – ಹಾಗೆಂದರೇನು..? | ರೈತರಿಗೆ ಪ್ರಯೋಜನ ಏನು..?

ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…

9 hours ago

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |

‌ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌…

15 hours ago

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

2 days ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

2 days ago