ಮಳೆಗಾಲ ಶುರುವಾಯಿತೆಂದರೆ ಸೊಳ್ಳೆಗಳ ಕಾಟ. ಅದರ ಜೊತೆಗೇ ಆರಂಭವಾಗುತ್ತದೆ ರೋಗಗಳ ಕಾಟ. ಈ ಸಂದರ್ಭ ಎಚ್ಚರ ಇರಬೇಕಾದ್ದು ತೀರಾ ಅಗತ್ಯ.
ಮಲೇರಿಯಾ ರೋಗಾಣುವನ್ನು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
ಲಕ್ಷಣಗಳು: ಪ್ರತಿದಿನ ಅಥವಾ ದಿನ ಬಿಟ್ಟು ವಿಪರೀತ ಚಳಿಯಿಂದ ಕೂಡಿದ ಜ್ವರ, ವಿಪರೀತ ತಲೆನೋವು, ವಾಂತಿ ,ಮೈಕೈನೋವು ,ಅತಿಯಾದ ಬೆವರುವಿಕೆ ಸಹಿತ ಜ್ವರವು ಇಳಿಮುಖವಾದಾಗ ತುಂಬಾ ಬಳಲಿಕೆ.
ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆ: ರಕ್ತ ಪರೀಕ್ಷೆಯ ಮೂಲಕ ಮಲೇರಿಯಾ ಖಚಿತಗೊಂಡರೆ, ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ರಕ್ತಪರೀಕ್ಷೆಯಲ್ಲಿ ಮಲೇರಿಯಾ ಸ್ಮಿಯರ್ ಟೆಸ್ಟ್ ಗಿಂತ ಮಲೇರಿಯಾ ಕ್ಯೂ. ಬಿ. ಸಿ. ಟೆಸ್ಟ್ ಮಲೇರಿಯಾ ಪತ್ತೆಹಚ್ಚುವಲ್ಲಿ ಹೆಚ್ಚು ಖಚಿತವಾಗಿರುತ್ತದೆ. ಪ್ಲಾಸ್ಮೊಡಿಯಂ ವೈವಾಕ್ಸ್ ಮಲೇರಿಯಾಗಿಂತ ಪ್ಲಾಸ್ಮೊಡಿಯಂ ಫಾಲ್ಸಿ ಫಾರಂ ಜಾತಿಯ ಮಲೇರಿಯಾವು ಹೆಚ್ಚು ಅಪಾಯಕಾರಿಯಾಗಿರುತ್ತದೆ.
ಡೆಂಘೆ ರೋಗಕ್ಕೆ ಕಾರಣವಾದ ವೈರಸ್ ರೋಗಾಣುವನ್ನು ಈಡೀಸ್ ಈಜಿಪ್ಟಿ ಎಂಬ ಸೊಳ್ಳೆಯು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
ಲಕ್ಷಣಗಳು: ತೀವ್ರ ಜ್ವರ, ಕಣ್ಣುಗಳು ಕೆಂಪಾಗುವಿಕೆ, ಸ್ನಾಯು ನೋವು, ಸಂದುಗಳಲ್ಲಿ ಅಸಾಧ್ಯ ನೋವಿನಿಂದ ಕೈಕಾಲುಗಳನ್ನು ಅಲ್ಲಾಡಿಸಲು ಕಷ್ಟವಾಗುವುದು, ಕಂಠದಲ್ಲಿ ಬಾವು ಕಾಣಿಸಿಕೊಳ್ಳಬಹುದು ,ಕಾಯಿಲೆ ಗಂಭೀರವಾದಾಗ., ಪ್ಲೇಟ್ಲೆಟ್ ಕಣಗಳ ಸಂಖ್ಯೆ ರಕ್ತದಲ್ಲಿ ಗಮನಾರ್ಹವಾಗಿ ಕಡಿಮೆ ಆಗುವುದರಿಂದ ದೇಹದ ಒಳಗಿನ ಭಾಗಗಳಲ್ಲಿ ರಕ್ತಸ್ರಾವ ಉಂಟಾಗುವುದರಿಂದ ಅಪಾಯ ಸಂಭವಿಸಬಹುದು.
ಚಿಕಿತ್ಸೆ: ಡೆಂಘೆ ವೈರಸ್ ರೋಗಾಣುಗಳನ್ನು ಕೊಲ್ಲುವಂತಹ ಯಾವುದೇ ಔಷಧ ಲಭ್ಯವಿಲ್ಲ. ಬಾರದಂತೆ ತಡೆಗಟ್ಟುವ ಲಸಿಕೆ ಇರುವುದಿಲ್ಲ. ಲಕ್ಷಣಗಳನ್ನು ಹೊಂದಿಕೊಂಡು ರೋಗಿಯ ಅವಸ್ಥೆಗೆ ಅನುಸಾರ ನೀಡಬೇಕಾಗುತ್ತದೆ. ರೋಗಿಯು ಪೌಷ್ಟಿಕ ಆಹಾರ ಸೇವನೆ ಹಾಗೂ ದುರಭ್ಯಾಸಗಳಿಂದ ದೂರ ಇರುವ ಮೂಲಕ ಹಾಗೂ ಉತ್ತಮ ಜೀವನ ಶೈಲಿಯಿಂದ ರೋಗನಿರೋಧಕ ಶಕ್ತಿ ಹೊಂದಿದ್ದಲ್ಲಿ ರೋಗದ ತೀವ್ರತೆ ಕಡಿಮೆ ಇರುತ್ತದೆ.
ತಡೆಗಟ್ಟುವಿಕೆ: ಯಾವುದೇ ಜ್ವರ 3 ದಿನಗಳಿಗಿಂತ ಹೆಚ್ಚಿಗೆ ಮುಂದುವರಿದಲ್ಲಿ ಅಸಡ್ಡೆ ಮಾಡದೆ ತಪಾಸಣೆಗೆ ಒಳಪಡಬೇಕು. ವೈದ್ಯರು ನೀಡಿದ ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ವೈದ್ಯರು ಹೇಳಿದಷ್ಟು ದಿನ ಸೇವಿಸಬೇಕು. ಮಲೇರಿಯಾ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಯಲ್ಲಿ ಔಷಧಗಳು ಸದಾ ಲಭ್ಯವಿರುತ್ತದೆ.
ಮಲೇರಿಯಾ ಮತ್ತು ಡೆಂಘೆ ಎರಡು ರೋಗಗಳನ್ನು, ಸೊಳ್ಳೆಗಳ ಉತ್ಪಾದನೆಯನ್ನು ನಿಯಂತ್ರಿಸುವುದರ ಮೂಲಕ ತಡೆಗಟ್ಟಬಹುದು. ಇದಕ್ಕಾಗಿ ಈ ಕೆಳಗಿನ ವಿಧಾನಗಳನ್ನು ಅನುಸರಿಸಬೇಕು.
1. ನೀರಿನ ತೊಟ್ಟಿಗಳು, ಬ್ಯಾರೆಲ್ ಗಳು ,ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿಮಾಡಿ ಸ್ವಚ್ಛ ಪಡಿಸಿ ಮತ್ತೆ ಭರ್ತಿ ಮಾಡುವುದು. ಅವುಗಳನ್ನು ಮುಚ್ಚಳದಿಂದ ಮುಚ್ಚುವುದು.
2. ಬಯಲಿನಲ್ಲಿರುವ ತ್ಯಾಜ್ಯವಸ್ತುಗಳಾದ ಟೈಯರ್ ,ಎಳನೀರಿನ ಚಿಪ್ಪು ,ಒಡೆದ ಬಾಟಲಿ, ಹಳೆಯ ಡಬ್ಬಿಗಳು, ತೆಂಗಿನಕಾಯಿ ಗೆರಟೆ, ನೀರಿನ ಟ್ಯಾಂಕಿ , ತಾರಸಿ ಮನೆಯ ಮೇಲ್ಚಾವಣಿ ಮುಂತಾದವುಗಳಲ್ಲಿ ಮಳೆನೀರು ಸಂಗ್ರಹ ವಾಗದಂತೆ ಎಚ್ಚರಿಕೆವಹಿಸುವುದು ಅಥವಾ ಅವುಗಳಿಗೆ ಸೂಕ್ತ ವಿಲೇವಾರಿ ಮಾಡುವುದು. ಏಕೆಂದರೆ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.
3. ಸೊಳ್ಳೆ ನಿರೋಧಕಗಳು ಹಾಗೂ ಸೊಳ್ಳೆ ಪರದೆಯನ್ನು ಬಳಸುವುದು ಸೊಳ್ಳೆಗಳ ಕಚ್ಚುವಿಕೆ ಯಿಂದ ದೂರವಿರುವುದು, ಇದಕ್ಕಾಗಿ ಶರೀರದ ಭಾಗಗಳನ್ನು ಆದಷ್ಟು ಬಟ್ಟೆಗಳಿಂದ ಮುಚ್ಚುವುದು. ವಿದ್ಯುತ್ ಬೋರ್ಡಿಗೆ ಅಳವಡಿಸುವ ಪರ್ಮಿತ್ರಿನ್ ದ್ರವವು ಸೊಳ್ಳೆಗಳನ್ನು ಸಾಯಿಸುವುದು. ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…