ಹಬ್ಬಗಳೆಂದರೆ ಹೆಣ್ಣು ಮಕ್ಕಳಿಗೆ ಯಾವಾಗಲೂ ಸಂಭ್ರಮವೇ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ವಿಶೇಷತೆಯಿದೆ. ಅದರಲ್ಲೂ ಕರಾವಳಿಯ ಹೆಣ್ಣು ಮಕ್ಕಳಿಗೆ ಸೋಣೆ ತಿಂಗಳೆಂದರೆ ವಿಶೇಷವಾದುದು. ಇದು ಶ್ರಾವಣ ಮಾಸದ ಸಿಂಹ ಸಂಕ್ರಮಣದ ದಿನ., ಸೋಣೆ ಸಂಕ್ರಾಂತಿ ಹೆಂಗೆಳೆಯರಿಗೆ ನೇರವಾಗಿ ಸಂಭಂದಿಸಿದ ವಿಶೇಷವಾದ ಹಬ್ಬ… .
ಹೊಸ್ತಿಲಿಗೆ ರಂಗೋಲಿ ಬರೆದು, ಕುಂಕುಮ, ಅರಶಿನ ಹಚ್ಚಿ ಹೂ ಇಟ್ಟು ನಮಸ್ಕರಿಸಿ ಪೂಜಿಸುವುದು ಸುಮಂಗಲಿಯರು ನಿತ್ಯವೂ ನಿರ್ವಹಿಸುವ ಅಭ್ಯಾಸ. ನಿತ್ಯ ಯಾವುದೇ ಸಾದಾ ಪುಷ್ಪವನ್ನು ಹೊಸಿಲಿಗೆ ಇಟ್ಟು ನಮಸ್ಕರಿಸಲಾಗುತ್ತದೆ. ಆದರೆ ಸೋಣೆ ತಿಂಗಳಲ್ಲಿ ನೈವೇದ್ಯವನ್ನೂ , ಅರ್ಪಿಸಲಾಗುತ್ತದೆ. ಮುಂಜಾನೆಯೇ ಶುಚಿರ್ಭೂತರಾಗಿ, ಹೊಸ್ತಿಲುಗಳನ್ನು ಶುಚಿಗೊಳಿಸಲಾಗುತ್ತದೆ. ಆಮೇಲೆ ಹೊಸ್ತಿಲಿನ ಎರಡೂ ಬದಿಗಳಿಗೆ ರಂಗೋಲಿಗಳನ್ನು ಹಾಕಿ ಹೂಗಳಿಂದ ಸಿಂಗರಿಸಲಾಗುತ್ತದೆ. ಹೂವೆಂದರೆ ಸೋಣೆ ಹೂ( ನೀರುಕಡ್ಡಿ ಹೂ), ಕಾಯಿಹಿಂಡಿಗೆ( ಅರಶಿನ ಬಣ್ಣದ ಹೂ ಇರುವ ಗಿಡ) ಹೂ, ಕೆರಮಣೆ ಸೊಪ್ಪುಗಳನ್ನು ಬಳಸಲಾಗುತ್ತದೆ. ಜೊತೆಗೆ ಹಿಂದಿನ ರಾತ್ರಿಯೇ ಸಿದ್ಧಪಡಿಸಿಟ್ಟು ಕೊಂಡ ಹುರಿದ ಹಲಸಿನ ಬೇಳೆ, ಗೇರುಬೀಜ ಹಾಗೂ ತೆಂಗಿನ ಕಾಯಿ ಒಡೆದು, ಒಂದು ತಂಬಿಗೆ ನೀರುಗಳನ್ನೆಲ್ಲಾ ಇಟ್ಟು ನೈವೇದ್ಯ ಸಲ್ಲಿಸಲಾಗುತ್ತದೆ. ಹೊಸ್ತಿಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲಾಗುತ್ತದೆ. ಸೋಣೆ ತಿಂಗಳುದ್ದಕ್ಕೂ ಹೂಗಳನ್ನಿಟ್ಟು ಅಡ್ಡಬೀಳುವ ಸಂಪ್ರದಾಯವಿದೆ . ಈ ಪದ್ಧತಿಯನ್ನು ಕೆಲವು ಮನೆಗಳಲ್ಲಿ ಇಂದಿಗೂ ಆಚರಿಸುತ್ತಾರೆ. ಆದರೆ ಹಲಸಿನ ಬೀಜ, ಗೇರುಬೀಜಗಳನ್ನು ಸೋಣೆ ಸಂಕ್ರಾಂತಿಯಂದು ಮಾತ್ರ ನೈವೇದ್ಯ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಸೋಣೆ ಹೂ ಹಾಗೂ ಕಾಯಿ ಹಿಂಡಿಗೆ ಹೂಗಳನ್ನು ಇಟ್ಟು ನಮಸ್ಕರಿಸಿ ಮನೆಗೆ, ಮನೆಯವರ ಒಳಿತಿಗಾಗಿ ಹಾರೈಸುವ ಪದ್ಧತಿ ಬಳಕೆಯಲ್ಲಿದೆ.
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…
15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…
ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …