ನ.16ಕ್ಕೆ ಸೋಮನಾಥ್ ಗೌರವ ಡಾಕ್ಟರೇಟ್ ಪದವಿ ಸ್ವೀಕಾರ

November 3, 2019
2:54 PM

ಸುಳ್ಯ : ಸುಳ್ಯದ ಕೇರ್ಪಳ ನಿವಾಸಿ ಸಿ. ಸೋಮನಾಥ್ ಅವರಿಗೆ ಕ್ರೀಡೆ(ಕರಾಟೆ) ಮತ್ತು ಯುವಜನಾಂಗ ಸೇವೆಯಲ್ಲಿ ಮಾಡಿದ ವಿಶೇಷ ಸಾಧನೆಗೆ ಇಂಟರ್ ನ್ಯಾಶನಲ್ ಗೋಬ್ಲಲ್ ಪೀಸ್ ಯುನಿವರ್ಸಿಟಿ(ಯು.ಎಸ್.ಎ) ಪಾಂಡಿಚೇರಿಯಲ್ಲಿ ನ.16ರಂದು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ.

Advertisement
Advertisement

ಇಂಡಿಯನ್ ಅಕಾಡೆಮಿ ಆಫ್ ಮ್ಯಾರ್‌ಟೈಲ್ ಆರ್ಟ್ಸ್ ಮಂಗಳೂರು ಇದರಿಂದ ತನ್ನ ಕರಾಟೆ ಗುರುಗಳಾದ ಕೆ.ಸಿ ಶಿವಾನಂದ ಅವರಿಂದ ಕರಾಟೆ ಶಿಕ್ಷಣ ಪಡೆದು ಕರಾಟೆಯಲ್ಲಿ ಮೂರನೇ ಡ್ಯಾನ್ ಬ್ಲಾಕ್ ಬೆಲ್ಟ್ ಪದವಿ ಪಡೆದಿದ್ದಾರೆ. ಮಹಾತ್ಮ ಗಾಂಧಿ ಸದ್ಬಾವನಾ ಪ್ರಶಸ್ತಿ, ಭಾರತ ಭೂಷಣ ರಾಜ್ಯ ಪ್ರಶಸ್ತಿ, ಕರ್ನಾಟಕ ಭೂಷಣ ಪ್ರಶಸ್ತಿ, ಅಂತರಾಜ್ಯ ಕರಾಟೆ ಪ್ರಶಸ್ತಿ ಪಡೆದುಕೊಂಡಿದ್ದು ಕರಾಟೆಯ ರಾಷ್ಟ್ರಮಟ್ಟದ ತೀರ್ಪುಗಾರರಾಗಿದ್ದಾರೆ. ದ.ಕ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 3200ಕ್ಕೂ ಅಧಿಕ ತನ್ನ ಕರಾಟೆ ಪ್ರದರ್ಶನ ನೀಡಿದ್ದಾರೆ. ಸುಳ್ಯ ಮತ್ತು ಪುತ್ತೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚಿನ ಎಲ್ಲಾ ವಿದ್ಯಾರ್ಥಿ ನಿಲಯದಲ್ಲಿ ಉಚಿತ ಕರಾಟೆ ತರಗತಿ ನೀಡಿದ್ದಾರೆ. ಬ್ರೇಕ್ ಡ್ಯಾನ್ಸ್ ಹಾಗು ಪಿಲ್ಮ್ ಡ್ಯಾನ್ಸ್ ಬಲ್ಲವರಾಗಿದ್ದು ಪಿಲ್ಮ್ ಡ್ಯಾನ್ಸ್ನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ವಿಮಾ ಸಲಹೆಗಾರರಾಗಿ ದುಡಿಯುತ್ತಿದ್ದಾರೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ | ಇಂದಿನಿಂದಲೇ ಮುಂಗಾರು ಆರಂಭ | 8 ದಿನ ಮುಂಚಿತವಾಗಿ ಆರಂಭವಾದ ಮಳೆಗಾಲ |
May 24, 2025
4:43 PM
by: ಮಹೇಶ್ ಪುಚ್ಚಪ್ಪಾಡಿ
ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ
May 24, 2025
11:10 AM
by: ದ ರೂರಲ್ ಮಿರರ್.ಕಾಂ
50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18
May 24, 2025
10:37 AM
by: The Rural Mirror ಸುದ್ದಿಜಾಲ
ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು
May 24, 2025
9:56 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror

Join Our Group